ಚಿಕ್ಕಮಗಳೂರಿನ ಆ ಕುಟುಂಬದ ವನವಾಸಕ್ಕೆ ಮುಕ್ತಿ ನೀಡಿದ ಮಾನವ ಹಕ್ಕು ಹೋರಾಟಗಾರ ಅರುಣ್ ಕುಮಾರ್ ಕಲ್ಗದ್ದೆ…
ಅರುಣ್ ಕುಮಾರ್ ಕಲ್ಗದ್ದೆಯವರು ವಕೀಲರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಂವಿಧಾನಕೊಟ್ಟ ಜೀವಿಸುವ ಹಕ್ಕಿಗೆ ದಕ್ಕೆ ಬಂದಾಗ ಅಸಹಾಯಕರಿಗೆ ಹಲವು ಪ್ರಕರಣಗಳಲ್ಲಿ ನೆರವಾಗಿ ಮಾನವ ಹಕ್ಕುಗಳ ರಕ್ಷಕರಾಗಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
2021ರಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಓರ್ವ ವ್ಯಕ್ತಿಯ ಕುಟುಂಬವನ್ನು ಕ್ಲುಲ್ಲಕ ಕಾರಣ ನೀಡಿ ಗ್ರಾಮಬಹಿಷ್ಕಾರ ಹಾಕಲಾಗಿತ್ತು. ಇದರ ಹಿಂದೆ ಹಲವು ರಾಜಕೀಯ ಮುಖಂಡರ ಕೈವಾಡ ಹೆಚ್ಚಿತ್ತು. ಈ ಕುಟುಂಬ ಕಳೆದ 10 ವರ್ಷದಿಂದ ಬೆಂಗಳೂರಿನಲ್ಲೇ ವಾಸಮಾಡಿಕೊಂಡು ಬಂದಿದೆ.ಊರಿಗೆ ಕಾಲಿಡಲು ಅಲ್ಲಿನ ಪಟ್ಟಭದ್ರ ಹಿತಾಶಕ್ತಿಗಳು ಬಿಡದೇ ಈ ಕುಟುಂಬದ ಆಸ್ತಿಯ‌್ನು ಪ್ರಭಾವಿಗಳು ಕಬಳಿಸಿದ್ದರು. ಊರಿಗೆ ಕಾಲಿಟ್ಟರೇ ಕೊಲ್ಲವ ಬೆದರಿಕೆಯನ್ನು ಹಾಕಲಾಗಿತ್ತು. ಓರ್ವ ವ್ಯಕ್ತಿಗೆ ತನ್ನ ಊರಿಗೆ ಕಾಲಿಡಲು ಬಿಡದೇ , ಸ್ವತಃ ತನ್ನ ಮನೆಗೆ ಪ್ರವೇಶಿಸಲು ಬಿಡದೇ ದೌರ್ಜನ್ಯ ಎಸೆಯಲಾಗಿತ್ತು. ಈ ಕುಟುಂಬಕ್ಕೆ ಆಶಾಕಿರಣವಾಗಿ ಕಂಡಿದ್ದು ಅರುಣ್ ಕುಮಾರ್ ಕಲ್ಗದ್ದೆಯವರು.
ಮಾನವ ಹಕ್ಕುಗಳ ಕುರಿತು ಗಾಡವಾಗಿ ಅಧ್ಯಯನ ಮಾಡಿರೋ ಅರುಣ್ ಕುಮಾರ್ ಅವರು ಅನೇಕ ಜನರ ಮೇಲಿನ ದೌರ್ಜನ್ಯವನ್ನು ತಡೆದಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಅರುಣ್ ಕುಮಾರ್ ಕಲ್ಗದ್ದೆಯವರನ್ನು ಸಂಪರ್ಕಿಸಿ ತಮಗಾದ ಅನ್ಯಾಯವನ್ನು ಚಿಕ್ಕಮಗಳೂರಿನ ಮೂಡಿಗೆರೆ ವ್ಯಕ್ತಿ ಹೇಳಿಕೊಂಡು ನ್ಯಾಯ ಓದಗಿಸುವಂತೆ ಮನವಿ ಮಾಡಿದ್ರು.
ತಕ್ಷಣವೇ ಕಾರ್ಯಪ್ರವೃತ್ತರಾದ ಅರುಣ್ ಕುಮಾರ್ ಅವರು , ಚಿಕ್ಕಮಗಳೂರು ಎಸ್ಪಿಯೊಂದಿಗೆ ಮಾತುಕಥೆ ನಡೆಸಿ ತಕ್ಷಣವೇ ವ್ಯಕ್ತಿಗ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ರು.ಅಲ್ಲದೇ ಈ ಕುಟುಂಬಕ್ಕೆ ತಮ್ಮ ಸ್ವಗ್ರಾಮ ಪ್ರವೇಶೀಸಲು ಸೂಕ್ತ ಭದ್ರತೆ ವ್ಯವಸ್ತೆ ಕಲ್ಲಿಸುವಂತೆ ಸೂಚಿಸಿದ್ರು.ಅರುಣ್ ಕುಮಾರ್ ಮನವಿ ಮೇರೆಗೆ ಚಿಕ್ಕಮಗಳೂರು ಪೊಲೀಸರ ಭದ್ರತೆ ನಡುವೆ ಈ ಕುಟುಂಬಕ್ಕೆ ತಮ್ಮ ಗ್ರಾಮಕ್ಕೆ, ಜಮೀನಿಗೆ ಪ್ರವೇಶ ಸಿಕ್ಕಿತ್ತು. ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಇನ್ನು ಮುಂದೆ ಯಾವುದೇ ರೀತಿಯ ತೊಂದರೆ ಕೊಡದಂತೆ ಗ್ರಾಮಸ್ಥರನ್ನ ಮನವೊಲಿಸಲಾಯ್ತು. ಈ ಮೂಲಕ 10 ವರ್ಷಗಳ ನಂತರ ಆ ಕುಟುಂಬಕ್ಕೆ ತಮ್ಮ ಜಮೀನಿನಲ್ಲೇ ವಾಸಿಸಲು ಅವಕಾಶ ಕಲ್ಪಿಸಲಾಯ್ತು. ಈಗಲೂ ಈ ಕುಟುಂಬ ಮಾನವ ಹಕ್ಕುಗಳ ಹೋರಾಟಗಾರ ಅರುಣ್ ಕುಮಾರ್ ಅವರ ಸಹಾಯವನ್ನು ಸ್ಮರಿಸಿಕೊಳ್ಳುತ್ತಿದೆ.ಹಾಗೇ ಪ್ರತಿಯೊಬ್ಬರ ಜೀವಿಸುವ ಹಕ್ಕುಗಳ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದನ್ನ ಅರುಣ್ ಕುಮಾರ್ ಸಾರಿದ್ದಾರೆ.
Arun Kumar Kalgadde: The human rights activist who freed the exile of that family from Chikkamagaluru…








