ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಕನಸಷ್ಟೆ

1 min read
B S yediyurappa

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಕನಸಷ್ಟೆ

ಬೆಳಗಾವಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಕನಸಷ್ಟೇ. ಅದು ಕನಸಾಗಿಯೇ ಉಳಿಯಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಟಾಂಗ್ ನೀಡಿದ್ದಾರೆ.

ಮೇ 02ರ ಬಳಿಕ ಸಿಎಂ ಬದಲಾಗುತ್ತಾರೆ ಎಂಬ ಯತ್ನಾಳ್ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ನಾಯಕತ್ವ ಬದಲಾವಣೆ ಆಗಲ್ಲ.

ನಾಯಕತ್ವ ಬದಲಾವಣೆ ಕೇವಲ ಕನಸಾಗಿಯೇ ಉಳಿಯಲಿದೆ. ನಮ್ಮದು ಶಿಸ್ತಿನ ಪಕ್ಷ. ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ತೆಗೆದುಕೊಳ್ಳುವ ಮನಸು ನನಗಿಲ್ಲ.

Arun singh

ಆ ವ್ಯಕ್ತಿಯ ಬಗ್ಗೆ ಮಾತನಾಡಿದ್ರೆ ಆತನ ಪ್ರಸಿದ್ಧಿ ಹೆಚ್ಚಾಗುತ್ತೆ. ಮಾಧ್ಯಮಗಳಿಗೆ ಯತ್ನಾಳ್ ಮೇಲೆ ನಂಬಿಕೆ ಇರಬಹುದು.

ಬಿಜೆಪಿಗೆ ಅವರ ಮೇಲೆ ಝೀರೋ ಝೀರೋ ಒನ್ ಪಸೆರ್ಂಟ್ ನಂಬಿಕೆಯೂ ಇಲ್ಲ. ಯತ್ನಾಳ್‍ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಯತ್ನಾಳ್ ಪಕ್ಷದಿಂದ ಹೊರಹಾಕುವಂತ ವ್ಯಕ್ತಿಯೇ ಇದ್ದಾರೆ ಎಂದು ಹೇಳುವ ಮೂಲಕ ಯತ್ನಾಳ್ ಅವರನ್ನ ಪಕ್ಷದಿಂದ ಹೊರಹಾಕುವ ಬಗ್ಗೆ ತಿಳಿಸಿದ ಅರುಣ್ ಸಿಂಗ್, ಯತ್ನಾಳ್ ಬಗ್ಗೆ ಮಾತನಾಡಿ ಪ್ರಸಿದ್ಧಿ ಮಾಡಲು ಇಷ್ಟಪಡಲ್ಲ. ನಮ್ಮ ಮನಸ್ಸಿನಲ್ಲಿರುವ ಸ್ಟ್ರ್ಯಾಟಜಿ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲ್ಲ ಎಂದು ಹೇಳಿದ್ದಾರೆ.

belagavi
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd