ಅನಾಥ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದುಕೊಂಡ ಅರುಣಕುಮಾರ ಕಲ್ಗದ್ದೆ – Saaksha Tv
ಯಾದಗಿರಿ: ಅನಾಥ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದುಕೊಳ್ಳುವ ಮುಖಾಂತರ ಅರುಣಕುಮಾರ ಕಲ್ಗದ್ದೆ ಅವರು ಅನಾಥ ಮಕ್ಕಳ ಪಾಲಿನ ಆಶಾಕಿರಣರಾಗಿದ್ದಾರೆ.
ಶ್ರೀನಿವಾಸ, ಶಿವಕುಮಾರ್ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಈ ಮಕ್ಕಳು ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಇದರಿಂದ ಅವರು ಶಿಕ್ಷಣ ಪಡೆಯಲು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ವಿಷಯವನ್ನು ತಿಳಿದ ಅರುಣಕುಮಾರ ಕಲ್ಗದ್ದೆ ಅವರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದುಕೊಂಡಿದ್ದಾರೆ.
ಮಂಗಳವಾರ 8 ರಂದು ಕರ್ನಾಟಕ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಅರುಣಕುಮಾರ ಕಲ್ಗದ್ದೆ ಅವರು ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲ್ಲೂಕಿನ ಮಾದ್ವಾರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅನಾಥ ಮಕ್ಕಳು ಎಂದು ತಿಳಿದು ಬಂದಿದೆ.

ಆಗ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದ ತಕ್ಷಣ ಅರುಣಕುಮಾರ ಕಲ್ಗದ್ದೆ ಅವರು ಈ ಇಬ್ಬರು ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸಕ್ಕಾಗಿ ಬರುವ ವೆಚ್ಚವನ್ನು ನೀಡುವುದಲ್ಲದೆ ಈ ಇಬ್ಬರನ್ನು ಅವರ ವಿದ್ಯಾಭ್ಯಾಸ ಪೂರ್ಣಗೊಳ್ಳುವವರೆಗು ಶೈಕ್ಷಣಿಕವಾಗಿ ದತ್ತು ಪಡೆದುಕೊಳ್ಳಲು ನಿಶ್ವಯಿಸಿದ್ದಾರೆ.
ಇವರ ಈ ಕಾರ್ಯಕ್ಕೆ ಮಾದ್ವಾರ ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳು ತಿಳಿಸಿದರು .
ಇದೇ ಸಂಧರ್ಭದಲ್ಲಿ ಯಾದಗಿರಿ ತಾಲ್ಲೂಕಿನ ಗೊಂದೆಡಗಿ ಗುರಮಿಠಕಲ್ ತಾಲ್ಲೂಕಿನ ಯಲಸತ್ತಿ, ಕೊಂಕಲ, ಚೆಲೇರಿ ಗ್ರಾಮಗಳಿಗೆ ಭೇಟಿ ನೀಡಿ ಹಿಂದುಳಿದ ಜಾತಿಗಳ ಜನರ ಅಹವಾಲುಗಳನ್ನು ಸ್ವೀಕರಿಸಿ ಕುಂದು ಕೊರತೆಗಳನ್ನು ವಿಚಾರಿಸಿದರು
ಚಲೇರಿ ಗ್ರಾಮದ ಬಹುದಿನಗಳ ಸಮಸ್ಯೆಯಾದ ಗಡಿ ಒತ್ತುವರಿ ಮತ್ತು ದೌರ್ಜನ್ಯದಿಂದ ತೆಲಂಗಾಣದವರು ಅಕ್ರಮ ಮರಳು ಸಾಗಣಿಕೆಯನ್ನು ನಿಲ್ಲಿಸಲು ಸರಕಾರದ ಮಟ್ಟದಲ್ಲಿ ಪ್ರಾಮಣಿಕ ಪ್ರಯತ್ನ ಮಾಡುವೆ ಮತ್ತು ಇದಕ್ಕೆ ಸಂಭಂದಿಸಿದ ಉಸ್ತುವಾರಿ ಸಚಿವರ ಜೊತೆಯಲ್ಲಿ ಹಾಗೂ ಅಧಿಕಾರಿಗಳ ಜೊತೆಯಲ್ಲಿ ಮನವಿ ಮಾಡುತ್ತೇನೆ ಇದಕ್ಕೆ ಶಾಸ್ವತ ಪರಿಹಾರ ಒದಗಿಸಲು ಎಂದು ಅರುಣಕುಮಾರ ಕಲ್ಗದ್ದೆ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ವಿಶ್ವಮಾನವ ಫೌಂಡೇಶನ್ ಸಂಸ್ಥಾಪಕರಾದ ಚಂದ್ರಾವತಿ ಎಸ್ ಅವರು ಮಾತನಾಡಿ ಈ ಇಬ್ಬರ ವಿದ್ಯಾರ್ಥಿಗಳು ಯೋಗ ಕ್ಷೇಮವನ್ನು ನಮ್ಮ ವಿಶ್ವಮಾನವ ಫೌಂಡೇಶನ್ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ವ್ಯವಸ್ಥಾಪಕ ಪ್ರಕಾಶ ಮೊಗವೀರ , ಅಶ್ವಿತ್ ಪೂಜಾರಿ ಉಪ್ಪಳ, ಶಂಕರ ಕಂದಕೂರ , ಶ್ರೀನಿವಾಸ ಕೇಶ್ವಾರ ,ಶಿವಶಂಕರ ಯಲಸತ್ತಿ, ಜಲ್ಲಪ್ಪ ಚಿಂತನಹಳ್ಳಿ, ಪ್ರಭುಲಿಂಗ ಗೊಂದೆಡಗಿ , ಅಂಜನೇಯ ಕಟ್ಟಿಮನಿ ರಾಂಪೂರ ಇದ್ದರು.








