ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಬಿದ್ದಿರುವ ನಟ ಶಾರುಕ್ ಖಾನ್ ಪುತ್ರ ಆರ್ಯಾನ್ ಖಾನ್ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
28 ತಾರೀಕಿನಂದು ಬಾಂಬೆ ಹೈಕೋರ್ಟ್ ಕೆಲವೊಂದು ಷರತ್ತುಗಳನ್ನ ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಆದರೆ ಕೆಲವೊಂದು ದಾಖಲೆಗಳ ಪರಿಶೀಲನೆಗಾಗಿ ಮತ್ತು ವಿಧಿ ವಿಧಾನಗಳನ್ನ ಅನುಸರಿಸುವುದಕ್ಕಾಗಿ ಎರಡು ದಿನಗಳ ನಂತರ ಬಿಡುಗಡೆಯಾಗಿದ್ದಾರೆ.
ನಿನ್ನೆ ನಟಿ ಜೂಹ್ಲಿ ಚಾವ್ಲಾ ಅವರು ಒಂದು ಲಕ್ಷ ರುಪಾಯಿಗಳ ಶ್ಯೂರಿಟಿ ಮತ್ತು ಭದ್ರತೆಗಾಗಿ ದಾಖಲೆಗಳನ್ನ ಪೊಲೀಸರಿಗೆ ತಲುಪಿಸಿದ್ದಾರೆ. ಈ ಬಗ್ಗೆ ಆರ್ಯಾನ್ ಖಾನ್ ಪರ ವಕೀಲರಾದ ಸತೀಶ್ ಮಾನಶಿಂದೆ ಮಾಹಿತಿ ನೀಡಿದರು.

ಅನುಮತಿ ಇಲ್ಲದೆ ದೇಶವನ್ನ ತೊರೆಯಬಾರದು ಇದೇ ರೀತಿಯ ಚಟುವಟಿಕೆಗಲ್ಲಿ ತೊಡಗಬಾರದು ಮಾಧ್ಯಮಗಳ ಜೊತೆ ಮಾತನಾಡಬಾರದು ಸೇರಿದಂತೆ 14 ಷರತ್ತುಗಳನ್ನ ವಿಧಿಸಲಾಗಿದೆ.








