ನೆಹರು ಜನ್ಮದಿನ – ಕಾಂಗ್ರೇಸ್ ನಿಂದ ಗೌರವ ನಮನ

1 min read

 

ಜವಹಾರ್ ಲಾಲ್ ನೆಹರು  ಅವರ 132 ಜಯಂತಿಯ ಅಂಗವಾಗಿ ಗಣ್ಯರು ಶುಭಾಶಯಗಳನ್ನ ಕೋರಿದರು.

1947 ರಲ್ಲಿ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ  ಸ್ವೀಕರಿಸಿದರು. ಅಂದಿನಿಂದ  1964 ರ ಅವರ ಜೀವನದ ಕೊನೆಯ ದಿನಗಳವರೆಗೆ ದೀರ್ಘಕಾಲ ಆಡಳಿತ ನೆಡಸಿದ ಹೆಗ್ಗೆಳಕೆ ನೆಹರು ಅವರದ್ದು.

ಇಂದು ನೆಹರು ಅವರ ಜನ್ಮದಿನಾಚರಣೆಯೆ ಪ್ರಯುಕ್ತ ಕಾಂಗ್ರೇಸ್ ಪಾರ್ಟಿಯ ಸದಸ್ಸರು ಗೌರವ ನಮನ ಸಲ್ಲಿಸಿದರು. ಸೋನಿಯಾ ಗಾಂಧಿಯವರು ರಾಷ್ಟ್ರ ರಾಜಧಾನಿಯಲ್ಲಿರುವ ಶಾಂತಿವನಕ್ಕೆ ತೆರಳಿ ನೆಹರು ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

“ನಮಗೆ ಬೇಕಾಗಿರುವುದು ಶಾಂತಿಯ ಪೀಳಿಗೆ” ಎಂಬ ಜವಾಹರ್​ಲಾಲ್​ ನೆಹರೂ ಅವರ ಮಾತನ್ನು ಉಲ್ಲೇಖಿಸಿ. ನೆಹರು ಅವರು ಮಕ್ಕಳೊಂದಿಗೆ ಇರುವ ಪೋಟೋವನ್ನು  ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ಭಾರತದ ನೆಲದಲ್ಲಿರುವ ಎಲ್ಲಾ ಜನರೂ ಅತ್ಯಂತ ಮುಖ್ಯವಾದವರು. ಭಾರತ್ ಮಾತಾ ಕಿ ಜೈ.. ಅವಳ ಭೂಮಿಯಲ್ಲಿ ವಾಸಿಸುವ ಎಲ್ಲರಿಗೂ ಜೈ” ಎಂದು ನೆಹರು ಮಾತನ್ನ ಉಲ್ಲೇಖೀಸಿ  ಪ್ರಿಯಾಂಕ ವಾದ್ರಾ ಗಾಂಧಿ, ನೆಹರು ರೈತನ ಜೊತೆ ಇರುವ ಚಿತ್ರ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟರ್ ನಲ್ಲಿ ಜವಹಾರ್ ಲಾಲ್ ನೆಹರು ಜನ್ಮ ಜಯಂತಿಗೆ ಟ್ವೀಟರ್ ನಲ್ಲಿ ಶುಭ ಕೋರಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd