Asaduddin owaisi | ಕಾಂಡೋಮ್ ಗಳನ್ನು ಹೆಚ್ಚಾಗಿ ಬಳಸುತ್ತಿರುವವರು ನಾವು
ನವದೆಹಲಿ : ಜನಸಂಖ್ಯೆ ನಿಯಂತ್ರಣ ಕುರಿತಂತೆ ಇತ್ತೀಚೆಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳೀಕೆಗೆ ಸಂಸದ ಅಸಾದುದ್ದೀನ್ ಓವೈಸಿ “ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಕಾಂಡೋಮ್ ಗಳನ್ನು ಹೆಚ್ಚಾಗಿ ಬಳಸುತ್ತಿರುವವರೇ ಮುಸ್ಲಿಮರು” ಎಂದು ತಿರುಗೇಟು ನೀಡಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಸಭೆಯೊಂದರ ವಿಡಿಯೋವನ್ನು ಓವೈಸಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ “ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಬದಲಾಗಿ ಕಡಿಮೆಯಾಗುತ್ತಿಲ್ಲ. ಕಾಂಡೋಮ್ ಅನ್ನು ಯಾರು ಹೆಚ್ಚಾಗಿ ಬಳಸುತ್ತಿರುವವರು ಯಾರು ? ನಾವು. ಈ ಕುರಿತು ಮೋಹನ್ ಭಗವತ್ ಮಾತನಾಡುವುದು ಬೇಕಾಗಿಲ್ಲ ಹೇಳಲಾಗಿದೆ.