ADVERTISEMENT
Saturday, October 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

’60 ದಿನದಲ್ಲಿ 6 ಕೆಜಿ ತೂಕ ಇಳಿಸಿ’, ‘ವಯಸ್ಸಾಗೋದನ್ನ ತಡೆಯಿರಿ’… ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ಬಯಲು ಮಾಡಿದ ASCI

admin by admin
October 30, 2026
in National, Newsbeat, ದೇಶ - ವಿದೇಶ
asci-exposes-misleading-health-supplement-advertisements-a-pill-for-thought-report

asci-exposes-misleading-health-supplement-advertisements-a-pill-for-thought-report

Share on FacebookShare on TwitterShare on WhatsappShare on Telegram

ಆರೋಗ್ಯದ ಕಾಳಜಿಯಿಂದ ನೀವು ಹೆಲ್ತ್ ಸಪ್ಲಿಮೆಂಟ್ಸ್ (ನ್ಯೂಟ್ರಾಸುಟಿಕಲ್ಸ್), ಪ್ರೋಟೀನ್ ಪೌಡರ್ ಅಥವಾ ವಿಟಮಿನ್ ಮಾತ್ರೆಗಳನ್ನು ಖರೀದಿಸುತ್ತಿದ್ದೀರಾ? ಟಿವಿ, ಮೊಬೈಲ್‌ಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಈ ಉತ್ಪನ್ನಗಳು ‘ಮ್ಯಾಜಿಕ್’ ಮಾಡುತ್ತವೆ ಎಂದು ನಂಬಿದ್ದರೆ, ನೀವು ಎಚ್ಚರಗೊಳ್ಳಲೇಬೇಕು!

ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಬಿಡುಗಡೆ ಮಾಡಿರುವ ‘A Pill for Thought’ (ಎ ಪಿಲ್ ಫಾರ್ ಥಾಟ್) ಎಂಬ ಹೊಸ ವರದಿಯಲ್ಲಿ, ಆರೋಗ್ಯ ಮತ್ತು ವೆಲ್‌ನೆಸ್‌ ಉತ್ಪನ್ನಗಳ ಜಾಹೀರಾತುಗಳಲ್ಲಿ ಮಾಡಲಾಗುತ್ತಿರುವ ಸುಳ್ಳು ಭರವಸೆಗಳನ್ನು ಬಯಲಿಗೆಳೆಯಲಾಗಿದೆ.

Related posts

ದಾವಣಗೆರೆಯಲ್ಲಿ ಕೈಗೆ ತಪ್ಪಿತೇ ಮುಸ್ಲಿಂ ಮತಗಳ ಸಾಥ್? ಸೋಲಿನ ಭೀತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಎಸ್‌ಐಆರ್ ಕುರಿತು ಹೇಳಿಕೆಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ: ಅರ್ಹ ಮತದಾರರ ಹೆಸರು ಅಳಿಸುವ ಪ್ರಯತ್ನ ವಿಫಲ ಎಂದ ಸಚಿವ

October 31, 2026
ಬಾಂಬೆ ಡೇಸ್ ಪುಸ್ತಕ ಬಿಡುಗಡೆಗೆ ಬ್ರೇಕ್ ಹಾಕಿದ ಹಳ್ಳಿ ಹಕ್ಕಿ! ರಾಜಕೀಯದ ಗಲೀಜು ಹೊರಬಿದ್ದರೆ ಜನ ಉಗಿಯುತ್ತಾರೆ ಎಂದ ವಿಶ್ವನಾಥ್! ಎನ್‌ಡಿಎ ನಾಯಕರಿಗೆ ವಾರಣಾಸಿ ಸೋಲು ನೆನಪಿಸಿ ಚುಚ್ಚಿದ ಹಿರಿಯ ನಾಯಕ!

ಬಾಂಬೆ ಡೇಸ್ ಪುಸ್ತಕ ಬಿಡುಗಡೆಗೆ ಬ್ರೇಕ್ ಹಾಕಿದ ಹಳ್ಳಿ ಹಕ್ಕಿ! ರಾಜಕೀಯದ ಗಲೀಜು ಹೊರಬಿದ್ದರೆ ಜನ ಉಗಿಯುತ್ತಾರೆ ಎಂದ ವಿಶ್ವನಾಥ್! ಎನ್‌ಡಿಎ ನಾಯಕರಿಗೆ ವಾರಣಾಸಿ ಸೋಲು ನೆನಪಿಸಿ ಚುಚ್ಚಿದ ಹಿರಿಯ ನಾಯಕ!

October 31, 2026

ಜುಲೈನಿಂದ ಸೆಪ್ಟೆಂಬರ್ 2026ರವರೆಗೆ ಎಎಸ್‌ಸಿಐ ಪರಿಶೀಲಿಸಿದ 61 ಜಾಹೀರಾತುಗಳ ಪೈಕಿ ಬರೋಬ್ಬರಿ 60 ಜಾಹೀರಾತುಗಳು ಗ್ರಾಹಕರನ್ನು ದಾರಿತಪ್ಪಿಸುತ್ತಿವೆ ಮತ್ತು ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.

ಯಾವೆಲ್ಲಾ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ?

ʼ60 ದಿನಗಳಲ್ಲಿ 6 ಕೆ.ಜಿ ತೂಕ ಇಳಿಸಿʼ, ʼ12 ವಾರಗಳಲ್ಲಿ ತೊಡೆಯ ಬೊಜ್ಜು ಕರಗಿಸಿʼ, ʼಯುವಿ ಕಿರಣಗಳಿಂದ ಶೇ. 300ರಷ್ಟು ರಕ್ಷಣೆʼ – ಹೀಗೆ ತೂಕ ಇಳಿಕೆ, ವಯಸ್ಸಾಗುವುದನ್ನು ತಡೆಯುವುದು, ಚರ್ಮದ ಕಾಂತಿ ಹೆಚ್ಚಿಸುವ ಜಾಹೀರಾತುಗಳು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಪ್ರಸಾರವಾಗುತ್ತಿವೆ.

ಅಷ್ಟೇ ಅಲ್ಲದೆ, ಕೆಲವೊಂದು ಉತ್ಪನ್ನಗಳು ಅಸ್ತಮಾ, ರಕ್ತದೊತ್ತಡ (ಬಿಪಿ), ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್‌ನಂತಹ ಗಂಭೀರ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಕಂಪನಿಗಳು ಭ್ರಮೆ ಹುಟ್ಟಿಸುತ್ತಿವೆ ಎಂದು ವರದಿ ಹೇಳಿದೆ.

ಕಂಪನಿಗಳು ಜನರನ್ನು ಯಾಮಾರಿಸುವುದು ಹೇಗೆ?

ಎಎಸ್‌ಸಿಐ ವರದಿಯ ಪ್ರಕಾರ, ಈ ಕಂಪನಿಗಳು ಪ್ರಮುಖವಾಗಿ 3 ವಿಧಾನಗಳಲ್ಲಿ ಜನರನ್ನು ಯಾಮಾರಿಸುತ್ತಿವೆ.
ಮೊದಲನೆಯದ್ದು ಅರ್ಧ ಸತ್ಯ. ಉತ್ಪನ್ನದಲ್ಲಿರುವ ಯಾವುದೋ ಒಂದು ಮೂಲವಸ್ತುವಿಗೆ (ಉದಾಹರಣೆಗೆ: ಅಶ್ವಗಂಧ ಅಥವಾ ವಿಟಮಿನ್ ಸಿ) ಒಳ್ಳೆಯ ಗುಣವಿರುತ್ತದೆ. ಆ ಒಂದು ವಸ್ತುವಿನ ಲಾಭವನ್ನೇ ಮುಂದಿಟ್ಟುಕೊಂಡು, ಇಡೀ ಉತ್ಪನ್ನವೇ ಅದ್ಭುತ ಎಂದು ಬಿಂಬಿಸಲಾಗುತ್ತದೆ. ಆದರೆ ಆ ಅಂತಿಮ ಉತ್ಪನ್ನದಿಂದ ನಿಜಕ್ಕೂ ಲಾಭವಿದೆಯೇ ಎಂಬುದಕ್ಕೆ ಕಂಪನಿಗಳ ಬಳಿ ಯಾವುದೇ ಕ್ಲಿನಿಕಲ್ ಸಾಕ್ಷ್ಯಗಳಿರುವುದಿಲ್ಲ.

ಎರಡನೆಯದ್ದು ಸಾಕ್ಷ್ಯವಿಲ್ಲದ ಹೋಲಿಕೆ. “ನಮ್ಮ ಉತ್ಪನ್ನ ಇತರರಿಗಿಂತ ವೇಗವಾಗಿ ಕೆಲಸ ಮಾಡುತ್ತದೆ”, “ಬಹಳ ಎಫೆಕ್ಟಿವ್” ಎಂದು ಹೇಳುತ್ತಾರೆ. ಆದರೆ ಯಾರಿಗೆ ಅಥವಾ ಯಾವ ಉತ್ಪನ್ನಕ್ಕೆ ಹೋಲಿಸಿ ಈ ಮಾತು ಹೇಳುತ್ತಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇರುವುದಿಲ್ಲ.

ಮೂರನೆಯದ್ದು ಸುಳ್ಳು ಬಿಫೋರ್-ಆಫ್ಟರ್ ಫೋಟೋಗಳು ಮತ್ತು ಎಸ್ಕೇಪ್ ತಂತ್ರ. ಗ್ರಾಹಕರನ್ನು ಸೆಳೆಯಲು ನಕಲಿ ‘ಬಿಫೋರ್-ಆಫ್ಟರ್’ ಫೋಟೋಗಳನ್ನು ಬಳಸಲಾಗುತ್ತಿದೆ. ವಿಪರ್ಯಾಸವೆಂದರೆ, ಎಸ್‌ಸಿಐ ಈ ಬಗ್ಗೆ ಸಾಕ್ಷ್ಯ ಕೇಳಿ ನೋಟಿಸ್ ನೀಡಿದಾಗ, 31 ಕಂಪನಿಗಳು ಯಾವುದೇ ಸಾಕ್ಷ್ಯ ಒದಗಿಸಲು ವಿಫಲವಾಗಿವೆ. ಹಲವು ಕಂಪನಿಗಳು ಸಾಕ್ಷ್ಯ ನೀಡುವ ಬದಲು ತಮ್ಮ ಜಾಹೀರಾತುಗಳನ್ನೇ ದಿಢೀರ್ ಹಿಂಪಡೆದಿವೆ.

ಭಾರೀ ದೊಡ್ಡ ಮಾರುಕಟ್ಟೆ

ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾದಂತೆ, ರೋಗ ಬರುವ ಮುನ್ನವೇ ತಡೆಯಬೇಕು ಎಂಬ ಉದ್ದೇಶದಿಂದ ನ್ಯೂಟ್ರಾಸ್ಯುಟಿಕಲ್ಸ್ (ಆರೋಗ್ಯ ವರ್ಧಕಗಳು) ಬಳಕೆ ಹೆಚ್ಚಾಗಿದೆ. 2025ರ ಹೊತ್ತಿಗೆ ಭಾರತದಲ್ಲಿ ಈ ಮಾರುಕಟ್ಟೆ 38.77 ಬಿಲಿಯನ್ ಡಾಲರ್ ಮೌಲ್ಯ ತಲುಪಿದ್ದು, 2033ರ ವೇಳೆಗೆ ಇದು ಬರೋಬ್ಬರಿ 1,151.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ಅಂದಾಜಿದೆ. ಇದೇ ಕಾರಣಕ್ಕೆ ಕಂಪನಿಗಳು ಆಕರ್ಷಕ ಜಾಹೀರಾತುಗಳ ಮೊರೆ ಹೋಗುತ್ತಿವೆ.

“ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಉತ್ಪನ್ನಗಳನ್ನು ಖರೀದಿಸುತ್ತಾರೆ. ದಿಢೀರ್ ತೂಕ ಇಳಿಕೆ ಅಥವಾ ವಯಸ್ಸಾಗುವಿಕೆಯನ್ನು ತಡೆಯುವಂತಹ ಜಾಹೀರಾತುಗಳನ್ನು ನೀಡುವಾಗ, ಕಂಪನಿಗಳು ಅದಕ್ಕೆ ತಕ್ಕ ಬಲವಾದ ವೈಜ್ಞಾನಿಕ ಪುರಾವೆಗಳನ್ನು ನೀಡಲೇಬೇಕು. ಯಾವುದೋ ಒಂದು ಕಚ್ಚಾವಸ್ತುವಿನ ಗುಣವನ್ನು ಇಡೀ ಉತ್ಪನ್ನದ ಗುಣ ಎಂದು ಹೇಳಬಾರದು. ಕಂಪನಿಗಳ ಜಾಹೀರಾತಿನ ಭರವಸೆಗಳು ಸಾಕ್ಷ್ಯಾಧಾರಿತವಾಗಿರಬೇಕು, ಗ್ರಾಹಕರ ನಂಬಿಕೆಯನ್ನು ಒಡೆಯಬಾರದು,” ಎಂದು ಎಎಸ್‌ಸಿಐ ಸಿಇಒ ಮನೀಶಾ ಕಪೂರ್ ಎಚ್ಚರಿಸಿದ್ದಾರೆ.

ಗ್ರಾಹಕರಿಗೆ ಪಾಠ

ಟಿವಿಯಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಬರುವ ಜಾಹೀರಾತುಗಳನ್ನು ನೋಡಿ, ದಿಢೀರ್ ಮ್ಯಾಜಿಕ್ ನಡೆಯುತ್ತದೆ ಎಂದು ನಂಬಿ ಸಾವಿರಾರು ರೂಪಾಯಿ ಸುರಿದು ಹೆಲ್ತ್ ಸಪ್ಲಿಮೆಂಟ್ಸ್ ಖರೀದಿಸುವ ಮುನ್ನ ಗ್ರಾಹಕರು ಎಚ್ಚರ ವಹಿಸುವುದು ಅತ್ಯಗತ್ಯ.

ShareTweetSendShare
Join us on:

Related Posts

ದಾವಣಗೆರೆಯಲ್ಲಿ ಕೈಗೆ ತಪ್ಪಿತೇ ಮುಸ್ಲಿಂ ಮತಗಳ ಸಾಥ್? ಸೋಲಿನ ಭೀತಿಯಲ್ಲಿ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಎಸ್‌ಐಆರ್ ಕುರಿತು ಹೇಳಿಕೆಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ: ಅರ್ಹ ಮತದಾರರ ಹೆಸರು ಅಳಿಸುವ ಪ್ರಯತ್ನ ವಿಫಲ ಎಂದ ಸಚಿವ

by Shwetha
October 31, 2026
0

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಇದೀಗ ತಮ್ಮ ಹೇಳಿಕೆಗೆ...

ಬಾಂಬೆ ಡೇಸ್ ಪುಸ್ತಕ ಬಿಡುಗಡೆಗೆ ಬ್ರೇಕ್ ಹಾಕಿದ ಹಳ್ಳಿ ಹಕ್ಕಿ! ರಾಜಕೀಯದ ಗಲೀಜು ಹೊರಬಿದ್ದರೆ ಜನ ಉಗಿಯುತ್ತಾರೆ ಎಂದ ವಿಶ್ವನಾಥ್! ಎನ್‌ಡಿಎ ನಾಯಕರಿಗೆ ವಾರಣಾಸಿ ಸೋಲು ನೆನಪಿಸಿ ಚುಚ್ಚಿದ ಹಿರಿಯ ನಾಯಕ!

ಬಾಂಬೆ ಡೇಸ್ ಪುಸ್ತಕ ಬಿಡುಗಡೆಗೆ ಬ್ರೇಕ್ ಹಾಕಿದ ಹಳ್ಳಿ ಹಕ್ಕಿ! ರಾಜಕೀಯದ ಗಲೀಜು ಹೊರಬಿದ್ದರೆ ಜನ ಉಗಿಯುತ್ತಾರೆ ಎಂದ ವಿಶ್ವನಾಥ್! ಎನ್‌ಡಿಎ ನಾಯಕರಿಗೆ ವಾರಣಾಸಿ ಸೋಲು ನೆನಪಿಸಿ ಚುಚ್ಚಿದ ಹಿರಿಯ ನಾಯಕ!

by Shwetha
October 31, 2026
0

ರಾಜ್ಯ ರಾಜಕಾರಣದ ಅತ್ಯಂತ ಕರಾಳ ಅಧ್ಯಾಯ ಎನ್ನಲಾದ 2019ರ ಆಪರೇಷನ್ ಕಮಲದ ತೆರೆಮರೆಯ ಸತ್ಯಗಳನ್ನು ಬಿಚ್ಚಿಡಲಿದೆ ಎಂದು ನಿರೀಕ್ಷಿಸಲಾಗಿದ್ದ ಬಾಂಬೆ ಡೇಸ್ ಪುಸ್ತಕ ಈಗ ಅಂತರಾಳದಲ್ಲೇ ಮೌನವಾಗಿದೆ....

ಎಸ್‌ಐಆರ್ ‘ಕೈ’ ಗೆ ಕಗ್ಗಂಟು-ಸತೀಶ್ ಜಾರಕಿಹೊಳಿ ಎಸ್‌ಐಆರ್ ಸಮರ್ಥನೆಗೆ ಪ್ರಿಯಾಂಕ್ ಖರ್ಗೆ ಕೌಂಟರ್: ಕೈ ನಾಯಕರಲ್ಲೇ ಶುರುವಾಯ್ತು ತದ್ವಿರುದ್ಧ ವಾದ!

ಎಸ್‌ಐಆರ್ ‘ಕೈ’ ಗೆ ಕಗ್ಗಂಟು-ಸತೀಶ್ ಜಾರಕಿಹೊಳಿ ಎಸ್‌ಐಆರ್ ಸಮರ್ಥನೆಗೆ ಪ್ರಿಯಾಂಕ್ ಖರ್ಗೆ ಕೌಂಟರ್: ಕೈ ನಾಯಕರಲ್ಲೇ ಶುರುವಾಯ್ತು ತದ್ವಿರುದ್ಧ ವಾದ!

by Shwetha
October 31, 2026
0

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಇಬ್ಬರು ಪ್ರಭಾವಿ ಸಚಿವರ ನಡುವೆ ಈಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂದರೆ ಎಸ್‌ಐಆರ್ ವಿಚಾರವಾಗಿ ಬಹಿರಂಗ ಯುದ್ಧವೊಂದು ಶುರುವಾಗಿದೆ. ಚುನಾವಣಾ...

ಗ್ಯಾರಂಟಿ ಯೋಜನೆಗಳ ನೈಜ ಪರಿಣಾಮ ತಿಳಿಯಲು ಸರ್ಕಾರದ ಸಮೀಕ್ಷೆ: ‘ಕೆ-ಮಾನಿಟರ್’ಗೆ ₹14 ಕೋಟಿ ಅನುಮೋದನೆ

ಗ್ಯಾರಂಟಿ ಯೋಜನೆಗಳ ನೈಜ ಪರಿಣಾಮ ತಿಳಿಯಲು ಸರ್ಕಾರದ ಸಮೀಕ್ಷೆ: ‘ಕೆ-ಮಾನಿಟರ್’ಗೆ ₹14 ಕೋಟಿ ಅನುಮೋದನೆ

by Shwetha
October 31, 2026
0

ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳು ಜನರ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಿವೆ ಎಂಬುದನ್ನು ತಿಳಿಯಲು...

ಗೆದ್ದಾಗ ಇವಿಎಂ ಚೆಂದ ಸೋತಾಗ ಮತಪತ್ರ ಬೇಕೆ?ಸಂಸತ್ ವಿಸರ್ಜನೆಯ ಮಾತು ಬಿಡಿ ಮೊದಲು ಕರ್ನಾಟಕದಲ್ಲಿ ಗೆದ್ದು ತೋರಿಸಿ:ಕಾಂಗ್ರೆಸ್ ಇಬ್ಬಂದಿ ನೀತಿಗೆ ಅಶೋಕ್ ತಿರುಗೇಟು!

ಗೆದ್ದಾಗ ಇವಿಎಂ ಚೆಂದ ಸೋತಾಗ ಮತಪತ್ರ ಬೇಕೆ?ಸಂಸತ್ ವಿಸರ್ಜನೆಯ ಮಾತು ಬಿಡಿ ಮೊದಲು ಕರ್ನಾಟಕದಲ್ಲಿ ಗೆದ್ದು ತೋರಿಸಿ:ಕಾಂಗ್ರೆಸ್ ಇಬ್ಬಂದಿ ನೀತಿಗೆ ಅಶೋಕ್ ತಿರುಗೇಟು!

by Shwetha
October 31, 2026
0

ರಾಷ್ಟ್ರ ರಾಜಕಾರಣದ ಅಂಗಳದಲ್ಲಿ ಈಗ ಇವಿಎಂ ಮತ್ತು ಬ್ಯಾಲೆಟ್ ಪೇಪರ್ ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ಸಂಸತ್ತನ್ನು ವಿಸರ್ಜಿಸಿ ಕೇವಲ ಮತಪತ್ರಗಳ ಮೂಲಕವೇ ಚುನಾವಣೆ ನಡೆಸಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram