CM ಸ್ಥಾನದಿಂದ ಗ್ಲೇಹೋಟ್ ಕೆಳಗಿಳಿಯುವ ಸಾಧ್ಯತೆ, ಶಶಿ ತರೂರ್ ಗೆ CWC ಹುದ್ದೆ..
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದವರು ಸ್ಪರ್ದಿಸುವುದಿಲ್ಲ ಎನ್ನುವುದ ಪಕ್ಕ ಆಗುತ್ತಿದ್ದಂತೆ ರಾಜಸ್ಥಾನದ ಸಿ ಎಂ ಅಶೋಕ್ ಗ್ಲೇಹೋಟ್ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಫಿಕ್ಸ್ ಅದಂತಿದೆ. ಆದರೆ ರಾಹುಲ್ ಗಾಂಧಿ ಒಬ್ಬ ವ್ಯಕ್ತಿ ಒಂದು ಹುದ್ದೆ ಎಂದು ಹೇಳಿರುವುದರಿಂದ ಅಶೋಕ್ ಸಿ ಎಂ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.
ಇನ್ನೂ ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ಲೆಕ್ಕಿಸಿದೇ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯೂಸಿ) ಸ್ಥಾನ ಪಡೆಯಬಹುದು. ಈ ವಾರದ ಆರಂಭದಲ್ಲಿ ಎಐಸಿಸಿ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಶಶಿ ತರೂರ್ ಅವರು ಜಿ 23 ಗುಂಪಿನೊಂದಿಗೆ ಇದ್ದಾಗಲೂ ಗಾಂಧಿ ಕುಟುಂಬದೊಂದಿಗೆ ಆತ್ಮೀಯ ಒಡನಾಟವಾನ್ನ ಮುಂದುವರೆಸಿಕೊಂಡಿದ್ದರು. ಗಾಂಧಿ ಕುಟುಂಬ ಸಹ ಅವರ ಸಾಮರ್ಥ್ಯದ ಬಗ್ಗೆ ಅರಿವಿದೆ. ಇಂಥ ಸಂದರ್ಭದಲ್ಲಿ ತರೂರ್ ಕಾಂಗ್ರೆಸ್ ತೊರೆದರೆ ಪಕ್ಷಕ್ಕೆ ಆಗಬಹುದಾದ ಹಾನಿಯ ಬಗ್ಗೆಯೂ ತಿಳಿದಿರುತ್ತೆ. ಹಾಗಾಗಿ ತರೂರ್ ಅವರನ್ನ ಉತ್ತಮ ಮನಸ್ಥಿತಿಯಲ್ಲಿರಿಸಲು CWC ಸ್ಥಾನ ನಿಡುವ ಸಾಧ್ಯತೆ ಹೆಚ್ಚಿರುತ್ತೆ.
ರಾಜಸ್ಥಾನ ಸಿಎಂ ಸ್ಥಾನದಿಂದ ಅಶೋಕ್ ಗೆಹ್ಲೋಟ್ ಕೆಳಗಿಳಿಯುವುದು ಪಕ್ಕಾ ಆಗಿದೆ. ಹುದ್ದೆಯಿಂದ ಕೆಳಗಿಳಿಸಲು ಮನವೊಲಿಸುವಲ್ಲಿ ಗಾಂಧಿ ಕುಟುಂಬ ಯಶಸ್ವಿಯಾಗಿದ್ದು, ಆ ಸ್ಥಾನ ಸಚಿನ್ ಪೈಲಟ್‌ಗೆ ಹಸ್ತಾಂತರಿಸಿದೆ. ಒಪ್ಪಂದದ ಪ್ರಕಾರ ಎಐಸಿಸಿ ಚುನಾವಣೆ ವೇಳೆಗೆ ಗೆಹ್ಲೋಟ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರನ್ನು ಸಿಎಂ ಮಾಡಲು 71 ವರ್ಷ ವಯಸ್ಸಿನ ಅಶೋಕ್ ಗೆಹ್ಲೋಟ್ ಮಾಡಿದ ತಂತ್ರಗಳು ಫಲ ನೀಡಲಿಲ್ಲ.
“ಎರಡೂ ಹುದ್ದೆಗಳನ್ನು ನಿಭಾಯಿಸಬಲ್ಲೆ ಎಂದು ರಾಹುಲ್‌ಗೆ ಮನವರಿಕೆ ಮಾಡಿಕೊಡಲು ಗೆಹ್ಲೋಟ್ ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. . ಪ್ರಿಯಾಂಕಾ ಗಾಂಧಿ ಕೂಡ ಪೈಲಟ್ ಸಿಎಂ ಆಗಬೇಕೆಂದು ಹಠ ಹಿಡಿದಿದ್ದರು. ಉದಯಪುರ ಚಿಂತನ ಶಿಬಿರದಲ್ಲಿ ಕೈಗೊಂಡ ‘ಒಬ್ಬ ವ್ಯಕ್ತಿ, ಒಂದೇ ಹುದ್ದೆ’ ನಿರ್ಧಾರವನ್ನು ಪ್ರಸ್ತಾಪಿಸಿದ ರಾಹುಲ್ ಕೊಚ್ಚಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
“2018 ರಲ್ಲಿ ಗೆಹ್ಲೋಟ್ ಮೂರನೇ ಬಾರಿಗೆ ಸಿಎಂ ಆದ ನಂತರದಿಂದ ಸಚಿನ್ ಪೈಲಟ್ ರಾಜಸ್ಥಾನ ಕಾಂಗ್ರೆಸ್ ನಿಂದ ಹಿಂದೆ ಸರಿದಿದ್ದರು. ರಾಜಕೀಯವಾಗಿ ಸೈಡ್ ಲೈನ್ ಆಗಿದ್ದ ಸಚಿನ್ ರನ್ನ ಈ ಮೂಲಕ ಮತ್ತೆ ಮುನ್ನಲೆಗೆ ತರಲಿದೆ ಕಾಂಗ್ರೆಸ್..
ಹೊಸ ಎಐಸಿಸಿ ಮುಖ್ಯಸ್ಥರು ಯಾರೇ ಆಗಲಿ, ಅದು ಕೇವಲ ಸಾಂಸ್ಥಿಕ ಹುದ್ದೆಯಲ್ಲ ಬದಲಾಗಿ ಸೈದ್ಧಾಂತಿಕ ಹುದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.