ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಹೀಗೆ ಮಾಡಿದರೆ ಅನಗತ್ಯ ಟೆಸ್ಟ್‌, ಶಸ್ತ್ರಚಿಕಿತ್ಸೆಯ ಭಯವೇ ಇರಲ್ಲ! ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮಹತ್ವದ ಸಲಹೆ ನೀಡಿದ ದಿಗ್ಗಜ ಉದ್ಯಮಿ

admin by admin
November 19, 2026
in National, Newsbeat, ದೇಶ - ವಿದೇಶ
ashok-soota-healthcare-reforms-unnecessary-medical-tests-surgeries-happiest-health

ashok-soota-healthcare-reforms-unnecessary-medical-tests-surgeries-happiest-health

Share on FacebookShare on TwitterShare on WhatsappShare on Telegram

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ವೈದ್ಯರನ್ನು ಪ್ರತಿ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆಗೆ ಹಣ ಪಡೆಯುವ ಗುತ್ತಿಗೆದಾರರಂತೆ ಪರಿಗಣಿಸುವ ಬದಲು, ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಿರುವ ಪೂರ್ಣಾವಧಿ ವೇತನದಾರ ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳಬೇಕು ಎಂದು ದಿಗ್ಗಜ ಉದ್ಯಮಿ, ಹ್ಯಾಪಿಯೆಸ್ಟ್ ಹೆಲ್ತ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂತಾ ಪ್ರತಿಪಾದಿಸಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಗುರುವಾರ ನಡೆದ ಎರಡು ದಿನಗಳ ‘ರೀಇಮ್ಯಾಜಿನಿಂಗ್ ಆ್ಯಂಡ್ ರೀಫಾರ್ಮಿಂಗ್ ಹೆಲ್ತ್‌ಕೇರ್ ಇನ್ ಇಂಡಿಯಾ’ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

ರೋಗಿಗಳ ಸುರಕ್ಷತೆ ಮತ್ತು ಆರೈಕೆಯಲ್ಲಿ ವೈದ್ಯರೇ ಅತ್ಯಂತ ಪ್ರಮುಖರಾಗಿದ್ದರೂ, ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಅವರನ್ನು ಮಾತ್ರ ಗುತ್ತಿಗೆದಾರರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಸೂತಾ ಹೇಳಿದರು.

Related posts

levista-coffee-new-brand-identity-kodagu-elephant-logo-taste-the-joy-of-coorg

ಕೊಡಗಿನ ಆನೆ ಲಾಂಛನದೊಂದಿಗೆ ಹೊಸ ರೂಪ ಪಡೆದ ಲೆವಿಸ್ಟಾ, ಮಾರುಕಟ್ಟೆ ವಿಸ್ತರಣೆಗೆ ಭರ್ಜರಿ ಪ್ಲ್ಯಾನ್‌

November 19, 2026
time-100-next-india-list-2026-alia-bhatt-pawan-chandan-emerging-indian-leaders

ಮೊದಲ ಅಂತಾರಾಷ್ಟ್ರೀಯ ‘ಟೈಮ್ 100 ನೆಕ್ಸ್ಟ್’ ಪಟ್ಟಿಯಲ್ಲಿ 100 ಉದಯೋನ್ಮುಖ ಭಾರತೀಯರು: ಮಿಂಚಿದ ಆಲಿಯಾ ಭಟ್, ಸ್ಕೈರೂಟ್‌ನ ಪವನ್ ಚಂದನ

November 19, 2026

ವೈದ್ಯರ ಆದಾಯವು ಅವರು ಮಾಡುವ ಪರೀಕ್ಷೆಗಳು, ಸ್ಕ್ಯಾನಿಂಗ್ ಮತ್ತು ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಅವಲಂಬಿಸಿರುವುದರಿಂದ ಸಹಜವಾಗಿಯೇ ಹೆಚ್ಚಿನ ಚಿಕಿತ್ಸೆಗಳತ್ತ ನಿರ್ಧಾರಗಳು ವಾಲುತ್ತವೆ; ಇದು ನೈತಿಕ ದೋಷವಲ್ಲ, ಬದಲಿಗೆ ಆದಾಯದ ಲೆಕ್ಕಾಚಾರದ ಪರಿಣಾಮವಾಗಿದೆ ಎಂದ ಅವರು, “ಬಹುತೇಕ ವೈದ್ಯರು ಪ್ರಾಮಾಣಿಕರಾಗಿದ್ದರೂ, ಶೇ. 2ರಿಂದ 5ರಷ್ಟು ಮಂದಿ ಹೆಚ್ಚುವರಿ ಹಣದ ಆಸೆಗೆ ಒಳಗಾದರೂ ಅನಾವಶ್ಯಕ ಚಿಕಿತ್ಸೆಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ,” ಎಂದರು.

ಸುಮಾರು ನಾಲ್ಕು ವರ್ಷಗಳ ಹಿಂದೆ ತಮ್ಮನ್ನು ಪರೀಕ್ಷಿಸದೆಯೇ ಹೃದ್ರೋಗ ತಜ್ಞರೊಬ್ಬರು ಸಿಟಿ ಆ್ಯಂಜಿಯೋಗ್ರಾಮ್ ವರದಿ ನೋಡಿ ಶೇ. 50ರಷ್ಟು ಬ್ಲಾಕೇಜ್ ಇದೆ, ತುರ್ತು ಶಸ್ತ್ರಚಿಕಿತ್ಸೆ ಬೇಕು ಎಂದಿದ್ದನ್ನು ಸ್ಮರಿಸಿದ ಅವರು, ಎರಡನೇ ಅಭಿಪ್ರಾಯ ಪಡೆದಾಗ ಅದು ಸಣ್ಣ ರಕ್ತನಾಳದಲ್ಲಷ್ಟೇ ಇತ್ತು ಎಂಬುದು ತಿಳಿದು ಸ್ಟ್ರೆಸ್ ಟೆಸ್ಟ್‌ನಲ್ಲಿ ಸಾಮಾನ್ಯ ವರದಿ ಬಂದಿತ್ತು ಎಂದು ತಮ್ಮ ಕಹಿ ಅನುಭವ ಹಂಚಿಕೊಂಡರು.

ಗುತ್ತಿಗೆದಾರರಾಗಿದ್ದಾಗ ವೈದ್ಯರ ತೆರಿಗೆ ಪ್ರಮಾಣ ಶೇ. 20ರ ಆಸುಪಾಸಿನಲ್ಲಿದ್ದರೆ, ಉದ್ಯೋಗಿಗಳಾದರೆ ಶೇ. 35ರಷ್ಟಾಗುತ್ತದೆ. ಈ ತೆರಿಗೆ ಹೊರೆಯನ್ನು ಸರಿದೂಗಿಸಲು ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಎಲ್ಲಾ ವೈದ್ಯರಿಗೆ ಪೂರ್ಣಾವಧಿ ವೇತನ, ಸಂಸ್ಥೆಯಲ್ಲಿ ಷೇರು ಪಾಲು ಹಾಗೂ ಹಿಂದಿನ ವೇತನಕ್ಕಿಂತ ಶೇ. 20ರಿಂದ 40ರಷ್ಟು ಹೆಚ್ಚು ಸಂಬಳ ನೀಡುತ್ತಿದೆ; ಇದರಿಂದ ಕಂಪನಿಯ ಲಾಭಾಂಶ ಕಡಿಮೆಯಾದರೂ ಚಿಂತೆಯಿಲ್ಲ ಎಂದು ಸೂತಾ ಸ್ಪಷ್ಟಪಡಿಸಿದರು.

ವಿಮೆ ವ್ಯವಸ್ಥೆಯ ಬದಲಾವಣೆಗೆ ಆಗ್ರಹ

ಇನ್ನು ಆರೋಗ್ಯ ವಿಮೆಯು ಸ್ಕ್ಯಾನಿಂಗ್ ಮತ್ತು ಹೊರರೋಗಿ ಪರೀಕ್ಷೆಗಳಿಗೆ ದುಬಾರಿ ಹೆಚ್ಚುವರಿ ಪ್ರೀಮಿಯಂ ವಿಧಿಸುವ ಮೂಲಕ ಆರಂಭಿಕ ರೋಗ ಪತ್ತೆಗೆ ಅಡ್ಡಿಯಾಗುತ್ತಿದೆ ಎಂದ ಅವರು, ಪೂರ್ಣ ದೇಹದ ತಪಾಸಣೆ ಹೊರತುಪಡಿಸಿ ವೈದ್ಯರು ಶಿಫಾರಸು ಮಾಡುವ ಪರೀಕ್ಷೆಗಳಿಗೂ ಒಂದೇ ಪ್ರೀಮಿಯಂನಲ್ಲಿ ವಿಮೆ ಸಿಗುವಂತಾಗಬೇಕು ಹಾಗೂ ಕಾರ್ಪೊರೇಟ್ ಕಂಪನಿಗಳು ವಿಮಾ ಸಂಸ್ಥೆಗಳಿಂದ ಇಂತಹ ಪಾಲಿಸಿಗಳನ್ನು ಕೇಳಿ ಪಡೆಯಬೇಕು ಎಂದು ಸಲಹೆ ನೀಡಿದರು.

2027ರ ಮೇ 13ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (ಡಿಪಿಡಿಪಿ) ನಿಯಮಗಳ ಪಾಲನೆಯು ಮೂಲಭೂತ ಅಗತ್ಯವಾಗಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳದ ಸಂಸ್ಥೆಗಳು ಶೀಘ್ರದಲ್ಲೇ ದೊಡ್ಡ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಎಚ್ಚರಿಸಿದ ಸೂತಾ, ಎಐ ಏಜೆಂಟ್‌ಗಳು ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಭದ್ರತಾ ವ್ಯವಸ್ಥೆಗೆ ಸವಾಲು ಒಡ್ಡುವ ಮುನ್ನವೇ ಕಾನೂನಿಗಿಂತ ವೇಗವಾಗಿ ಹೆಜ್ಜೆ ಇಡಬೇಕು ಎಂದರು.

ಇದೇ ವೇಳೆ ಮಾತನಾಡಿದ ಹ್ಯಾಪಿಯೆಸ್ಟ್‌ ಹೆಲ್ತ್‌ನ ಸಿಟಿಒ ಸಿಟಿಒ ಮೈಥಿಲಿ ಕಂದುಲ, ರೋಗಿಗಳು ತಮ್ಮ ವೈಯಕ್ತಿಕ ದತ್ತಾಂಶದ ಬಳಕೆಯನ್ನು ನಿಯಂತ್ರಿಸಲು ಒಪ್ಪಿಗೆ ನಿರ್ವಹಣಾ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಹ್ಯಾಪಿಯೆಸ್ಟ್ ಹೆಲ್ತ್ ನವೆಂಬರ್ 12ರಂದು ‘ಹ್ಯಾಪಿಯೆಸ್ಟ್ ಡಿಜಿಟಲ್ ಹೆಲ್ತ್’ ಘಟಕವನ್ನು ಆರಂಭಿಸಿದ್ದು, ಮುಂದಿನ 5 ವರ್ಷಗಳಲ್ಲಿ 500 ಕೋಟಿ ರೂ. ಹೂಡಿಕೆಯೊಂದಿಗೆ 18 ತಿಂಗಳಲ್ಲಿ 11 ಆ್ಯಪ್‌ಗಳನ್ನು ತರಲಿದೆ. ಜೊತೆಗೆ ರೋಗಿಗಳ ಆರೋಗ್ಯ ಇತಿಹಾಸ ತಿಳಿದಿರುವ ‘ವೈಯಕ್ತಿಕ ವೈದ್ಯರ’ ಮಾದರಿ ಹಾಗೂ ‘ಅತಿಥಿ ಮಿತ್ರ’ ಆರೈಕೆ ವ್ಯವಸ್ಥೆಯನ್ನೂ ಪರಿಚಯಿಸುತ್ತಿದೆ.

ನೈತಿಕ ಚಿಕಿತ್ಸೆ ಮತ್ತು ಫಲಿತಾಂಶ ಆಧಾರಿತ ಆರೋಗ್ಯ ವ್ಯವಸ್ಥೆಯ ಕುರಿತ ಗೋಷ್ಠಿಯಲ್ಲಿ ಆಸ್ತ್ರಿಕಾ ಮಿಡ್‌ವೈಫರಿ ಸೆಂಟರ್‌ನ ಡಾ. ಜಾಹ್ನವಿ ನಿಲೇಕಣಿ, ವೈಸಾ ಸಂಸ್ಥಾಪಕಿ ಜೋ ಅಗರ್ವಾಲ್ ಹಾಗೂ ಈವನ್ ಹಾಸ್ಪಿಟಲ್ಸ್‌ನ ಡಾ. ಚಂದ್ರಿಕಾ ಕಂಬಂ ಪಾಲ್ಗೊಂಡಿದ್ದರು.
ಶೃಂಗಸಭೆಯಲ್ಲಿ ಡಾ. ದೇವಿ ಶೆಟ್ಟಿ, ನಚಿಕೇತ್ ಮೋರ್ ಮತ್ತು ಶರದ್ ಶರ್ಮಾ ಸೇರಿದಂತೆ ಹಲವು ತಜ್ಞರು ಭಾಗವಹಿಸಿದ್ದರು.

ಬೆಂಗಳೂರಿನ ಇಂದಿರಾನಗರ, ವೈಟ್‌ಫೀಲ್ಡ್, ಜಯನಗರ ಹಾಗೂ ಕೋರಮಂಗಲದಲ್ಲಿ ಆಸ್ಪತ್ರೆ-ರಹಿತ ವಿಶೇಷ ಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ ಹ್ಯಾಪಿಯೆಸ್ಟ್ ಹೆಲ್ತ್, ಶೀಘ್ರದಲ್ಲೇ ಜೆ.ಪಿ. ನಗರದಲ್ಲಿ ಸರ್ಜಿಕಲ್ ಸ್ಪೆಷಾಲಿಟಿ ಸೆಂಟರ್ ಮತ್ತು ಕೋರಮಂಗಲದಲ್ಲಿ ನರರೋಗ-ಮನೋವಿಜ್ಞಾನದ ‘ಬ್ರೇನ್‌ಸ್ಪಿಯರ್’ ಕೇಂದ್ರವನ್ನು ಆರಂಭಿಸಲಿದೆ.

ShareTweetSendShare
Join us on:

Related Posts

levista-coffee-new-brand-identity-kodagu-elephant-logo-taste-the-joy-of-coorg

ಕೊಡಗಿನ ಆನೆ ಲಾಂಛನದೊಂದಿಗೆ ಹೊಸ ರೂಪ ಪಡೆದ ಲೆವಿಸ್ಟಾ, ಮಾರುಕಟ್ಟೆ ವಿಸ್ತರಣೆಗೆ ಭರ್ಜರಿ ಪ್ಲ್ಯಾನ್‌

by admin
November 19, 2026
0

ಬೆಂಗಳೂರು: ಕರ್ನಾಟಕ ಮೂಲದ ಪ್ರಮುಖ ಕಾಫಿ ಬ್ರ್ಯಾಂಡ್‌ ‘ಲೆವಿಸ್ಟಾ ಕಾಫಿ’ ಕೊಡಗಿನ ಕಾಫಿ ಪರಂಪರೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಬ್ರ್ಯಾಂಡ್ ವಿನ್ಯಾಸ, ಲೋಗೋ, ಆಕರ್ಷಕ ಪ್ಯಾಕೇಜಿಂಗ್ ಹಾಗೂ ‘ಟೇಸ್ಟ್...

time-100-next-india-list-2026-alia-bhatt-pawan-chandan-emerging-indian-leaders

ಮೊದಲ ಅಂತಾರಾಷ್ಟ್ರೀಯ ‘ಟೈಮ್ 100 ನೆಕ್ಸ್ಟ್’ ಪಟ್ಟಿಯಲ್ಲಿ 100 ಉದಯೋನ್ಮುಖ ಭಾರತೀಯರು: ಮಿಂಚಿದ ಆಲಿಯಾ ಭಟ್, ಸ್ಕೈರೂಟ್‌ನ ಪವನ್ ಚಂದನ

by admin
November 19, 2026
0

ಪ್ರತಿಷ್ಠಿತ 'ಟೈಮ್' ನಿಯತಕಾಲಿಕೆಯು ತನ್ನ ಮೊದಲ ಅಂತಾರಾಷ್ಟ್ರೀಯ 'ಟೈಮ್ 100 ನೆಕ್ಸ್ಟ್' (TIME100 Next) ಪಟ್ಟಿಯನ್ನು ಪ್ರಕಟಿಸಿದ್ದು, ವ್ಯಾಪಾರ, ವಿಜ್ಞಾನ, ಕ್ರೀಡೆ ಮತ್ತು ಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ...

bengaluru-garbage-city-congress-government-administrative-failure-r-ashokagovernment-farmers-protest-sugarcane-price-belagavi

ಬೆಂಗಳೂರು ಕಸದ ನಗರ – ಆರ್.ಅಶೋಕ್ ಆಕ್ರೋಶ 

by admin
November 19, 2026
0

ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರಿಗೆ ಕಳೆದ ಐದು ತಿಂಗಳಿಂದ ಹಣ ಪಾವತಿಯಾಗಿಲ್ಲ. ಇದರಿಂದ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯವಾಗದ...

asha-workers-15000-promise-congress-priyanka-gandhi-karnataka-government

ಆಶಾ ಕಾರ್ಯಕರ್ತೆಯರಿಗೆ ನೀಡಿದ ₹15,000 ಭರವಸೆ ಈಡೇರಿಸಲಿ

by admin
November 19, 2026
0

ಆಶಾ ಕಾರ್ಯಕರ್ತೆಯರಿಗೆ ₹15,000 ನೀಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಇಂದು ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ....

garanti-hesarinali-janara-mele-teri-ge-congress-sarkara-arthika-divalitanadatta-r-ashoka

ಗ್ಯಾರಂಟಿ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹೊರೆ, ಕಾಂಗ್ರೆಸ್‌ ಸರ್ಕಾರ ಆರ್ಥಿಕ ದಿವಾಳಿತನದತ್ತ: ಪ್ರತಿಪಕ್ಷ ನಾಯಕ ಆರ್.ಅಶೋಕ

by admin
November 19, 2026
0

ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿ, ಮತ್ತೊಂದೆಡೆ ತೆರಿಗೆ ಹಾಗೂ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವ ಕಾಂಗ್ರೆಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram