ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಪದವಿ ವಿದ್ಯಾರ್ಥಿಗಳಿಗೆ ಬಂಪರ್ ಅವಕಾಶ: 500 ಸ್ಕಾಲರ್‌ಶಿಪ್, ಪೂರ್ಣ ಶುಲ್ಕ ವಿನಾಯಿತಿಗೆ ಅರ್ಜಿ ಆಹ್ವಾನಿಸಿದ ಅಶೋಕ ವಿವಿ

admin by admin
November 16, 2026
in ದೇಶ - ವಿದೇಶ, National, Newsbeat
ashoka-university-admission-2027-500-scholarships-full-tuition-fee-waiver

ashoka-university-admission-2027-500-scholarships-full-tuition-fee-waiver

Share on FacebookShare on TwitterShare on WhatsappShare on Telegram

ಹೊಸದಿಲ್ಲಿ: ಇಲ್ಲಿನ ಪ್ರತಿಷ್ಠಿತ ಸಂಶೋಧನಾ ಕೇಂದ್ರಿತ ಅಶೋಕ ವಿಶ್ವವಿದ್ಯಾಲಯವು 2027ನೇ ಸಾಲಿನ ಪದವಿ ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 7ರಿಂದಲೇ ಬಹು ಸುತ್ತಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಸುತ್ತಿನ ಅರ್ಜಿ ಸಲ್ಲಿಕೆಗೆ ನವೆಂಬರ್ 23, 2026 ಕೊನೆಯ ದಿನಾಂಕವಾಗಿದೆ.

ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಲು ವಿಶ್ವವಿದ್ಯಾಲಯವು ಒಟ್ಟು 500 ವಿದ್ಯಾರ್ಥಿವೇತನಗಳನ್ನು ಘೋಷಿಸಿದ್ದು, ಕಂಪ್ಯೂಟರ್ ಸೈನ್ಸ್ ಮತ್ತು ವಿಜ್ಞಾನ ವಿಷಯಗಳ ಅಧ್ಯಯನಕ್ಕೆ ವಿಶೇಷ ಒತ್ತು ನೀಡಿದೆ.

Related posts

shiftlife-anti-spike-daily-modicare-glucose-control

ಇಷ್ಟದ ಆಹಾರ ಸೇವಿಸಿಯೂ ದೇಹದಲ್ಲಿ ಗ್ಲೂಕೋಸ್ ನಿಯಂತ್ರಣ: ಇದಕ್ಕಾಗಿ ಬಂದಿದೆ ವಿಶಿಷ್ಟ ‘ಶಿಫ್ಟ್‌ಲೈಫ್ ಆ್ಯಂಟಿ-ಸ್ಪೈಕ್ ಡೈಲಿ’

November 16, 2026
vyapara-abhivruddhigagi-ondu-tantra-business-growth-remedies

Astro- ವ್ಯಾಪಾರ ಅಭಿವೃದ್ಧಿಗಾಗಿ ಈ ಒಂದು ತಂತ್ರ..!!

November 16, 2026

ಒಟ್ಟು 500 ವಿದ್ಯಾರ್ಥಿವೇತನಗಳ ಪೈಕಿ 200 ಪ್ರತಿಭಾ ಆಧಾರಿತ ಮತ್ತು 300 ಅಗತ್ಯ ಆಧಾರಿತ ವಿದ್ಯಾರ್ಥಿವೇತನಗಳಿವೆ. ಈ ಬಾರಿ ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಅಧ್ಯಯನ ಮಾಡಲು ಬಯಸುವ 50 ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ ಹೊಸದಾಗಿ ‘ಅಶೋಕ ರಾಷ್ಟ್ರೀಯ ವಿಜ್ಞಾನ ಪ್ರತಿಭಾ ವಿದ್ಯಾರ್ಥಿವೇತನ’ ಪರಿಚಯಿಸಲಾಗಿದೆ.

ಐಐಟಿ-ಜೆಇಇ, ಐಐಎಸ್‌ಇಆರ್, ಸಿಎಂಐ ಪ್ರವೇಶ ಪರೀಕ್ಷೆಗಳು ಹಾಗೂ ಭಾರತೀಯ ರಾಷ್ಟ್ರೀಯ ಒಲಿಂಪಿಯಾಡ್‌ಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಇದರಡಿ ಶೇ. 100ರಷ್ಟು ಬೋಧನಾ ಶುಲ್ಕ ವಿನಾಯಿತಿ ಸಿಗಲಿದೆ.

ಇದಲ್ಲದೆ ಸಿಬಿಎಸ್‌ಇ ಅಥವಾ ಐಎಸ್‌ಸಿ ಪರೀಕ್ಷೆಗಳಲ್ಲಿನ ಅಂಕಗಳು ಇಲ್ಲವೇ ‘ಅಶೋಕ ಮ್ಯಾಥಮೆಟಿಕ್ಸ್ ಚಾಲೆಂಜ್’ ಹಾಗೂ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆಯಲ್ಲಿನ ಪ್ರದರ್ಶನದ ಆಧಾರದ ಮೇಲೆ ಇನ್ನೂ 150 ಪ್ರತಿಭಾ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ.

ಇನ್ನು ಆರ್ಥಿಕ ನೆರವಿನ ಅಗತ್ಯವಿರುವ 300 ವಿದ್ಯಾರ್ಥಿಗಳಿಗೆ ಕುಟುಂಬದ ಆದಾಯ, ಉಳಿತಾಯ, ಹೂಡಿಕೆ ಹಾಗೂ ಶೈಕ್ಷಣಿಕ ಸಾಲದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ ಅಗತ್ಯ ಆಧಾರಿತ ಯೋಜನೆಯಡಿ ಶೇ. 100ರವರೆಗೆ ಬೋಧನಾ ಶುಲ್ಕ ಅಥವಾ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತದೆ.

ಆರ್ಥಿಕ ಕಾರಣದಿಂದ ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಅಶೋಕ ವಿವಿಯು ತನ್ನ ಸ್ಥಾಪನೆಯಿಂದ ಈವರೆಗೆ 854 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನಗಳನ್ನು ಮೀಸಲಿಟ್ಟಿದ್ದು, 5,900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಪ್ರಸ್ತುತ ಕ್ಯಾಂಪಸ್‌ನಲ್ಲಿರುವ ಶೇ. 42ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ.

2026ರ ಪ್ರವೇಶಾತಿ ಸಾಲಿನಲ್ಲಿ 16 ದೇಶಗಳು, ಭಾರತದ 26 ರಾಜ್ಯಗಳು ಹಾಗೂ 162 ನಗರಗಳ ಒಟ್ಟು 509 ಶಾಲೆಗಳಿಂದ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದರು. ಇದರಲ್ಲಿ ಕುಟುಂಬದ ಮೊದಲ ತಲೆಮಾರಿನ 89 ಕಾಲೇಜು ವಿದ್ಯಾರ್ಥಿಗಳು ಹಾಗೂ ಕಲಿಕೆ, ಬೌದ್ಧಿಕ, ದೈಹಿಕ, ಮಾನಸಿಕ ಆರೋಗ್ಯ ಮತ್ತು ಶ್ರವಣ ಸಂಬಂಧಿತ ವಿಶೇಷ ಅಗತ್ಯವುಳ್ಳ 33 ವಿದ್ಯಾರ್ಥಿಗಳು ಸೇರಿದ್ದರೆ, ಆ ಬ್ಯಾಚ್‌ನ ಶೇ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿತ್ತು.

2014ರಲ್ಲಿ ಹರಿಯಾಣ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಯಡಿ ಲಾಭದ ಉದ್ದೇಶವಿಲ್ಲದ ಸಂಸ್ಥೆಯಾಗಿ ಸ್ಥಾಪನೆಯಾದ ಅಶೋಕ ವಿವಿಯಲ್ಲಿ ಸದ್ಯ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು (ಶೇ. 4ರಷ್ಟು ವಿದೇಶಿ ಹಾಗೂ 100ಕ್ಕೂ ಹೆಚ್ಚು ವಿಶೇಷಚೇತನ ವಿದ್ಯಾರ್ಥಿಗಳು ಸೇರಿ) ಮತ್ತು 20ಕ್ಕೂ ಅಧಿಕ ಉತ್ಕೃಷ್ಟತಾ ಕೇಂದ್ರಗಳಿದ್ದು, ಸಾರ್ವಜನಿಕ ಆರೋಗ್ಯ, ಇಂಧನ ಪರಿವರ್ತನೆ, ಡಿಜಿಟಲೀಕರಣ ಹಾಗೂ ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.

ಪ್ರವೇಶಾತಿ, ಅರ್ಹತೆ ಮತ್ತು ವಿದ್ಯಾರ್ಥಿವೇತನದ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಅಶೋಕ ವಿವಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ShareTweetSendShare
Join us on:

Related Posts

shiftlife-anti-spike-daily-modicare-glucose-control

ಇಷ್ಟದ ಆಹಾರ ಸೇವಿಸಿಯೂ ದೇಹದಲ್ಲಿ ಗ್ಲೂಕೋಸ್ ನಿಯಂತ್ರಣ: ಇದಕ್ಕಾಗಿ ಬಂದಿದೆ ವಿಶಿಷ್ಟ ‘ಶಿಫ್ಟ್‌ಲೈಫ್ ಆ್ಯಂಟಿ-ಸ್ಪೈಕ್ ಡೈಲಿ’

by admin
November 16, 2026
0

ಬೆಂಗಳೂರು: ಬಿಸಿ ಬಿಸಿ ಪರಾಠಾ, ಗರಿಗರಿಯಾದ ದೋಸೆ, ಘಮಘಮಿಸುವ ಬಿರಿಯಾನಿ ಹಾಗೂ ಸಿಹಿ ತಿನಿಸುಗಳೆಂದರೆ ಭಾರತೀಯರಿಗೆ ಅಚ್ಚುಮೆಚ್ಚು. ಆದರೆ ಕಾರ್ಬೋಹೈಡ್ರೇಟ್‌ಯುಕ್ತ ಇಂತಹ ಆಹಾರ ಸೇವಿಸಿದ ನಂತರ ರಕ್ತದಲ್ಲಿನ...

vyapara-abhivruddhigagi-ondu-tantra-business-growth-remedies

Astro- ವ್ಯಾಪಾರ ಅಭಿವೃದ್ಧಿಗಾಗಿ ಈ ಒಂದು ತಂತ್ರ..!!

by admin
November 16, 2026
0

​"ನಮಸ್ತೆ, ಬಂಧುಗಳೇ. ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು, ಬಿಸಿನೆಸ್ ಗ್ರೋತ್ ಆಗ್ಬೇಕು ಅಪ್ಪಾ ಅಂದ್ರೆ, ಬಹಳಷ್ಟು ಜನರ ಕೆಟ್ಟ ಕಣ್ಣಿನ ದೃಷ್ಟಿ ಬಿದ್ದು ವ್ಯಾಪಾರದಲ್ಲಿ ಏಳಿಗೆ ಆಗ್ತಾ ಇಲ್ಲಪ್ಪಾ...

ಈ ದೇವಸ್ಥಾನಕ್ಕೆ ಒಂದು ಬಾರಿ ದರ್ಶನ ಮಾಡಿದರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ

by admin
November 16, 2026
0

ಈ ದೇವಸ್ಥಾನಕ್ಕೆ ಒಂದು ಬಾರಿ ದರ್ಶನ ಮಾಡಿದರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!! ಬೆಂಗಳೂರಿನಲ್ಲಿ ಇರುವಂತಹ ಆಂಜನೇಯ ದೇವಸ್ಥಾನಕ್ಕೆ ನೀವು...

nakshatra-yavudu-rashi-yavudu-27-nakshatra-12-rashi-list

ನಕ್ಷತ್ರ ಯಾವುದು? ರಾಶಿ ಯಾವುದು?

by admin
November 16, 2026
0

ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳು ಮತ್ತು 12 ರಾಶಿಗಳಿವೆ. ಆದರೆ ಯಾವ ನಕ್ಷತ್ರವು ಯಾವ ರಾಶಿಗೆ ಸೇರಿದೆ ಎಂಬ ಸ್ಪಷ್ಟ ಅರಿವು ಅನೇಕರಿಗೆ ಇರುವುದಿಲ್ಲ. ಪ್ರತಿಯೊಂದು ನಕ್ಷತ್ರವೂ ನಾಲ್ಕು...

ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!

ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!

by Shwetha
November 16, 2026
0

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಬೆವರು ಸುರಿಸಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ತಾವು ಕೆಲಸ ಮಾಡುವ ಕಾರ್ಖಾನೆಗಳ ಸಮೀಪದಲ್ಲೇ ಗುಣಮಟ್ಟದ ಹಾಗೂ ಸುಸಜ್ಜಿತ ವಸತಿ ಸೌಕರ್ಯ ಕಲ್ಪಿಸುವ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram