Kapil ದಾಖಲೆ ಮುರಿಯಲು ಅಶ್ವಿನ್ ಗೆ ಬೇಕು 5 ವಿಕೆಟ್
ಏಪ್ರಿಲ್ 4 ರಂದು ಮೊಹಾಲಿಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ. ಈ ಪಂದ್ಯದಲ್ಲಿ ಅಶ್ವಿನ್ ಇನ್ನೂ ಐದು ವಿಕೆಟ್ ಪಡೆದರೆ, ದಿಗ್ಗಜ ಆಲ್ ರೌಂಡರ್ ಕಪಿಲ್ ದೇವ್ ದಾಖಲೆ ಮುರಿಯಲಿದ್ದಾರೆ.
ಕಪಿಲ್ 131 ಟೆಸ್ಟ್‌ಗಳಲ್ಲಿ 434 ವಿಕೆಟ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಕೇವಲ 84 ಮ್ಯಾಚ್ ಗಳಲ್ಲಿ 430 ವಿಕೆಟ್ ಗಳನ್ನು ತೆಗೆದು ಕಪಿಲ್ ನಂತರದ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಅಶ್ವಿನ್.. ಕಪಿಲ್ ದಾಖಲೆ ಮುರಿಯುವುದರ ಜೊತೆಗೆ ಮತ್ತಿಬ್ಬರ ದಾಖಲೆಗಳನ್ನು ಚಿಂದಿ ಉಡಾಯಿಸಲಿದ್ದಾರೆ.
ಇನ್ನೂ ಎರಡು ವಿಕೆಟ್‌ಗಳನ್ನು ಪಡೆದರೆ ನ್ಯೂಜಿಲೆಂಡ್‌ನ ಮಾಜಿ ವೇಗಿ ರಿಚರ್ಡ್ ಹ್ಯಾಡ್ಲಿ (86 ಟೆಸ್ಟ್‌ಗಳಲ್ಲಿ 431 ವಿಕೆಟ್‌ಗಳು), ಮೂರು ವಿಕೆಟ್ ಪಡೆದರೇ ಶ್ರೀಲಂಕಾದ ಮಾಜಿ ಸ್ಪಿನ್ನರ್ ರಂಗನಾ ಹೆರಾತ್ (93 ಟೆಸ್ಟ್‌ಗಳಲ್ಲಿ 433 ವಿಕೆಟ್‌ಗಳು) ಅವರನ್ನು ಹಿಂದಿಕ್ಕಲಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (133 ಟೆಸ್ಟ್‌ಗಳಲ್ಲಿ 800 ವಿಕೆಟ್) ಮೊದಲ ಸ್ಥಾನದಲ್ಲಿದ್ದಾರೆ.
ಆಸೀಸ್ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ (145 ಟೆಸ್ಟ್‌ಗಳಲ್ಲಿ 708 ವಿಕೆಟ್) ಮತ್ತು ಜೇಮ್ಸ್ ಆಂಡರ್ಸನ್ (169 ಟೆಸ್ಟ್‌ಗಳಲ್ಲಿ 640 ವಿಕೆಟ್) ಮೊದಲ ಮೂರು ಸ್ಥಾನದಲ್ಲಿದ್ದರೆ, ಅಶ್ವಿನ್ ಪ್ರಸ್ತುತ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.