Asia cup 2022 | ಇದೆಂಥಾ ವರ್ತನೆ… ಮೈದಾನದಲ್ಲಿ ಹೊಡೆದಾಟ
ಏಷ್ಯಾಕಪ್ 2022ರ ಸೂಪರ್ ನಾಲ್ಕರ ಭಾಗವಾಗಿ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಒಂದು ವಿಕೆಟ್ ಅಂತರದೊಂದಿಗೆ ಗೆಲುವು ಸಾಧಿಸಿದೆ.
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸಮರದಲ್ಲಿ ಪಾಕ್ ತಂಡದ ಐದನೇ ಕ್ರಮಾಂಕದ ನಸೀಮ್ ಷಾ.. ಕೊನೆಯ ಓವರ್ ನಲ್ಲಿ ಎರಡು ಸಿಕ್ಸರ್ ಗಳನ್ನು ಸಿಡಿಸಿ ಪಾಕ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಅಲ್ಲಿಯವರೆಗೂ ಆಫ್ಘಾನ್ ಕೈಯಲ್ಲಿದ್ದ ಪಂದ್ಯ ಕೊನೆಯ ಓವರ್ ನಲ್ಲಿ ಕೈ ಜಾರಿ ಹೋಯ್ತು.

ಆದ್ರೆ ಇದಕ್ಕೂ ಮುನ್ನಾ 19ನೇ ಓವರ್ ನಲ್ಲಿ ನಾಲ್ಕನೇ ಎಸೆತಕ್ಕೆ ಸಿಕ್ಸರ್ ಸಿಡಿಸಿ ಜೋಷ್ ನಲ್ಲಿದ್ದ ಪಾಕ್ ಬ್ಯಾಟರ್ ಆಸಿಫ್ ಅಲಿ, ಆ ನಂತರದ ಎಸೆತದಲ್ಲಿ ಅವರು ಔಟ್ ಆದ್ರು.
ಇದರೊಂದಿಗೆ ಆಫ್ಘಾನ್ ಬೌಲರ್ ಫರಿದ್ ಅಹ್ಮದ್ ಅವರನ್ನು ಬ್ಯಾಟ್ ನಿಂದ ಹೊಡೆಯಲು ಮುಂದಾಗಿದ್ದರು. ಇದರಲ್ಲಿ ಫರಿದ್ ತಪ್ಪು ಕೂಡ ಇದೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.