asia-cup-2022 | ಏಷ್ಯಾಕಪ್ ಗೆ ಮಹಿಳಾ ಟೀಂ ಇಂಡಿಯಾ ಪ್ರಕಟ
ಅಕ್ಟೋಬರ್ ಒಂದರಿಂದ ಆರಂಭವಾಗಲಿರುವ ಮಹಿಳಾ ಏಷ್ಯಾಕಪ್ ಟಿ 20 ಟೂರ್ನಿಗಾಗಿ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ.
15 ಮಂದಿ ಸದಸ್ಯರ ತಂಡಕ್ಕೆ ಹರ್ಮನ್ ಪ್ರಿತ್ ನಾಯಕತ್ವವಹಿಸಿದ್ದಾರೆ. ಸ್ಮೃತಿ ಮಂದಾನ ವೈಸ್ ಕ್ಯಾಪ್ಟನ್ ಆಗಿದ್ದಾರೆ.
ಸದ್ಯ ಇಂಗ್ಲೆಂಡ್ ವಿರುದ್ಧ ಸೆಣಸುತ್ತಿರುವ ಸದಸ್ಯರೇ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ಟೂರ್ ಗೆ ದೂರವಾಗಿದ್ದ ಜೆಮಿಯಾ ರೌಡ್ರಿಗ್ಸ್ ಮತ್ತೆ ತಂಡ ಸೇರಿಕೊಂಡಿದ್ದಾರೆ.
ರೇಣುಕಾ ಸಿಂಗ್, ಮೇಘನಾ ಸಿಂಗ್, ಪೂಜಾ ವಸ್ತ್ರಕರ್ ವೇಗದ ವಿಭಾಗದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಸ್ನೇಹ್ ರಾಣಾ ಸ್ಪಿನ್ನರ್ ಗಳಾಗಿದ್ದಾರೆ.
🚨 NEWS 🚨: Team India (Senior Women) squad for ACC Women’s T20 Championship announced. #TeamIndia | #WomensAsiaCup | #AsiaCup2022
More Details 🔽 https://t.co/iQBZGVo5SK pic.twitter.com/k6VJyRlRar
— BCCI Women (@BCCIWomen) September 21, 2022
ಇನ್ನು ಆಲ್ ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ಇದ್ದಾರೆ.
ಬ್ಯಾಟಿಂಗ್ ನಲ್ಲಿ ಸ್ಮೃತಿ ಮಂದಾನ, ಷಫಾಲಿ ವರ್ಮಾ, ಸೆಬ್ಬಿನೇನಿ ಮೇಘುನ್, ದಯಾಲನ್ ಹೇಮಲತಾ, ಕೆಪಿ ನೆವಿಗರ್ ಇದ್ದಾರೆ. ಇನ್ನು ತಾಂತಿಯಾ ಬಾಟಿಯಾ, ಸಿಮ್ರನ್ ದಿಲ್ ಬಹದೂರ್ ಸ್ಟಾಂಡ್ ಬೈ ಆಟಗಾರಾಗಿದ್ದಾರೆ.
ಏಷ್ಯಾಕಪ್ ಗೆ ಟೀಂ ಇಂಡಿಯಾ ಹೀಗಿದೆ : ಹರ್ಮನ್ ಪ್ರಿತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಷಫಾಲಿ ವರ್ಮಾ, ಜೆಮಿಯಾ ರೋಡ್ರಿಗ್ಸ್, ಸಬ್ಬಿನೆನಿ ಮೇಘುನ, ರಿಚಾ ಘೋಷ್, ಸ್ನೇಹ್ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ರಾಜೇಶ್ವರಿ ವಸ್ತ್ರಾಕರ್, ಪೂಜಾ ವಸ್ತ್ರಾಕಾರ್, ರಾಧಾ ಯಾದವ್, ಕೆ.ಪಿ.ನವಗಿರ್