ಟಿ 20ಯಲ್ಲಿ ಅಫ್ಘಾನ್ ಕ್ಯಾಪ್ಟನ್ ಕೆಟ್ಟ ದಾಖಲೆ
ಏಷ್ಯಾಕಪ್ ಭಾಗವಾಗಿ ಸೂಪರ್ 4 ರ ಭಾಗವಾಗಿ ಪಾಕಿಸ್ತಾನ ತಂಡದ ವಿರುದ್ಧ ನಡೆದ ಪಂದ್ಯ ಅಫ್ಘಾನಿಸ್ತಾನ್ ತಂಡದ ನಾಯಕ ಮೊಹ್ಮದ್ ನಬಿ ನೂರನೇ ಮ್ಯಾಚ್ ಆಗಿದೆ.
ಸಾಧಾರಣವಾಗಿ ಒಬ್ಬ ಕ್ರಿಕೆಟರ್ ಗೆ ನೂರನೇ ಪಂದ್ಯ ಅಂದ್ರೆ ಭಾರಿ ಮಹತ್ವದ್ದಾಗಿರುತ್ತದೆ.
ಹೇಗಾದ್ರೂ ಮಾಡಿ ಆ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಪ್ಲೇಯರ್ ಪ್ರಯತ್ನಿಸುತ್ತಾನೆ.
ಅಂತಹ ನಬಿ ಪ್ರತಿಷ್ಟೆಯ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದಾರೆ.
ಇದರೊಂದಿಗೆ ನಬಿ ಟಿ 20 ಕ್ರಿಕೆಟ್ ನಲ್ಲಿ ಕೆಟ್ಟ ದಾಖಲೆಯನ್ನು ಬರೆದಿದ್ದಾರೆ.
ಟಿ 20ಯಲ್ಲಿ ನೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್ ಆದ ಮೊದಲ ಆಟಗಾರ ಮೊಹ್ಮದ್ ನಬಿ.
ಇನ್ನು ನಬಿ ಸತತ ಎಂಟು ಪಂದ್ಯಗಳಲ್ಲಿ ಸಿಂಗಲ್ ಅಂಕಿಗೆ ಔಟ್ ಆಗಿದ್ದಾರೆ.
ಕೊನೆಯದಾಗಿ ಆಡಿದ ಎಂಟು ಟಿ 20 ಪಂದ್ಯದಲ್ಲಿ ನಬಿ 5,9,6,5,0,8,1,0 ಇವೆ. ಇದರಲ್ಲಿ ಎರಡು ಗೋಲ್ಡನ್ ಡಕ್ ಗಳಿವೆ. Asia cup 2022 mohammad-nabi-worst-record