Asia Cup 2022 | ಕೊಹ್ಲಿ ದಾಖಲೆಯನ್ನ ಬ್ರೇಕ್ ಮಾಡಿದ ರೋಹಿತ್
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಪೈಪೋಟಿಗೆ ಬಿದ್ದಂತೆ ಒಬ್ಬರ ದಾಖಲೆಗಳನ್ನು ಮತ್ತೊಬ್ಬರು ಬ್ರೇಕ್ ಮಾಡೋದೋ ಅಥವಾ ಸರಿಗಟ್ಟುವುದೋ ಮಾಡುತ್ತಿದ್ದಾರೆ.
ಅದರಂತೆ ಏಷ್ಯಾಕಪ್ ಭಾಗವಾಗಿ ನಿನ್ನೆ ನಡೆದ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಈ ಸೀನ್ ಮತ್ತೊಮ್ಮೆ ರಿಪೀಟ್ ಆಗಿದೆ.
ಮೊದಲ ಭಾರತದ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಅತ್ಯಧಿಕ ಟಿ 20 ಅರ್ಧಶತಕಗಳ ದಾಖಲೆಯನ್ನ ಬ್ರೇಕ್ ಮಾಡಿದರು.

ಹಾಂಗ್ ಕಾಂಗ್ ಮೇಲೆ ರೋಹಿತ್ ಶರ್ಮಾ ಸಾರಥ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಮೋಸ್ಟ್ ಸಕ್ಸಸ್ ಫುಲ್ ಇಂಡಿಯನ್ ಕ್ಯಾಪ್ಟನ್ ದಾಖಲೆಯನ್ನ ಬ್ರೇಕ್ ಮಾಡಿದರು.
ಹಾಂಗ್ ಕಾಂಗ್ ಮೇಲಿನ ಗೆಲುವಿನೊಂದಿಗೆ ರೋಹಿತ್ ಶರ್ಮಾ ಸಾರಥ್ಯದಲ್ಲಿ 37 ಮ್ಯಾಚ್ ಗಳಲ್ಲಿ 31 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ವಿರಾಟ್ ಕೊಹ್ಲಿ ನಾಯಕರಾಗಿ 50 ಟಿ 20 ಪಂದ್ಯಗಳಲ್ಲಿ 30 ರಲ್ಲಿ ಗೆಲುವು ಸಾಧಿಸಿದ್ದರು.
ಟಿ 20 ಯಲ್ಲಿ ಟೀಂ ಇಂಡಿಯಾದ ಮೋಸ್ಟ್ ಸಕ್ಸಸ್ ಫುಲ್ ನಾಯಕರಾಗಿ ಎಂ ಎಸ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ 72 ಪಂದ್ಯಗಳಲ್ಲಿ 41 ಗೆಲುವುಗಳನ್ನು ಕಂಡಿದ್ದಾರೆ.








