Asia Cup 2022 : ದೀಪಕ್ ಚಹಾರ್ ಗೆ ಪ್ರಮೋಷನ್
ಟೀಂ ಇಂಡಿಯಾದ ಯುವ ವೇಗಿ ದೀಪಕ್ ಚಹಾರ್ ಅವರನ್ನು ಬಿಸಿಸಿಐ ಏಷ್ಯಾ ಕಪ್ ಗೆ ಸ್ಟಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಿತ್ತು.
ಆದ್ರೆ ಇದೀಗ ಸ್ಟಾಂಡ್ ಬೈ ಆಗಿದ್ದ ದೀಪಕ್ ಚಹಾರ್ ಅವರನ್ನು ಪ್ರಧಾನ ತಂಡಕ್ಕೆ ತೆಗೆದುಕೊಳ್ಳಲು ಬಿಸಿಸಿಐ ಪ್ಲಾನ್ ಮಾಡಿದೆ.
ಈ ವಿಷಯದ ಬಗ್ಗೆ ಭಾರತ ಕ್ರಿಕೆಟ್ ತಂಡ 24 ಗಂಟೆಗಳಲ್ಲಿ ಅಧಿಕೃತ ಪ್ರಕಟನೆ ಹೊರಡಿಸುವ ಸಾಧ್ಯತೆಗಳಿವೆ.
ಗಾಯದ ಸಮಸ್ಯೆಯಿಂದಾಗಿ ತಂಡದಿಂದ ದೂರವಿದ್ದು ಚಹಾರ್, ಮತ್ತೆ ಜಿಂಬಾಬ್ವೆ ಸರಣಿಯಲ್ಲಿ ವಾಪಸ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಎರಡು ಪಂದ್ಯಗಳನ್ನಾಡಿದ ಚಹಾರ್ ಐದು ವಿಕೆಟ್ ಪಡೆದು ಮಿಂಚಿದರು.

ಇನ್ನು ಚಹಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಟೀಂ ಇಂಡಿಯಾದ ಮಾಜಿ ಬೌಲರ್ ಲಕ್ಷ್ಮಿಪತಿ ಬಾಲಾಜಿ ಸ್ಪಂದಿಸಿದ್ದು, ಚಹಾರ್ ಏಷ್ಯಾಕಪ್ ಪ್ರಧಾನ ತಂಡಕ್ಕೆ ಬರೋದು ಪಕ್ಕಾ.
ಆತ ತಂಡದಿಂದ ದೂರವಾಗಿದ್ದರೂ ರಿಧಮ್ ಕಡಿಮೆಯಾಗಿಲ್ಲ. ಚಹಾರ್ ಪವರ್ ಪ್ಲೇ ನಲ್ಲಿ ಒಂದೆರಡು ವಿಕೆಟ್ ಗಳನ್ನು ತೆಗೆದು ತಂಡಕ್ಕೆ ಅದ್ಭುತ ಶುಭಾರಂಭವನ್ನ ನೀಡಬಹುದು ಎಂದು ಹೇಳಿದರು.
ಸದ್ಯ ಭಾರತ ತಂಡದಲ್ಲಿ ಬಹಳಷ್ಟು ಮಂದಿ ಬೌಲರ್ ಗಳಿದ್ದು, ಹೊಸ ಚೆಂಡಿನಲ್ಲಿ ವಿಕೆಟ್ ತೆಗೆಯುವ ತಾಕತ್ತು ಇರುವವರಿಗೆ ಅವಕಾಶ ನೀಡಬೇಕು.
ತಂಡದಲ್ಲಿ ಬುಮ್ರಾ, ಶಮಿ ಯಂತಹ ಅಟ್ಯಾಕಿಂಗ್ ಬೌಲರ್ ಗಳು ಇಲ್ಲದಿರುವುದರಿಂದ ಅವರ ಸ್ಥಾನವನ್ನು ಚಹಾರ್ ಭರ್ತಿ ಮಾಡಬಹುದು ಎಂದು ಬಾಲಾಜಿ ಅಭಿಪ್ರಾಯಟ್ಟಿದ್ದಾರೆ.
ಏಷ್ಯಾಕಪ್ 27 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾ ಆಗಸ್ಟ್ 28 ರಂದು ಪಾಕಿಸ್ತಾನ ತಂಡದ ವಿರುದ್ಧ ಸೆಣಸಲಿದೆ.







