Asia Cup 2023 : ಪಾಕಿಸ್ತಾನದಲ್ಲೇ ಏಷ್ಯಾಕಪ್ 2023; ಭಾರತಕ್ಕೆ ಮಾತ್ರ ತಟಸ್ಥ ಸ್ಥಳ – ಹಿಂದೆ ಸರಿದ ಪಾಕ್…
ಈ ವರ್ಷದ ಕೊನೆಯಲ್ಲಿ ಏಷ್ಯಾ ಕಪ್-2023 ಟೂರ್ನಿ ಪಾಕಿಸ್ತಾನದಲ್ಲಿ ನಡೆಯುವುದು ಬಹುತೇಕ್ ಫಿಕ್ಸ್ ಆಗಿದೆ. ಟೂರ್ನಿಯ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಆದರೇ ಭಾರತ ತಂಡ ಆಡುವ ಎಲ್ಲಾ ಪಂದ್ಯಗಳು ಯುಎಇ, ಶ್ರಿಲಂಕಾ ಅಥವಾ ಒಮನ್ ಸೇರಿದಂತೆ ಯಾವುದಾದರೂ ಒಂದು ದೇಶದಲ್ಲಿ ನಡೆಯುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಭಾರಿ ಮುಖಾಮುಖಿಯಾಗುವ ನಿರೀಕ್ಷೆ ಇದೆ.
ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುವುದಾದರೇ ಭಾಗವಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಡಾ ಖಂಡಿಂತವಾಗಿ ಹೇಳಿತ್ತು. ಅಗತ್ಯವಿದ್ದರೇ ಏಷ್ಯಾ ಕಪ್ ನಿಂದ ಹಿಂದೆ ಸರಿಯುವುದಾಗಿ ತಿಳಿಸಿತ್ತು. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿ ಏಷ್ಯಾಕಪ್ಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿತ್ತು.
ಎರಡು ದೇಶಗಳ ಮಾಜಿ ಕ್ರಿಕೆಟಿಗರ ನಡುವಿನ ಮಾತಿನ ಸಮರದಿಂದಾಗಿ ಭಾರತ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವುದು ಬಹುತೇಕ ಅನುಮಾನವಾಗಿತ್ತು. ಆದರೇ ಇತ್ತೀಚೆಗಿನ ಬೆಳವಣಿಗೆಗಳಲ್ಲಿ ಕಳೆದ ವಾರ ದುಬೈನಲ್ಲಿ ಪಿಸಿಬಿ ಅಧಿಕಾರಿಗಳು ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಎಲ್ಲಾ ಸದಸ್ಯರೊಂದಿಗೆ ಸಭೆ ನಡೆಸಿದ ತೀರ್ಮಾನಕ್ಕೆ ಬಂದಿದ್ದು ಭಾರತ ಆಡುವ ಎಲ್ಲಾ ಪಂದ್ಯಗಳನ್ನ ಪಾಕಿಸ್ತಾನದ ಹೊರಗೆ ಆಡಲು ನಿರ್ಧರಿಸಿಲಾಗಿದೆ. ಪಿಸಿಬಿ ಮತ್ತು ಬಿಸಿಸಿಐ ಪ್ರತಿನಿಧಿಗಳ ನಡುವೆ ಎರಡು ಸುತ್ತಿನ ಮಾತುಕತೆ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಿಂದೆ ಸರಿದಿರುವುದು ಗೊತ್ತಾಗಿದೆ.
ಟೀಂ ಇಂಡಿಯಾ ಆಡುವ ಎಲ್ಲಾ ಪಂದ್ಯಗಳು ಶ್ರೀಲಂಕಾ, ಓಮನ್, ಯುಎಇ ಅಥವಾ ಇಂಗ್ಲೆಂಡ್ನಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ, ದೇಶ ಇನ್ನೂ ಫೈನಲ್ ಆಗಿಲ್ಲವಾದರೂ, ಯುಎಇಯ ಬಹುತೇಕ ಮೈದಾನಗಳಲ್ಲಿ ಭಾರತ ತಂಡ ಪಂದ್ಯಗಳನ್ನ ನಡೆಸುವ ಸಾಧ್ಯತೆಗಳಿವೆ. ಭಾರತವು ಪಾಕಿಸ್ತಾನದ ವಿರುದ್ಧದ ಪಂದ್ಯ ಸೇರಿದಂತೆ ಐದು ಪಂದ್ಯಗಳನ್ನ ತಟಸ್ಥ ಸ್ಥಳಗಳಲ್ಲಿ ನಡೆಸುವಂತೆ ಸಮನ್ವಯ ಸಾಧಿಸಲಾಗಿದೆ. ಏಷ್ಯಾ ಕಪ್ 2023 ರ ಟೂರ್ನಿ 50 ಓವರ್ಗಳ ಸ್ವರೂಪದಲ್ಲಿ ಈ ವರ್ಷದ ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದಲ್ಲಿ ಪ್ರಾರಂಭವಾಗಲಿದೆ. ಒಟ್ಟು ಆರು ದೇಶಗಳು ಭಾಗವಹಿಸುತ್ತಿದ್ದು 13 ದಿನಗಳ ಟೂರ್ನಿಯಲ್ಲಿ 13 ಪಂದ್ಯಗಳು ನಡೆಯಲಿವೆ.
Asia Cup 2023 : India vs Pakistan Asia Cup Match… Asia Cup Schedule