ಏಷ್ಯಾ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್…
ಈ ವರ್ಷ ಮತ್ತೆ ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು 2 ವರ್ಷಗಳ ಏಷ್ಯನ್ ಕ್ರಿಕೆಟ್ ಮ್ಯಾಪ್ ಅನ್ನ ಬಿಡುಗಡೆ ಮಾಡಿದೆ.
ಏಕದಿನ ವಿಶ್ವಕಪ್ಗಿಂತ ಮೊದಲು ಏಕದಿನ ಏಷ್ಯಾಕಪ್ ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಆಡಲಿದೆ. ಇದಲ್ಲದೇ ಇಂಡೋ-ಪಾಕ್ ಮಹಿಳಾ ಟಿ20 ಎಮರ್ಜಿಂಗ್ ಏಷ್ಯಾ ಕಪ್, ಪುರುಷರ ಎಮರ್ಜಿಂಗ್ 50 ಓವರ್ ಏಷ್ಯಾಕಪ್ ಮತ್ತು ಪುರುಷರ ಅಂಡರ್-19 ಏಷ್ಯಾಕಪ್ ಕೂಡ ಮುಖಾಮುಖಿಯಾಗಲಿದೆ.
ಏಷ್ಯಾಕಪ್ನ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು ಏಷ್ಯಾ ಕಪ್ ಅನ್ನು ಪಾಕಿಸ್ತಾನದ ಬದಲಿಗೆ ತಟಸ್ಥ ಸ್ಥಳದಲ್ಲಿ ನಡೆಸುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿದ್ದ ರಮೀಜ್ ರಾಜಾ ಇದನ್ನು ವಿರೋಧಿಸಿ ಏಕದಿನ ವಿಶ್ವಕಪ್ ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು. ಸದ್ಯಕ್ಕೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಪಂದ್ಯಾವಳಿಯನ್ನ ಎಲ್ಲಿ ಆಡಲಾಗುತ್ತದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಕಳೆದ ವರ್ಷ ಆಗಸ್ಟ್ನಲ್ಲಿ ಯುಎಇಯಲ್ಲಿ ಏಷ್ಯಾಕಪ್ ನಡೆದಿತ್ತು. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಗಳು ಆರ್ಥಿಕ ಮತ್ತು ರಾಜಕೀಯ ಏರುಪೇರಿನಿಂದಾಗಿ ಯುಏಇ ಗೆ ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆದಿತ್ತು. ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಶ್ರೀಲಂಕಾ ಚಾಂಪಿಯನ್ ಆಗಿತ್ತು.
Asia Cup: Date fixed for India vs Pakistan encounter in Asia Cup…