ADVERTISEMENT
Sunday, May 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Asian Games: ಚಿನ್ನದ ಭೇಟಿಗೆ ಸಿದ್ಧವಾಗಿರುವ ಭಾರತಕ್ಕೆ ಫೈನಲ್‌ನಲ್ಲಿ ಅಫ್ಘಾನ್‌ ಸವಾಲು

ಏಷ್ಯನ್ ಗೇಮ್ಸ್ ನಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟಿರುವ ಭಾರತ

Author2 by Author2
October 6, 2023
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಏಷ್ಯನ್‌ ಗೇಮ್ಸ್‌-2023 ಕ್ರಿಕೆಟ್‌ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದಿಂದ ಮಿಂಚುವ ಮೂಲಕ ಚಿನ್ನದ ಪದಕದ ಭೇಟೆಯಲ್ಲಿರುವ ಭಾರತ ತಂಡ ಫೈನಲ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಕ್ರೀಡಾಕೂಟದ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆಯಿಟ್ಟಿದೆ. ದಿನದ ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

Related posts

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

May 18, 2026
ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

May 17, 2026

ಹೀಗಾಗಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಅಕ್ಟೋಬರ್‌ 7ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಚಿನ್ನದ ಪದಕ ತಮ್ಮದಾಗಿಸಿಕೊಳ್ಳಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಲಿವೆ. ಎರಡು ತಂಡಗಳಿಗೆ ಹೋಲಿಸಿದರೆ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದಲ್ಲಿ ಆಡುತ್ತಿರುವ ಭಾರತ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಬಲಿಷ್ಠವಾಗಿದೆ. ಭಾರತ ತಂಡದಲ್ಲಿರುವ ಬಹುತೇಕ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಫೈನಲ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದಾರೆ.

ಮತ್ತೊಂದೆಡೆ ಸಮೀಸ್‌ನಲ್ಲಿ ಪಾಕಿಸ್ತಾನವನ್ನ ಮಣಿಸಿ ಫೈನಲ್‌ ತಲುಪಿರುವ ಅಫ್ಘಾನಿಸ್ತಾನ ಕೂಡ ಬಲಿಷ್ಠವಾಗಿದೆ. ಅನುಭವಿ ಆಟಗಾರ ಗುಲ್ಬದಿನ್‌ ನೈಬ್‌ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಅಫ್ಘಾನಿಸ್ತಾನ ತಂಡದಲ್ಲಿ ಅನುಭವಿ ಆಟಗಾರರು ಹೆಚ್ಚಾಗಿ ಇಲ್ಲದಿದ್ದರು, ಫೈನಲ್‌ನಲ್ಲಿ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ವಿಕೆಟ್‌ ಕೀಪರ್‌ ಮೊಹಮ್ಮದ್‌ ಶಹಜಾ಼ದ್‌, ನೂರ್‌ ಅಲಿ ಝದ್ರಾನ್‌, ಅಫ್ಜರ್‌ ಝಜಾಯಿ ಅವರುಗಳು ತಂಡದ ಪ್ರಮುಖ ಆಟಗಾರರಾಗಿದ್ದಾರೆ.

3ನೇ ಸ್ಥಾನಕ್ಕೆ ಪಾಕ್‌-ಬಾಂಗ್ಲಾ ಫೈಟ್‌:
ಏಷ್ಯನ್‌ ಗೇಮ್ಸ್‌ ಫೈನಲ್‌ ಪ್ರವೇಶಿಸಿರುವ ಭಾರತ ಹಾಗೂ ಅಫ್ಘಾನಿಸ್ತಾನ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿವೆ. ಫೈನಲ್‌ನಲ್ಲಿ ಸೋತ ತಂಡ ಬೆಳ್ಳಿ ಪದಕ ಪಡೆಯಲಿದ್ದರೆ. ಸೆಮಿಫೈನಲ್‌ನಲ್ಲಿ ಸೋಲಿನ ಆಘಾತ ಕಂಡ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು 3ನೇ ಸ್ಥಾನ(ಕಂಚಿನ ಪದಕ) ತಮ್ಮದಾಗಿಸಿಕೊಳ್ಳಲು ಕಾದಾಟ ನಡೆಸಲಿದ್ದು, ಈ ಪಂದ್ಯ ಅ.7ರಂದು ಬೆಳಗ್ಗೆ 6.30ಕ್ಕೆ ನಡೆಯಲಿದೆ.

ಸಂಭಾವ್ಯ ತಂಡಗಳು:
ಭಾರತ: ಋತುರಾಜ್‌ ಗಾಯಕ್ವಾಡ್‌(ನಾಯಕ), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ಜಿತೇಶ್‌ ಶರ್ಮಾ, ಶಿವಂ ದುಬೆ, ರಿಂಕು ಸಿಂಗ್‌, ವಾಷಿಂಗ್ಟನ್‌ ಸುಂದರ್‌, ಶಹಬಾಜ಼್ ಅಹ್ಮದ್‌, ರವಿ ಬಿಷ್ಣೋಯಿ, ಸಾಯಿ ಕಿಶೋರ್‌, ಅರ್ಶದೀಪ್‌ ಸಿಂಗ್‌.

ಅಫ್ಘಾನಿಸ್ತಾನ: ಗುಲ್ಬದಿನ್‌ ನಯೀಬ್‌(ನಾಯಕ), ಸಿದ್ದಿಕ್‌ವುಲ್ಲಾ ಅಟಲ್‌, ಮೊಹಮ್ಮದ್‌ ಶಹಜಾ಼ದ್‌, ಶಹಾಹಿದುಲ್ಲಾ ಕಮಾಲ್‌, ನೂರ್‌ ಅಲಿ ಝದ್ರಾನ್‌, ಅಫ್ಜರ್‌ ಝಜಾಯಿ, ಕಿರಮ್‌ ಜನ್ಹತ್‌, ಶರ್ಫರುದ್ದಿನ್‌ ಅಶ್ರಫ್‌, ಕೈಸ್‌ ಅಹ್ಮದ್‌, ಫರೆದ್‌ ಅಹ್ಮದ್‌ ಮಲ್ಲಿಕ್, ಜಹಿರ್‌ ಖಾನ್‌.
ಪಂದ್ಯದ ಸಮಯ: ಬೆಳಗ್ಗೆ 11.30ಕ್ಕೆ

Tags: Afghanistanasian gamesAsian Games: Afghanistan will challenge India in the finalT20I Cricketteam indiawhich is ready for gold
ShareTweetSendShare
Join us on:

Related Posts

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

by Shwetha
May 18, 2026
0

ಐಪಿಎಲ್ 2026ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸರ್ವತೋಮುಖ...

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

by Shwetha
May 17, 2026
0

ದಾಖಲೆಗಳ ಸರದಾರ, ಟೀಮ್ ಇಂಡಿಯಾದ ರನ್ ಮಷಿನ್ ಮತ್ತು ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕಿಂಗ್ ವಿರಾಟ್ ಕೊಹ್ಲಿ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಕ್ರಿಕೆಟ್ ಭವಿಷ್ಯ...

ನನ್ನ ಕಣ್ಣೀರು ಹರ್ಭಜನ್ ಪಾಲಿಗೆ ಬ್ಯುಸಿನೆಸ್ : ಭಜೀ ಜೊತೆಗಿನ ಸ್ನೇಹಕ್ಕೆ ಎಳ್ಳುನೀರು ಬಿಟ್ಟ ಶ್ರೀಶಾಂತ್ ; ಹರ್ಭಜನ್ ಸಿಂಗ್ ವಿರುದ್ಧ ಸಿಡಿದೆದ್ದ ಕೇರಳ ಎಕ್ಸ್‌ಪ್ರೆಸ್

ನನ್ನ ಕಣ್ಣೀರು ಹರ್ಭಜನ್ ಪಾಲಿಗೆ ಬ್ಯುಸಿನೆಸ್ : ಭಜೀ ಜೊತೆಗಿನ ಸ್ನೇಹಕ್ಕೆ ಎಳ್ಳುನೀರು ಬಿಟ್ಟ ಶ್ರೀಶಾಂತ್ ; ಹರ್ಭಜನ್ ಸಿಂಗ್ ವಿರುದ್ಧ ಸಿಡಿದೆದ್ದ ಕೇರಳ ಎಕ್ಸ್‌ಪ್ರೆಸ್

by Shwetha
April 26, 2026
0

ಐಪಿಎಲ್ ಇತಿಹಾಸದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ 2008ರ ಕಪಾಳಮೋಕ್ಷ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸುಮಾರು 16 ವರ್ಷಗಳ ನಂತರ ಮಾಜಿ ವೇಗಿ ಶ್ರೀಶಾಂತ್...

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

by Shwetha
April 10, 2026
0

ಐಪಿಎಲ್ 2026ರ ಆವೃತ್ತಿಯು ರೋಚಕ ಪಂದ್ಯಗಳ ಜೊತೆಗೆ ಇದೀಗ ಹೊಸದೊಂದು ವಿವಾದಕ್ಕೆ ಸಾಕ್ಷಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ...

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

by Shwetha
March 29, 2026
0

2026ರ IPLನ ಮೊದಲ ಪಂದ್ಯವು ಬೆಂಗಳೂರಿನಲ್ಲಿ RCB & SRH ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಗಿರಿನಗರದ ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು RCB...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram