ಬೆಂಗಳೂರಿನಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ , ಅತಿ ಎತ್ತರದ ಮೆಟ್ರೋ ಸ್ಟೇಷನ್ ನಿರ್ಮಾಣವಾಗುತ್ತಿದೆ. ಇದು ಡಬಲ್ ಎಲಿವೇಟೆಡ್ ಜೊತೆಗೆ ಆರು ಹಂತಗಳನ್ನು ಹೊಂದಿರುವ ಮೆಟ್ರೋ ಸ್ಟೇಷನ್ ಅನ್ನು ಮೆಟ್ರೋ ನಿಗಮ ನಿರ್ಮಾಣ ಮಾಡುತ್ತಿದೆ.
ಅತಿ ಎತ್ತರದ ಹಾಗೂ ಹೈಟೆಕ್ ಮೆಟ್ರೋ ನಿಲ್ದಾಣವನ್ನು ಮೆಟ್ರೋ ನಿಗಮ ನಿರ್ಮಾಣ ಮಾಡುತ್ತಿದೆ. ಅದೇ ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣವಾಗಲಿದೆ. ಏಷ್ಯಾದ ಮೊದಲ ಡಬಲ್ ಎಲಿವೇಟೆಡ್ ಹಾಗೂ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣವಾಗಿದ್ದು, ಈ ನಿಲ್ದಾಣದಲ್ಲಿ ರಸ್ತೆ ಮಾರ್ಗ ಹಾಗೂ ಮೆಟ್ರೋ ರೈಲು ಮಾರ್ಗ ಸೇರಿದಂತೆ ಆರು ಹಂತಗಳಿದ್ದು, ಈ ಆರು ಹಂತಗಳಲ್ಲೂ ಸಂಚಾರ ವ್ಯವಸ್ಥೆ ಮುಂದುವರೆಯಲಿದೆ.
ಮೊದಲನೇ ಹಂತದಲ್ಲಿ ಬನ್ನೇರುಘಟ್ಟದಿಂದ ಡೈರಿ ಸರ್ಕಲ್ ವರೆಗಿನ ಅಂಡರ್ ಪಾಸ್, ಎರಡನೇ ಹಂತದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ ರಸ್ತೆ, ಮೂರನೇ ಹಂತದಲ್ಲಿ ಇದೇ ಮಾರ್ಗದಲ್ಲಿ ಫ್ಲೈಓವರ್ ನಾಲ್ಕನೇ ಹಂತ ಮೆಟ್ರೋ ಕಾನ್ ಕೋರ್ಸ್ ಲೆವಲ್, ಐದನೇ ಹಂತ ಆರ್ .ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ, ಕೊನೆಯ ಹಂತದಲ್ಲಿ ಕಾಳೆನ ಅಗ್ರಹಾರ ನಾಗವಾರದವರೆಗೆ ಓಡಾಡಲಿದೆ. ಒಟ್ಟು 18 ಕಿ.ಮೀ. ಉದ್ದದ 16 ನಿಲ್ದಾಣಗಳನ್ನು ಇದು ಹೊಂದಿದೆ.