Assam’s child marriage : ಬಾಲ್ಯ ವಿವಾಹವಾದ ಗಂಡದಿರನ್ನ ಸೆರೆಮನೆಗೆ ತಳ್ಳುತ್ತಿರುವ ಅಸ್ಸಾಂ ಸರ್ಕಾರ…
ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿರುವ ಅಸ್ಸಾಂ ಸರ್ಕಾರ ಸಾವಿರಾರು ಬಾಲ್ಯ ವಿವಾದ ವರರನ್ನ ಬಂಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಶರ್ಮಾ ಅವರು ಅಪ್ರಾಪ್ತರನ್ನು ಮದುವೆಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ಗೊತ್ತೇ ಇದೆ.
ಪೊಲೀಸರು ದಿನದ 24 ಗಂಟೆಯೂ ವಿಶೇಷ ಕಾರ್ಯಚರಣೆ ನಡೆಸುತ್ತಿದ್ದಾರೆ. ಇದುವರೆಗೆ ಸುಮಾರು ಎಂಟು ಸಾವಿರ ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 2,258 ಜನರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳಿದೆ. 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮದುವೆಯಾದರೆ ಪೋಕ್ಸೊ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.
ಅಲ್ಲದೆ, ಮದುವೆಯಾದ ಹುಡುಗನ ವಯಸ್ಸು 14 ವರ್ಷವಾಗಿದ್ದರೆ, ಅಂತಹ ಹುಡುಗರನ್ನ ರಿಮ್ಯಾಂಡ್ ಹೋಮ್ ಗೆ ಕಳಿಸಲಾಗುತ್ತಿದೆ. 2026 ರ ವೇಳೆಗೆ ಬಾಲ್ಯ ವಿವಾಹವನ್ನು ಕೊನೆಗೊಳಿಸುವ ಗುರಿಯನ್ನ ಅಸ್ಸಾಂ ಸರ್ಕಾರ ಹೊಂದಿದೆ. ಆದರೆ, ಗಂಡದಿಂರ ಬಂಧನದಿಂದ ಪತ್ನಿಯರು ಆತಂಕಗೊಂಡಿದ್ದಾರೆ. ನಿನ್ನೆ ಧುಬ್ರಿ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರನ್ನು ಓಡಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
Assam’s child marriage: Assam government is pushing child marriage husbands to jail…








