ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಸಾಗಾಟ ಮಾಡುವಾಗ ಹಂತಕರು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ದಾದರ್ ರೈಲು ನಿಲ್ದಾಣದಲ್ಲಿ ಬ್ಯಾಗ್ನಲ್ಲಿ ಮೃತದೇಹ ಪತ್ತೆಯಾದ ನಂತರ ಮುಂಬೈ ಪೊಲೀಸರು ಇಬ್ಬರು ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಹತ್ಯೆಗೈದ ನಂತರ ರೈಲಿನಲ್ಲಿ ಶವವನ್ನು ಸೂಟ್ಕೇಸ್ನಲ್ಲಿ ಸಾಗಿಸುವಾಗ ಶಂಕಿತರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಜೈ ಪ್ರವೀಣ್ ಚಾವ್ಡಾ ಮತ್ತು ಶಿವಜೀತ್ ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಸಾಂತಾಕ್ರೂಜ್ ನಿವಾಸಿ ಅರ್ಷದ್ ಅಲಿ ಶೇಖ್ ಹತ್ಯೆಯಾದ ವ್ಯಕ್ತಿ. ಹಂತಕರು ಮತ್ತು ಕೊಲೆಯಾದ ವ್ಯಕ್ತಿಯ ನಡುವೆ ಮಹಿಳೆಯ ವಿಷಯಕ್ಕೆ ವೈಷಮ್ಯ ಇತ್ತು. ಹೀಗಾಗಿ ಕೊಲೆಯಾಗಿದೆ ಎನ್ನಲಾಗಿದೆ.
ಬ್ಯಾಗ್ ನೊಳಗೆ ಮೃತದೇಹ ಪತ್ತೆಯಾದ ನಂತರ ಇಬ್ಬರು ಶಂಕಿತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ನಂತರ ಪಿಧುಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಹಂತಕರು ಶವವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ನಲ್ಲಿ ಸುತ್ತಿ ಸೂಟ್ಕೇಸ್ನಲ್ಲಿ ತುಂಬಿಕೊಂಡಿದ್ದರು. ನಂತರ ಏನೂ ಗೊತ್ತಿಲ್ಲದಂತೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಅದನ್ನು ವಿಲೇವಾರಿ ಮಾಡಲು ರೈಲಿನಲ್ಲಿ ಸಂಚರಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.