ರಾಜಸ್ಥಾನ : ಶಿಕ್ಷಕನೊರ್ವ ತನ್ನ ವೃದ್ಧ ತಂದೆ-ತಾಯಿ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಖೇತ್ರಿಯಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 3ರಂದು ಈ ಘಟನೆ ನಡೆದಿದ್ದು, ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ಬಾಬುಲಾಲ್ ತನ್ನ ತಂದೆ-ತಾಯಿ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಖೇತ್ರಿ ನಗರದ ಎಸ್ ಎಸ್ ಐ ಸುಬೇಸಿಂಹ್ ಯಾದವ್ ತಿಳಿಸಿದ್ದಾರೆ.
ಸೆಪ್ಟೆಂಬರ್ 3ರಂದು ಶಿಕ್ಷಕನ ಜಮೀನಿನಲ್ಲಿದ್ದ ಬಾವಿಯಿಂದ ನೀರು ಹೊರತೆಗೆಯಲು ತನ್ನ ಇನ್ನೊಬ್ಬ ಮಗನಿಗೆ ಅವಕಾಶ ನೀಡುವಂತೆ ಪೋಷಕರು ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಶಿಕ್ಷಕ ಸ್ವಂತ ಹೆತ್ತವರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ.
https://www.youtube.com/watch?v=CIxpZoOlwiU