ADVERTISEMENT
Monday, October 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology : ನವಗ್ರಹಾರಾಧನೆ ಹೇಗೆ ? ಏಕೆ? ನವಗ್ರಹದ ಧಾನ್ಯಗಳು ಮತ್ತು ಸಮಿಧಗಳು ಗ್ರಹಚಾರ ದೋಷಕ್ಕೆ ಶಾಸ್ತ್ರದ ಪರಿಹಾರ….?

Namratha Rao by Namratha Rao
February 28, 2023
in Astrology, News, Newsbeat, ಜ್ಯೋತಿಷ್ಯ
Astrology
Share on FacebookShare on TwitterShare on WhatsappShare on Telegram

Astrology : ನವಗ್ರಹಾರಾಧನೆ ಹೇಗೆ ? ಏಕೆ? ನವಗ್ರಹದ ಧಾನ್ಯಗಳು ಮತ್ತು ಸಮಿಧಗಳು ಗ್ರಹಚಾರ ದೋಷಕ್ಕೆ ಶಾಸ್ತ್ರದ ಪರಿಹಾರ….?

ಗ್ರಹಗಳಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಗ್ರಹಾರಾಧನೆಯನ್ನು ಶಾಸ್ತ್ರ ಹೇಳುತ್ತದೆ. “ದುಷ್ಟಾರಿಷ್ಟೇ ಸಮಾಯಾತೇ ಕರ್ತವ್ಯಂ ಗ್ರಹಶಾಂತಿಕಮ್” ಎಂಬುದಾಗಿ. ಮಳೆ, ಆಯುಷ್ಯ, ಆರೋಗ್ಯ, ಪುಷ್ಟಿ ಮೊದಲಾದ ಉದ್ದೇಶದಲ್ಲೂ ಗ್ರಹಗಳನ್ನು ಆರಾಧಿಸುವುದಿದೆ. ಈ ಗ್ರಹಾರಾಧನೆ ಸಾಮಾನ್ಯವಾಗಿ ಐದು ವಿಧ: 1)ಪೂಜೆ 2)ಅಧ್ವರ 3)ಜಪ 4)ಸ್ತೋತ್ರ 5)ದಾನ ಎಂಬುದಾಗಿ..

Related posts

ರಾಮನಗರಿಯಲ್ಲೇ ಫೈಸಲಾ ಆಗಲಿ ಧಮ್ ಇದ್ದರೆ ಚುನಾವಣೆಗೆ ನಿಲ್ಲಿ ಎಂದು ಅಖಿಲೇಶ್ ಗೆ ಯೋಗಿ ಆದಿತ್ಯನಾಥ್ ಓಪನ್ ಚಾಲೆಂಜ್

ರಾಮನಗರಿಯಲ್ಲೇ ಫೈಸಲಾ ಆಗಲಿ ಧಮ್ ಇದ್ದರೆ ಚುನಾವಣೆಗೆ ನಿಲ್ಲಿ ಎಂದು ಅಖಿಲೇಶ್ ಗೆ ಯೋಗಿ ಆದಿತ್ಯನಾಥ್ ಓಪನ್ ಚಾಲೆಂಜ್

October 12, 2026
ಬಂಧನದಿಂದ ಮುಕ್ತರಾದ ಅಭಿಜೀತ್ ದೀಪ್ಕೆ ಮತ್ತು ತಂಡಕ್ಕೆ ಕೋರ್ಟ್ ವಿಧಿಸಿದ ಆ ಕಠಿಣ ಷರತ್ತುಗಳೇನು? ಒಂದು ವರ್ಷ ಪ್ರತಿಭಟಿಸುವಂತಿಲ್ಲವೇ:ಶಾಂತಿ ಕಾಪಾಡುವ ಬಾಂಡ್ ಗೆ ಸಹಿ ಹಾಕಿದ ಕಾಕ್ರೋಚ್ ಜನತಾ ಪಾರ್ಟಿ ತಂಡ ಉಲ್ಲಂಘಿಸಿದರೆ ಜೈಲು ಗ್ಯಾರಂಟಿನಾ!

ಬಂಧನದಿಂದ ಮುಕ್ತರಾದ ಅಭಿಜೀತ್ ದೀಪ್ಕೆ ಮತ್ತು ತಂಡಕ್ಕೆ ಕೋರ್ಟ್ ವಿಧಿಸಿದ ಆ ಕಠಿಣ ಷರತ್ತುಗಳೇನು? ಒಂದು ವರ್ಷ ಪ್ರತಿಭಟಿಸುವಂತಿಲ್ಲವೇ:ಶಾಂತಿ ಕಾಪಾಡುವ ಬಾಂಡ್ ಗೆ ಸಹಿ ಹಾಕಿದ ಕಾಕ್ರೋಚ್ ಜನತಾ ಪಾರ್ಟಿ ತಂಡ ಉಲ್ಲಂಘಿಸಿದರೆ ಜೈಲು ಗ್ಯಾರಂಟಿನಾ!

October 12, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

1)ಪೂಜೆ : ನವಗ್ರಹ ಪೂಜೆಯಲ್ಲಿ ನವಗ್ರಹ ಪ್ರತಿಮೆಗಳು ಅಥವಾ ಆಯಾಯ ಧಾನ್ಯಗಳು ಪ್ರತೀಕವೆನಿಸುತ್ತವೆ. ಆದಿತ್ಯಾದಿ ನವಗ್ರಹದ ಪ್ರತಿಮೆ ಇರುವಲ್ಲಿಗೆ ಹೋಗಿ ಅಭಿಷೇಕಾದಿ ಪೂಜೆಗಳನ್ನು ಮಾಡಿಸಿ ಪ್ರದಕ್ಷಿಣೆ ನಮಸ್ಕಾರಗಳ ಮೂಲಕ ಗ್ರಹಪ್ರೀತಿಯನ್ನು ಸಂಪಾದಿಸ ಬಹುದು. ಈ ಸಂದರ್ಭದಲ್ಲಿ ಆಯಾಯ ಗ್ರಹಗಳಿಗೆ ಪ್ರಿಯವಾದ ನೈವೇದ್ಯವನ್ನು ನಿವೇದಿಸ ಬಹುದು.

ಸೂರ್ಯನಿಗೆ ಗುಡಾನ್ನ ಚಂದ್ರನಿಗೆ ಪಾಯಸ, ಕುಜನಿಗೆ ಪರಿಮಳಿಸುವ ಗಂಜಿ, ಬುಧನಿಗೆ ಕ್ಷೀರನ್ನ, ಗುರುವಿಗೆ ಮೊಸರನ್ನ, ಶುಕ್ರನಿಗೆ ಘೃತಾನ್ನ, ಶನಿಗೆ ಎಳ್ಳು ಮಿಶ್ರಿತಾನ್ನ (ಕೃಸರ) ರಾಹುವಿಗೆ ಕುಂಬಳ ಕಾಯಿ ಮತ್ತು ಉದ್ದು ಮಿಶ್ರಿತವಾದ ಅನ್ನ ಹಾಗೂ ಕೇತುವಿಗೆ ಚಿತ್ರಾನ್ನವು ಅತ್ಯಂತ ಪ್ರಿಯವಾದ ಅನ್ನವೆನಿಸಿದ್ದು ಇದರ ನೈವೇದ್ಯ, ಆಹುತಿಗಳು ಗ್ರಹಪ್ರೀತಿಕರವೆಂದು ನವಗ್ರಹಕಾರಿಕೆ ಹೇಳುತ್ತದೆ.

2)ಅಧ್ವರ : ಅಧ್ವರ ಎಂದರೆ ಹೋಮ. ನವಗ್ರಹಾಂತರ್ಯಾಮಿ ಲಕ್ಷ್ಮೀನರಸಿಂಹನನ್ನು ಉದ್ದೇಶಿಸಿ ಅಗ್ನಿಯಲ್ಲಿ ಆಹುತಿಯನ್ನು ಕೊಡುವುದು. ನವಗ್ರಹಗಳ ಮಂತ್ರದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಮಿತ್, ಚರು ಮತ್ತು ಆಜ್ಯಗಳಿಂದ ೨೮ ಅಥವಾ ೧೦೮ ಸಂಖ್ಯೆಯ ಆಹುತಿಗಳನ್ನು ಕೊಡ ಬೇಕು. ಚರು ಎಂದರೆ ಅನ್ನ, ಆಯಾಯ ಗ್ರಹಗಳಿಗೆ ಪ್ರಿಯವಾದ ಅನ್ನವನ್ನು ಹಿಂದೆ ಹೇಳಿದೆ.
ಸೂರ್ಯಾದಿ ಗ್ರಹಗಳಿಗೆ ಗುಡಾನ್ನವೇ ಮೊದಲಾದ ಆಯಾಯ ಅನ್ನದಿಂದಲೇ ಹೋಮಿಸುವುದು ಅತ್ಯಂತ ಉಚಿತ. ಹಾಗೆಯೇ ಪ್ರತಿಯೊಂದು ಗ್ರಹಗಳಿಗೂ ಅದರದೇ ಆದ ಸಮಿತ್ತುಗಳಿವೆ.

*ಸೂರ್ಯನಿಗೆ ಅರ್ಕ (ಎಕ್ಕ)
*ಚಂದ್ರನಿಗೆ ಪಲಾಶ (ಮುತ್ತುಗ)
*ಕುಜನಿಗೆ ಖದಿರ,
*ಬುಧನಿಗೆ ಉತ್ತರಣೆ
*ಗುರುವಿಗೆ ಅಶ್ವತ್ಥ,
*ಶುಕ್ರನಿಗೆ ಔದುಂಬರ (ಅತ್ತಿ
*ಶನಿಗೆ ಶಮೀ,
*ರಾಹುವಿಗೆ ದೂರ್ವ (ಗರಿಕೆ)
*ಕೇತುವಿಗೆ ಕುಶ ( ದರ್ಭೆ)

ಈ ಸಮಿತ್ತುಗಳಿಂದ, ಗುಡಾನ್ನಾದಿ ಚರುವಿನಿಂದ ಮತ್ತು ದನದ ತುಪ್ಪದಿಂದ ಹೋಮಿಸುವುದೇ ನವಗ್ರಹ ಹೋಮ.

(ಈ ನವಗ್ರಹ ಸಮಿಧೆಗಳು ಇಂದಿಗೂ ಯಥೇಷ್ಟ ಉಪಲಬ್ಧವಿದೆ. ಸಮಿಧೆಗಳ ಪೂರ್ವ ತಯಾರಿ ಸಾಧ್ಯವಾಗದಿದ್ದಲ್ಲಿ ಹೋಮವನ್ನೇ ಮುಂದೆ ಹಾಕಿ ಸಾಮಗ್ರಿ ದೊರೆತ ಮೇಲೆಯೇ ಹೋಮಿಸುವುದು ಶಿಷ್ಟ ಪ್ರವೃತ್ತಿ (ದ್ರವ್ಯಗಳು ಸಿಗದೇ ಅನಿವಾರ್ಯವಾದಾಗ ಪ್ರತ್ಯಾಮ್ನಾಯವಾಗಿ ಬದಲಿ ದ್ರವ್ಯಗಳನ್ನು ಸ್ವೀಕರಿಸುವುದಕ್ಕೆ ಶಾಸ್ತ್ರದ ಅನುಮತಿಯಿದೆ. )
ಒಂದೊಂದು ಸಮಿಧೆಯ ಹೋಮಕ್ಕೂ ಶಾಸ್ತ್ರಕಾರರು ಫಲ ಹೇಳುತ್ತಾರೆ.

ಅರ್ಕೇಣ ವ್ಯಾಧಿನಾಶಃ ಸ್ಯಾತ್ ಫಲಾಶೈಃ ಸರ್ವಸಂಪದಃ |
ಖದಿರೇಣಾರ್ಥಸಿದ್ಧಿಃಸ್ಯಾತ್ ಅಪಾಮಾರ್ಗಃ ಸುಪುತ್ರದಃ ||
ಆಶ್ವತ್ಥೇನ ಪ್ರಜಾವೃದ್ಧಿಃ ಸೌಭಾಗ್ಯಂ ಸ್ಯಾದೌದುಂಬರಾತ್ |
ಶಮಿನಾ ಪಾಪಶಮನಂ ದೂರ್ವಯಾಯುಷ್ಯವರ್ಧನಮ್ll
ಕುಶೇನಬ್ರಹ್ಮವರ್ಚಃಸ್ಯಾದಿತ್ಯೇತದ್ ಸಮಿಧಾಂ ಫಲಮ್|

ಗ್ರಹಗಳಿಗೆ ಕೊಟ್ಟ ಆಹುತಿಯ ದಶಾಂಶ ಸಂಖ್ಯೆಯಲ್ಲಿ ಅಧಿದೇವತೆ, ಪ್ರತ್ಯಧಿದೇವತೆಗಳಿಗೂ ಆಹುತಿಯನ್ನು ಕೊಡ ಬೇಕು.
ಕೊನೆಯಲ್ಲಿ ದುರ್ಗಾದಿ ಕೃತು ಷಡ್ಗುಣ್ಯ ದೇವತೆಗಳಿಗೆ
ಇಂದ್ರಾದಿ ಅಷ್ಟ ದಿಕ್ಪಾಲಕದೇವತೆಗಳನ್ನೂ ಪೂಜಿಸಿ, ಆಹುತಿ ನೀಡಿ ಪ್ರಾಯಶ್ಚಿತ ಹವನ ಮಾಡುತ್ತಾರೆ.ಇದು ಹೋಮದ ವಿಚಾರ..

3)ಜಪ : ನವಗ್ರಹಗಳಿಗೆ ಸಂಬಂಧಿಸಿದ ಒಂಬತ್ತು ವೇದಮಂತ್ರಗಳಿವೆ. ಇದರ ಉಪದೇಶವಿದ್ದವರು ಜಪ ಮಾಡ ಬೇಕು ಅವು ಆಯಾಯ ಗ್ರಹಗಳಿಗೆ ಪ್ರಿಯವಾದ ಮಂತ್ರಗಳು. ಅಂದರೆ ಆ ಮಂತ್ರದ ಮೂಲಕ ಪರಮಾತ್ಮನನ್ನು ಧ್ಯಾನಿಸಿದಾಗ ಗ್ರಹಪ್ರೀತಿಯು ಉಂಟಾಗುತ್ತದೆ.

ಯಾವ ಗ್ರಹಗಳ ಜಪ ಎಷ್ಟು ಮಾಡ ಬೇಕೆಂಬುದರ ಬಗ್ಗೆ‌ ಎರಡು ಕ್ರಮವಿದೆ. ಒಂದು ಕ್ರಮದಂತೆ ಜಪಸಂಖ್ಯೆಯನ್ನು ಕೋಷ್ಟಕದಲ್ಲಿ ಕೊಡಲಾಗಿದೆ. ಇನ್ನೊಂದು ಕ್ರಮದಂತೆ ಆಯಾಯ ಗ್ರಹಗಳ ದಶಾವರ್ಷಕ್ಕೆ ಅನುಗುಣವಾಗಿ ಜಪ ಮಾಡ ಬೇಕು. ಅಂದರೆ ಆದಿತ್ಯನ ದಶಾವರ್ಷ ೬ ವರ್ಷವಾದ್ದರಿಂದ ೬,೦೦೦ ಸಂಖ್ಯೆಯಲ್ಲಿ ಆದಿತ್ಯನ ಜಪವಾಗ ಬೇಕು. ಹಾಗೆಯೇ ಚಂದ್ರನಿಗೆ ೧೦,೦೦೦, ಕುಜನಿಗೆ ೭,೦೦೦, ಬುಧನಿಗೆ ೧೭,೦೦೦, ಗುರುವಿಗೆ ೧೬,೦೦೦, ಶುಕ್ರನಿಗೆ ೨೦,೦೦೦, ಶನೈಶ್ಚರನಿಗೆ ೧೯,೦೦೦, ರಾಹುವಿಗೆ ೧೮,೦೦೦, ಹಾಗೂ ಕೇತುವಿಗೆ ೭,೦೦೦ ಸಂಖ್ಯೆಯಲ್ಲಿ ಜಪವಾಗ ಬೇಕು. ಸ್ವಂತ ಕರ್ತೃವೇ ಇಷ್ಟು ಜಪ ಮಾಡುವುದು ದುಃಸಾಧ್ಯವಾದ್ದರಿಂದ ಶ್ರೋತ್ರಿಯ ಬ್ರಾಹ್ಮಣರ ಮೂಲಕ ಮಾಡಿಸ ಬಹುದು. ಅಲ್ಲದೇ
ಯಜಮಾನನು ಯಥಾಶಕ್ತಿ ಗಾಯತ್ರೀ ಜಪದಿಂದಲೂ ಗ್ರಹದೋಷವನ್ನು ಪರಿಹರಿಸಿಕೊಳ್ಳ ಬೇಕು

4)ಸ್ತೋತ್ರ :

ಪುರಾಣಗಳಲ್ಲಿ ಬಂದ ಅಥವಾ ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ನವಗ್ರಹ ಸ್ತೋತ್ರಗಳಿವೆ. ಇವನ್ನು ಪಠಿಸುವುದೂ ಗ್ರಹಪ್ರೀತಿ ಸಾಧಕವಾಗಿದೆ.
ವೇದ ಮಂತ್ರದ ಬಗ್ಗೆ ತಿಳಿಯದವರೂ ಈ ಗ್ರಹ ಸ್ತೋತ್ರವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹ ದೋಷವನ್ನು ಪರಿಹರಿಸಿ ಕೊಳ್ಳಬಹುದು.

ನವಗ್ರಹ ಸ್ತೋತ್ರಮ್

ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |ತಮೋಽರೀಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ || ೧ ||

ದಧಿಶಂಖ-ತುಷಾರಾಭಂ ಕ್ಷೀರೋದಾರ್ಣವ- ಸನ್ನಿಭಮ್|ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ-ಭೂಷಣಮ್ || ೨ ||

ಧರಣೀಗರ್ಭ-ಸಂಭೂತಂ ವಿದ್ಯುತ್ಕಾಂತಿ-ಸಮಪ್ರಭಮ್ |ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ || ೩ ||

ಪ್ರಿಯಂಗು-ಕಲಿಕಾ-ಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ || ೪ ||

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ || ೫ ||

ಹಿಮಕುಂದ ಮೃಣಾಲಾಭಂ (ಸಮಾಭಾಸಂ) ದೈತ್ಯಾನಾಂ ಪರಮಂ ಗುರುಮ್ |ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ || ೬ ||

ನೀಲಾಂಜನ-ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ || ೭ ||

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಮ್ |ಸಿಂಹಿಕಾ-ಗರ್ಭ-ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ || ೮ ||

ಪಲಾಶ್-ಪುಷ್ಪ-ಸಂಕಾಶಂ ತಾರಕಾಗ್ರಹ ಮಸ್ತಕಮ್ |ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ || ೯ ||

ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ಸುಸಮಾಹಿತಃ |ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ || ೧೦ ||

ನರನಾರೀ ನೃಪಾಣಾಂ ಚ ಭವೇದ್-ದುಸ್ವಪ್ನನಾಶನಮ್ |ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಮ್ || ೧೧ ||

ಗ್ರಹನಕ್ಷತ್ರಜಾಃ ಪೀಡಾಃ ತಸ್ಕರಾಗ್ನಿ ಸಮುದ್ಭವಾಃ |ತಾಃ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ || ೧೨ ||
|| ಇತಿ ಶ್ರೀವ್ಯಾಸ ವಿರಚಿತ ನವಗ್ರಹ ಸ್ತೋತ್ರಮ್ ಸಂಪೂರ್ಣಮ್ ||

5)ದಾನ ÷ಗ್ರಹಚಾರ ದೋಷ ಪರಿಹಾರದ ಹಲವು ಮಾರ್ಗಗಳಲ್ಲಿ ದಾನವೂ ಒಂದು. ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಪ್ರತಿಮೆ, ರತ್ನ, ವಸ್ತ್ರಗಳನ್ನು ದಾನ ಕೊಡುವುದರ ಮೂಲಕ ಗ್ರಹ ದೋಷ ಪರಿಹಾರವೆಂದು ಶಾಸ್ತ್ರ ಹೇಳುತ್ತದೆ. ಸುಶಕ್ತರು ಈ ನಾಲ್ಕೂ ದಾನಗಳನ್ನು ಕೊಡ ಬಹುದು. ಶಕ್ತಿಗನುಗುಣವಾಗಿ ಒಂದೋ ಎರಡೋ ದಾನ ಮಾಡ ಬಹುದು. ಎಷ್ಟು ದಾನ ಕೊಡುತ್ತಿದ್ದೇನೆ ಎನ್ನುವುದಕ್ಕಿಂತಲೂ ಕೊಡುವಾತನ ನಿರ್ವಂಚನೆ ಬುದ್ಧಿ ಮತ್ತು ಸ್ವೀಕರ್ತೃವಿನ ಪಾತ್ರತೆಯು ದಾನದ ಸಾಫಲ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಪ್ರತಿದಿನ ಮನೆಯಲ್ಲಿ ದೇವರ ಪೂಜೆ(ಸಾಲಿಗ್ರಾಮ ಪೂಜೆ),ಘಂಟಾನಾದ ಶಂಖನಾದ ತುಳಸೀಪೂಜೆ,
ಗೋ ಪೂಜೆ; ದೇವಸ್ಥಾನಕ್ಕೆ ಹೋಗುವುದು;ಸಾಲಿಗ್ರಾಮ ತೀರ್ಥ (ಪ್ರೋಕ್ಷಣೆ) ಸೇವನೆ
ಗಾಯತ್ರೀ ಜಪ, ಘಂಟಾನಾದ, ವಿಷ್ಣು ಸಹಸ್ರ ನಾಮ ಮುಂತಾದ ಸ್ತೋತ್ರ ಪಠಣೆ , ದೇವ; ಗುರು ಮತ್ತು ಪಿತೃಗಳ ಮನಸಾ ಸ್ಮರಣೆ ಮನೆಯಲ್ಲಿ ಹಿರಿಯರ ಆದರಣೆ
ಮನೆಗೆ ಬಂದ ಅತಿಥಿಗೆ ಉಪಚಾರ, ಮುತ್ತೈದೆಗೆ ಅರಿಸಿನ ಕುಂಕುಮ ಕೊಡುವುದು
ವರ್ಷಕ್ಕೆ ಒಂದು ಸಲವಾದರೂ ಕುಲದೇವರ ದರ್ಶನ ;
ಮೂಲ ನಾಗ; ನಂಬಿಕೊಂಡು ಬಂದ ದೈವ ಗಳ ಪೂಜೆ
ಇವುಗಳು ಮನೆಯ “ವಾಸ್ತುದೋಷ” ಕುಟುಂಬದ ಸರ್ವರ ಗ್ರಹಚಾರದೋಷ ಇವುಗಳನ್ನು ನಿವಾರಿಸಲೂ ಸುಲಭ-ಸಾಧನ ಗಳಾಗಿವೆ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564

Tags: #astrologyhoroscopejyotishya
ShareTweetSendShare
Join us on:

Related Posts

ರಾಮನಗರಿಯಲ್ಲೇ ಫೈಸಲಾ ಆಗಲಿ ಧಮ್ ಇದ್ದರೆ ಚುನಾವಣೆಗೆ ನಿಲ್ಲಿ ಎಂದು ಅಖಿಲೇಶ್ ಗೆ ಯೋಗಿ ಆದಿತ್ಯನಾಥ್ ಓಪನ್ ಚಾಲೆಂಜ್

ರಾಮನಗರಿಯಲ್ಲೇ ಫೈಸಲಾ ಆಗಲಿ ಧಮ್ ಇದ್ದರೆ ಚುನಾವಣೆಗೆ ನಿಲ್ಲಿ ಎಂದು ಅಖಿಲೇಶ್ ಗೆ ಯೋಗಿ ಆದಿತ್ಯನಾಥ್ ಓಪನ್ ಚಾಲೆಂಜ್

by Shwetha
October 12, 2026
0

ಉತ್ತರ ಪ್ರದೇಶದ ರಾಜಕೀಯ ರಣಕಣದಲ್ಲಿ ಈಗ ಅಯೋಧ್ಯೆಯ ಕಿಚ್ಚು ಹತ್ತಿಕೊಂಡಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಟೀಕೆಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅತ್ಯಂತ...

ಬಂಧನದಿಂದ ಮುಕ್ತರಾದ ಅಭಿಜೀತ್ ದೀಪ್ಕೆ ಮತ್ತು ತಂಡಕ್ಕೆ ಕೋರ್ಟ್ ವಿಧಿಸಿದ ಆ ಕಠಿಣ ಷರತ್ತುಗಳೇನು? ಒಂದು ವರ್ಷ ಪ್ರತಿಭಟಿಸುವಂತಿಲ್ಲವೇ:ಶಾಂತಿ ಕಾಪಾಡುವ ಬಾಂಡ್ ಗೆ ಸಹಿ ಹಾಕಿದ ಕಾಕ್ರೋಚ್ ಜನತಾ ಪಾರ್ಟಿ ತಂಡ ಉಲ್ಲಂಘಿಸಿದರೆ ಜೈಲು ಗ್ಯಾರಂಟಿನಾ!

ಬಂಧನದಿಂದ ಮುಕ್ತರಾದ ಅಭಿಜೀತ್ ದೀಪ್ಕೆ ಮತ್ತು ತಂಡಕ್ಕೆ ಕೋರ್ಟ್ ವಿಧಿಸಿದ ಆ ಕಠಿಣ ಷರತ್ತುಗಳೇನು? ಒಂದು ವರ್ಷ ಪ್ರತಿಭಟಿಸುವಂತಿಲ್ಲವೇ:ಶಾಂತಿ ಕಾಪಾಡುವ ಬಾಂಡ್ ಗೆ ಸಹಿ ಹಾಕಿದ ಕಾಕ್ರೋಚ್ ಜನತಾ ಪಾರ್ಟಿ ತಂಡ ಉಲ್ಲಂಘಿಸಿದರೆ ಜೈಲು ಗ್ಯಾರಂಟಿನಾ!

by Shwetha
October 12, 2026
0

ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗೆ ಮುಂದಾಗಿ ಬಂಧನಕ್ಕೊಳಗಾಗಿದ್ದ ಜಿರಳೆ ಜನತಾ ಪಕ್ಷದ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರಿಗೆ ಕೊನೆಗೂ...

ರೈತರು ಬರದ ಬೇಗೆಯಲ್ಲಿ ಬೆಂದರೂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್ ಭೀತಿ:ಭ್ರಷ್ಟಾಚಾರ ಮಾಡಿ ಸಿಕ್ಕಿಬೀಳದಂತೆ ಸಿಎಂ ಸಚಿವರಿಗೆ ಟಿಪ್ಸ್ ನೀಡುತ್ತಿದ್ದಾರಾ ಎಂದು ಗುಡುಗಿದ ಎಚ್ ಡಿ ಕುಮಾರಸ್ವಾಮಿ

ರೈತರು ಬರದ ಬೇಗೆಯಲ್ಲಿ ಬೆಂದರೂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್ ಭೀತಿ:ಭ್ರಷ್ಟಾಚಾರ ಮಾಡಿ ಸಿಕ್ಕಿಬೀಳದಂತೆ ಸಿಎಂ ಸಚಿವರಿಗೆ ಟಿಪ್ಸ್ ನೀಡುತ್ತಿದ್ದಾರಾ ಎಂದು ಗುಡುಗಿದ ಎಚ್ ಡಿ ಕುಮಾರಸ್ವಾಮಿ

by Shwetha
October 12, 2026
0

ರಾಜ್ಯದಲ್ಲಿ ಬರಗಾಲದ ಭೀಕರತೆ ತಾಂಡವವಾಡುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈ ಕಷ್ಟಗಳನ್ನು ಆಲಿಸುವ ಬದಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕುಟುಕು ಕಾರ್ಯಾಚರಣೆಯ ಚಿಂತೆ...

ದೇಶ ಕಾಯುವ ಅಪ್ಪಟ ದೇಶಭಕ್ತ ಅಜಿತ್ ದೋವಲ್ ನಿಮಗೆ ಖಳನಾಯಕನೇ ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಭಾರತ

ದೇಶ ಕಾಯುವ ಅಪ್ಪಟ ದೇಶಭಕ್ತ ಅಜಿತ್ ದೋವಲ್ ನಿಮಗೆ ಖಳನಾಯಕನೇ ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಭಾರತ

by Shwetha
October 12, 2026
0

ಭಾರತದ ರಾಜಕೀಯ ಅಖಾಡದಲ್ಲಿ ಟೀಕೆ ಟಿಪ್ಪಣಿಗಳು ಸಹಜ ಆದರೆ ದೇಶದ ಭದ್ರತಾ ವ್ಯವಸ್ಥೆಯ ಬೆನ್ನೆಲುಬಾಗಿರುವ ಅಜಿತ್ ದೋವಲ್ ಅವರಂತಹ ಹಿರಿಯ ಅಧಿಕಾರಿಯನ್ನು ರಾಜಕೀಯ ದಾಳವಾಗಿ ಬಳಸಿರುವುದು ಈಗ...

ಬಿಜೆಪಿಗೆ ಹರಿದುಬಂದ ನೂರಾರು ಕೋಟಿ ದೇಣಿಗೆಯ ಗುಟ್ಟು ರಟ್ಟು ಮಾಡಿದ ಮಸ್ಕ್ :ಅಂಬಾನಿ ಮತ್ತು ಬಿಜೆಪಿ ನಂಟಿನ ಬಗ್ಗೆ ಇಲಾನ್ ಮಸ್ಕ್ ಸ್ಫೋಟಕ ಪೋಸ್ಟ್ ವಿಶ್ವದ ನಂ 1 ಶ್ರೀಮಂತನಿಂದ ಅಂಬಾನಿ ವಿರುದ್ಧ ಬಹಿರಂಗ ಸಮರ

ಬಿಜೆಪಿಗೆ ಹರಿದುಬಂದ ನೂರಾರು ಕೋಟಿ ದೇಣಿಗೆಯ ಗುಟ್ಟು ರಟ್ಟು ಮಾಡಿದ ಮಸ್ಕ್ :ಅಂಬಾನಿ ಮತ್ತು ಬಿಜೆಪಿ ನಂಟಿನ ಬಗ್ಗೆ ಇಲಾನ್ ಮಸ್ಕ್ ಸ್ಫೋಟಕ ಪೋಸ್ಟ್ ವಿಶ್ವದ ನಂ 1 ಶ್ರೀಮಂತನಿಂದ ಅಂಬಾನಿ ವಿರುದ್ಧ ಬಹಿರಂಗ ಸಮರ

by Shwetha
October 12, 2026
0

ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಈಗ ಬಿರುಗಾಳಿ ಎದ್ದಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಇಲಾನ್ ಮಸ್ಕ್ ಮತ್ತು ಭಾರತದ ಉದ್ಯಮಿ ಮುಕೇಶ್ ಅಂಬಾನಿ ನಡುವಿನ ವ್ಯವಹಾರಿಕ ಸಂಘರ್ಷ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram