Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology : ವೈಕುಂಠ ಏಕಾದಶಿ 02-01-2023 ಸೋಮವಾರದ ವಿಶೇಷ ಮಹತ್ವ ನಿಮಗೆ ಗೊತ್ತಾ..!!

Namratha Rao by Namratha Rao
December 26, 2022
in Astrology, News, Newsbeat, ಜ್ಯೋತಿಷ್ಯ
Astrology , vaikunta ekadashi
Share on FacebookShare on TwitterShare on WhatsappShare on Telegram

Astrology : ವೈಕುಂಠ ಏಕಾದಶಿ 02-01-2023 ಸೋಮವಾರದ ವಿಶೇಷ ಮಹತ್ವ ನಿಮಗೆ ಗೊತ್ತಾ..!!

“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.

Related posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023

ಇನ್ನು “ಏಕಾದಶಿ” ಎಂದರೆ

ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ.

ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು.

ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.

ಎಂದರೆ ಶುಚಿರ್ ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : “ಶರೀರಮಾಧ್ಯಂ ಖಲು ಧರ್ಮಸಾಧನಂ”, ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.

ವೈಕುಂಠ ಏಕಾದಶಿಯ ಬಗ್ಗೆ ಕಥೆ ಇಂತಿದೆ :

ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದನು.

ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಜಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ.

ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.

ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ಧಿ ಮುಟ್ಟಿಸಿದರು.

ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು.

ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ.

ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು.

ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜ ರೂಪ ಅರಿಯಲಾರೆವು ಎಂದು ಪರಿತಪಿಸಿದರು.

ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಅದರಂತೆ ಅವರೆಲ್ಲಾ ಮಾಡಲಾಗಿ ಅವರ ಕಣ್ಣಿಗೆ ವೈಕುಂಠ ಕಾಣಿಸಿತು,

ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು “ವೈಕುಂಠಏಕಾದಶಿ” ಎಂದು ಕರೆದಿರಬಹುದೆಂದು ಊಹಿಸಬಹುದು.

ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ.

ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ.

ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು.

ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.

ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು.

ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ವೈಕುಂಠ ಏಕಾದಶಿ…!!!
ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದುಬಂದು ಭಕ್ತರಿಗೆ ದರ್ಶನ ನೀಡುತ್ತಾನೆ.

ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.

ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ

ಉಪದೇಶಿಸಿದ ಎಂಬ ನಂಬಿಕೆ ಇದೆ.
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗು ಜಾಗರಣೆ ಮಾಡಿದರೆ ಒಳ್ಳೆಯದಂತೆ .

ವಿಷ್ಣು ಪುರಾಣದ ಪ್ರಕಾರ ಇಬ್ಬರು ರಾಕ್ಷಸರು ತನಗೆ ವಿರೋದ ವಾಗಿದ್ದರೂ ವೈಕುಂಠ ಏಕಾದಶಿ ದಿನ ತನ್ನ ಬಾಗಿಲನ್ನು ತೆರೆದಿರುತ್ತಾನಂತೆ ಈ ಕತೆಯನ್ನು ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ವೈಕುಂತದ ಬಾಗಿಲನ್ನು ತೆರೆದಿಡುವಂತೆ ಬೇಡಿಕೊಳ್ಳುತ್ತಾರೆ.

ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ . ಮಾಮೂಲಿ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .

ಆದರೆ, ವೈಕುಂಠ ಏಕಾದಶಿದಿನ ಬಾಗಿಲನ್ನು ತೆರೆದಿರುತ್ತಾರೆ .
ವೈಕುಂಠ ಏಕಾದಶಿ ದಿನ ತಿರುಮಲೆಯ ದೇವಾಲಯದಲ್ಲಿರುವ ಉತ್ತರ ದ್ವಾರವನ್ನು ತೆರೆದಿರುತ್ತಾರೆ. ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಬಂದ ಶಕ್ತಿಯಿಂದ ಮೊರಾ ಎಂಬ ರಾಕ್ಷಸನನ್ನು ಸಂಹರಿಸಿದ ದಿನವಂತೆ .

ಮುಕ್ಕೋಟಿ ಏಕಾದಶಿ ದಿನದಂದು ಅಂದರೆ ಧನುರ್ಮಾಸ ಶುಕ್ಲ ಏಕಾದಶಿ ದಿನದಂದು ಉಪಾಸವಿರ ಬೇಕಂತೆ ಇದಕ್ಕೆ ಕಾರಣವೇನೆಂದರೆ..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮೊರಾ ಎಂಬ ರಾಕ್ಷಸನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನಂತೆ ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು .

ಮುಕ್ಕೋಟಿ ಏಕಾದಶಿ ಒಂದು ದಿನ ಉಪವಾಸ ವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆಯೇ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.

Astrology , vaikunta ekadashi , jyothishya

Tags: #astrology#saakshatvhoroscopejyothishya
ShareTweetSendShare
Join us on:

Related Posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

by Namratha Rao
January 26, 2023
0

ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ.. ನವಗ್ರಹಗಳು ನಮ್ಮ ದೇಹದಲ್ಲಿ ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ...

Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

by Namratha Rao
January 26, 2023
0

ಬೆಂಗಳೂರು : ಕರ್ನಾಟಕ ಸಾಫ್ಟ್ ವೇರ್ ಇಂಜಿನಿಯರ್ ಗಳು ಮತ್ತು ಸ್ಟಾರ್ಟ್ಅಪ್ ಗಳಿಗೆ ಅಗ್ರ ಆಯ್ಕೆಯಾಗಿರುವ ಒಂದು ನಗರವಿದ್ದರೆ ಅದು ಬೆಂಗಳೂರು. ಭಾರತದ ಸಿಲಿಕಾನ್ ವ್ಯಾಲಿ ಎಂದು...

elon musk twitter

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ… ಎಲಾನ್ ಮಸ್ಕ್..!!

by Namratha Rao
January 26, 2023
0

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ... ಎಲಾನ್ ಮಸ್ಕ್..!! Twitter ಮಾಲೀಕತ್ವ ಬದಲಾಗಿದಾಗಿನಿಂದಲೂ ಒಂದಲ್ಲಾ ಒಂದು ಬದಲಾವಣೆಗಳಾಗುತ್ತಿವೆ.. ಅಂತೆಯೇ ಟೀಕೆಗೂ ಎಲಾನ್ ಮಸ್ಕ್ ಗುರಿಯಾಗುತ್ತಿದ್ದಾರೆ.. ಎಲೋನ್...

cheetha leopard

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

by Namratha Rao
January 26, 2023
0

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಚಿರತೆ ಕೊಲ್ಲುವಂತೆ ಗ್ರಾಮಸ್ಥರ ಪಟ್ಟು ಕೊನೆಗೂ ಚಿರತೆ ಸ್ಥಳಾಂತರಿಸಿದ...

Pathaan Besharam Rang

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!!

by Namratha Rao
January 26, 2023
0

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!! ಜನವರಿ 25ಕ್ಕೆ  ದೇಶ ಹಾಗೂ ವಿಶ್ವಾದ್ಯಂತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿದೆ… 4...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram