ಭಾರತದಲ್ಲಿ ಬಿಡುಗಡೆಯಾಗಲಿದೆ Asus ZenFone8 ಮೊಬೈಲ್– ಫೀಚರ್ಸ್ ಓದಿ…
ಭಾರತದಲ್ಲಿ Asus 8z ಸರಣಿಯ ಮೊಬೈಲ್ ಗಳ ಬಿಡುಗಡೆ ಖಚಿತವಾಗಿದೆ. Asus 8z ಭಾರತದಲ್ಲಿ ಫೆಬ್ರವರಿ 28 ರಂದು ಬಿಡುಗಡೆಯಾಗಲಿದೆ. ಕಳೆದ ವರ್ಷ ಕಂಪನಿ Asus ZenFone 8 ಮತ್ತು ZenFone 8 Flip ಅನ್ನು ವಿಶ್ವಾದಾದ್ಯಂತ ಬಿಡುಗಡೆ ಮಾಡಿತ್ತು. ಈಗ Asus 8z ಮತ್ತು Asus 8z Flip ಹೆಸರಿನ ಮೊಬೈಲ್ ಗಳನ್ನ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಟ್ರೇಡ್‌ಮಾರ್ಕ್‌ನಿಂದಾಗಿ ಆಸಸ್ ಭಾರತದಲ್ಲಿ ಝೆನ್ ಸರಣಿಯನ್ನು ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. Asus ಇಂಡಿಯಾ ಟ್ವೀಟ್ ಮಾಡುವ ಮೂಲಕ Asus 8z ಬಿಡುಗಡೆಯ ಬಗ್ಗೆ ಮಾಹಿತಿಯನ್ನು ನೀಡಿದೆ. ಫ್ಲಿಪ್‌ಕಾರ್ಟ್ ಮೂಲಕ ಮೊಬೈಲ್ ಬುಕ್ ಮಾಡಬಹುದು.
Asus 8z, Asus 8z ಫ್ಲಿಪ್ ವಿಶೇಷಗಳು.
Asus ZenFone 8 ಸರಣಿಯು ಜಾಗತಿಕ ರೂಪಾಂತರದ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿಯೂ ಸಹ ಪರಿಚಯಿಸಲ್ಪಡುತ್ತದೆ. Asus ZenFone 8 ಮತ್ತು ZenFone 8 Flip ಎರಡೂ ಫೋನ್‌ಗಳು Android 11 ಆಧಾರಿತ ZenUI 8 ಆಪರೇಟಿಂಗ್ ಸಿಸ್ಟಮ್ ಹೊಂದಿವೆ. 120Hz ರಿಫ್ರೆಶ್ ದರದೊಂದಿಗೆ Asus 8z 5.9-ಇಂಚಿನ ಪೂರ್ಣ HD ಪ್ಲಸ್ Samsung AMOLED ಡಿಸ್ಪ್ಲೇಯನ್ನು ಮೊಬೈಲ್ ಹೊಂದಿದೆ.
Asus 8z ಫ್ಲಿಪ್ ಮೊಬೈಲ್ 90Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ ಪೂರ್ಣ HD + Samsung AMOLED ಡಿಸ್ಪ್ಲೇಯನ್ನು ಹೊಂದಿದೆ. ಎರಡೂ ಫೋನ್‌ಗಳಲ್ಲಿ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ 8 GB RAM ಇದೆ. ಫ್ಲಿಪ್ ಮಾಡಲ್ ಮೊಬೈಲ್ ನಲ್ಲಿ 16 GB RAM ಸಹ ತೆಗೆದುಕೊಳ್ಳಬಹುದು. ಎರಡೂ ಫೋನ್‌ಗಳಲ್ಲಿ 256 GB ಮೆಮೋರಿ ಇರುತ್ತದೆ.

Asus 8z ಕ್ಯಾಮೆರಾ Asus 8z ಫ್ಲಿಪ್
Asus ZenFone8 ಮೊಬೈಲಗಳ ಹಿಂಬದಿಯಲ್ಲಿ 2 ಕ್ಯಾಮೆರಾಗಳಿರುತ್ತವೆ. ಇದರಲ್ಲಿ ಪ್ರಾಥಮಿಕ ಲೆನ್ಸ್ 64 ಮೆಗಾಪಿಕ್ಸೆಲ್‌ಗಳು ಮತ್ತು ಎರಡನೇ ಲೆನ್ಸ್ 12 ಮೆಗಾಪಿಕ್ಸೆಲ್ ನಷ್ಟಿರುತ್ತದೆ. ಮೊಬೈಲ್ ಮುಂದಗಡೆ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ZenFone 8 ಫ್ಲಿಪ್ ಮೊಬೈಲ ಹಿಂಬದಿಯಲ್ಲಿ 3 ಕ್ಯಾಮೆರಾ ಗಳಿವೆ. ಇದರಲ್ಲಿ ಒಂದು ಲೆನ್ಸ್ 64 ಮೆಗಾಪಿಕ್ಸೆಲ್‌ಗಳು, ಇನ್ನೊಂದು 12 ಮೆಗಾಪಿಕ್ಸೆಲ್‌ಗಳುತ್ತು ಮೂರನೆಯದು 3x ಆಪ್ಟಿಕಲ್ ಜೂಮ್‌ನೊಂದಿಗೆ 8 ಮೆಗಾಪಿಕ್ಸೆಲ್‌ಗಳು. ಅದರೊಂದಿಗೆ 12 ಮೆಗಾಪಿಕ್ಸೆಲ್‌ಗಳ ಸೆಲ್ಫಿ ಕ್ಯಾಮೆರಾ ಇದೆ. ZenFone 8 4000mAh ಬ್ಯಾಟರಿ ಇದ್ದರೆ Asus ZenFone 8 Flip 5000mAh ಬ್ಯಾಟರಿ ಹೊಂದಿದೆ.








