ಆಸ್ಟ್ರೇಲಿಯಾದಲ್ಲಿ ರಣಭೀಕರ ಪ್ರವಾಹ : ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ..!
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಬಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ನೀರು ಕಾಣಿಸುತ್ತಿದ್ದು, ಆಸ್ಟ್ರೇಲಿಯಾದ ಪೂರ್ವ ಕರಾವಳಿ ತಗ್ಗು ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸತ್ರವ್ಯಸ್ತಗಿಗೊಂಡಿದೆ. ಈ ಪ್ರದೇಶದಲ್ಲಿ ನೆರೆ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
8ನೇ ತರಗತಿ ಫೇಲಾದವನಿಂದ ಶಸ್ತ್ರಚಿಕಿತ್ಸೆ- ತಾಯಿ, ಮಗು ದುರ್ಮರಣ
ಸಿಡ್ನಿಯ ಉತ್ತರ ಭಾಗಕ್ಕೆ ಜನರನ್ನ ಜನರನ್ನು ಸ್ಥಳಾಂತರಿಸಲಾಗಿದ್ದು, ದಕ್ಷಿಣ ಕರಾವಳಿಯತ್ತ ಮಳೆ ಸಾಗುತ್ತಿರುವುದರಿಂದ ಇನ್ನೂ ಹಲವರಿಗೆ ಆಶ್ರಯ ಕಲ್ಪಿಸಬೇಕಾದ ಅವಶ್ಯಕತೆ ಎದುರಾಗಿದೆ.
ಯುವತಿಯನ್ನ ಗುಂಡಿಟ್ಟು ಕೊಂದ ಭಗ್ನ ಪ್ರೇಮಿ..!
ಸಿಡ್ನಿಯ ಪೋರ್ಟ್ ಮ್ಯಾಕ್ಟರಿಯ ಬಳಿಯ ಹೇಸ್ಟಿಂಗ್ಸ್ ನದಿಯಲ್ಲಿ ಪ್ರವಾಹ ಮಟ್ಟ ಹೆಚ್ಚಾಗಿದೆ. ಈ ನಡುವೆ ಇಂದೂ ಸಹ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರಿಂದ ಪ್ರವಾಹದ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜನರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಲಾಗಿದೆ.
ಹೇಗಿದೆ ಗೊತ್ತಾ ಯುವರತ್ನ ಟ್ರೈಲರ್..? ಸಿನಿಮಾ ಕಥೆ ಇದೆನಾ..?