ಭಾರತದಲ್ಲಿ ಜನವರಿ 3 ರಂದು 37,379 ಹೊಸ ಕೋವಿಡ್ ಕೇಸ್ ಪತ್ತೆ….
ಭಾರತದಲ್ಲಿ ಮಂಗಳವಾರ 37,379 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿವೆ. ಇದು ಹಿಂದಿನ ದಿನಕ್ಕಿಂತ 10.75% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಂಚಿಕೊಂಡ ಬುಲೆಟಿನ್ ತಿಳಿಸಿದೆ.
2021 ರ ಸೆಪ್ಟೆಂಬರ್ ತಿಂಗಳ ನಂತರ ಅತಿಹೆಚ್ಚು ಕೋವಿಡ್ ಪ್ರಕರನಗಳು ಜನವರಿ 3 ರಂದು ವರದಿಯಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿ ಕ್ರಮವಾಗಿ 568 ಮತ್ತು 382 ಸೋಂಕುಗಳೊಂದಿಗೆ ಭಾರತದ ಓಮಿಕ್ರಾನ್ ಸಂಖ್ಯೆಯಲ್ಲಿ ಮೊದಲೆರೆಡು ಸ್ಥಾನದಲ್ಲಿವೆ.
ಸೋಮವಾರದಂದು 33,750 ಹೊಸ ಸೋಂಕುಗಳು ವರದಿಯಾಗುವುದರೊಂದಿಗೆ ಭಾರತವು ದೈನಂದಿನ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿರುವ ಸತತ ಏಳನೇ ದಿನವಾಗಿದೆ. ಮಂಗಳವಾರದ ಅಂಕಿಅಂಶಗಳ ನಂತರ, ಭಾರತದ ಒಟ್ಟು ಸಂಖ್ಯೆ 3,49,60,261 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಬುಲೆಟಿನ್ ಬಹಿರಂಗಪಡಿಸಿದೆ.
ಕೋವಿಡ್ -19 ರ ಹೆಚ್ಚು ಹರಡುವ ಓಮಿಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆಯು ಭಾರತದಲ್ಲಿ 1,892 ಕ್ಕೆ ತಲುಪಿದೆ.








