ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಹಿಂದೂ ದೇವಾಲಯ(Hindu Temple)ದ ಮೇಲೆ ಖಲಿಸ್ತಾನಿ ಬೆಂಬಲಿಗರು ಮತ್ತೊಮ್ಮೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಹಿಂದೂ ದೇವಸ್ಥಾನದ ಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ. ಅಲ್ಲದೇ, ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಶೇರಾವಾಲಿ ದೇವಾಲಯವು ಕ್ಯಾಲಿಫೋರ್ನಿಯಾದ ಹೇವರ್ಡ್ ನಗರದಲ್ಲಿದೆ. ಸ್ವಾಮಿನಾರಾಯಣ ದೇವಸ್ಥಾನವೂ ಇದ್ದು, ಎರಡು ವಾರಗಳ ಹಿಂದೆ ಖಾಲಿಸ್ತಾನ್ ಬೆಂಬಲಿಗರು ದಾಳಿ ನಡೆಸಿದ್ದರು.
ಹಿಂದೂ ಅಮೇರಿಕನ್ ಫೌಂಡೇಶನ್ (HAF) ಸಹ ಸಾಮಾಜಿಕ ಮಾಧ್ಯಮದಲ್ಲಿ ಬರಹದ ಚಿತ್ರ ಹಂಚಿಕೊಂಡಿದೆ. ಹಿಂದೂ ವಿರೋಧಿ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಭದ್ರತೆಗಾಗಿ ಕ್ಯಾಮೆರಾಗಳು ಹಾಗೂ ಅಲಾರಾಂ ಸಿಸ್ಟಮ್ ಗಳನ್ನು ಸ್ಥಾಪಿಸಲು ಮನವಿ ಮಾಡಿದ್ದಾರೆ.








