ಉಡುಪಿ: ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಪೋಸ್ಟ್ (Instagram) ಗಮನಿಸಿ ಬಾರ್ ಮೇಲೆ ದಾಳಿ ನಡೆಸಿದಾಗ ವಿದ್ಯಾರ್ಥಿಗಳು ಇರುವುದು ಕಂಡು ಬಂದಿದೆ.
ಮಣಿಪಾಲ ಪೊಲೀಸರು (Manipal Police) ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಎಸ್ ಸ್ಟೇಸಿ ಬಾರ್ ನಲ್ಲಿ ಅನುಮತಿ ಇಲ್ಲದೆ ಡಿಜೆ ಪಾರ್ಟಿಯಲ್ಲಿ ಮಣಿಪಾಲದ ವಿದ್ಯಾರ್ಥಿಗಳು (Manipal Students) ಭಾಗಿಯಾಗಿದ್ದರು. ಹುಕ್ಕಾ, ಮದ್ಯ ಸೇವನೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಸದ್ಯ ಅನುಮತಿ ಇಲ್ಲದೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.