ಚಾಮರಾಜನಗರ: ದಕ್ಷಿಣಕನ್ನಡ ಜಿಲ್ಲೆ ಹೊರತು ಪಡಿಸಿ ಬೇರೆಡೆ ಸೇಂದಿ ಇಳಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಇಳಿಸುವುದು ಮತ್ತು ಸಂಗ್ರಹಿಸಿಡುವುದು ಅಪರಾಧವಾಗಿದೆ. ಈ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 82 ಲೀಟರ್ ಸೇಂದಿ ಪತ್ತೆಯಾಗಿದೆ.
ಬಂಧಿತರು:
ಕುಮಾರ್
ಕೊಳತ್ತೂರು
ಇವರು ಉಮ್ಮತ್ತೂರು ಗ್ರಾಮದ ನಿವಾಸಿ ಪುಟ್ಟಣ್ಣ ಎಂಬುವರ ತೋಟದಲ್ಲಿ ಅಕ್ರಮವಾಗಿ ಸುಮಾರು 82 ಲೀಟರ್ ಸೇಂದಿಯನ್ನು ಇಳಿಸಿ, ಸಂಗ್ರಹಿಸಿ ಮಾರಾಟ ಮಾಡಲು ತಯಾರಿ ನಡೆಸಿದ್ದರು.
ತೋಟದಲ್ಲಿ ಸೇಂದಿ ಸಂಗ್ರಹಿಸಿರುವ ಖಚಿತ ಮಾಹಿತಿಯ ಮೇರೆಗೆ ಕುದೇರು ಪೊಲೀಸ್ ಠಾಣೆಯ ಪಿಎಸ್ ಐ ಕುಮದಾ ನೇತೃತ್ವದಲ್ಲಿ, ಪೊಲೀಸ್ ಸಿಬ್ಬಂದಿ ನಾಗನಾಯಕ, ಉಮೇಶ್ ಹಾಗೂ ವಿಜಯಕುಮಾರ ದಾಳಿ ನಡೆಸಿ, ಆರೋಪಿ ಕುಮಾರ್ ಬಿನ್ ಪಳನಿಸ್ವಾಮಿ ಹಾಗೂ ಕೊಳತ್ತೂರು ಎಂಬುವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.