ಬೆಳಗಾವಿ: ಸಿ.ಟಿ. ರವಿ ಜೊತೆಗಿದ್ದವರು ಧೃತರಾಷ್ಟ್ರರಂತೆ ವರ್ತಿಸಿದರು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಣ್ಣೀರು ಸುರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ (Ambedkar) ಅವರ ಬಗ್ಗೆ ಅವಹೇಳನ ಖಂಡಿಸಿ ಧರಣಿ ಮಾಡುತ್ತಿದ್ದ ಸಂದರ್ಭದಲ್ಲಿ ನಾವು ಧರಣಿ ನಡೆಸುತ್ತಿದ್ದೇವು. ನಾನು ನನ್ನ ಸೀಟಿನಲ್ಲಿ ತಾಳ್ಮೆಯಿಂದ ಕುಳಿತಿದ್ದೆ. ಆಗ ಸಿ.ಟಿ. ರವಿ ಅವರು ರಾಹುಲ್ ಡ್ರಗ್ ಎಡಿಕ್ಟ್ ಅಂದ್ರು. ಹೀಗೆ ಹಲವು ಬಾರಿ ಹೇಳಇದರು. ಆಗ ಅವರ ಅಪಘಾತ ಪ್ರಕರಣ ಪ್ರಸ್ತಾಪಿಸಿದೆ. ಅದಕ್ಕೆ ಆ ಪದ ಉಪಯೋಗಿಸಿದ್ದಾರೆ. ಒಮ್ಮೆ ಅಲ್ಲ ಹತ್ತು ಬಾರಿ ಹೇಳಿದ್ದಾರೆ ಎಂದು ಕಣ್ಣೀರು ಸುರಿಸಿದ್ದಾರೆ.
ನಾನು ಒಬ್ಬ ತಾಯಿ. ಅಕ್ಕ ಇದ್ದಂತೆ. ವಿಧಾನ ಪರಿಷತ್ ಎಂದರೆ ಅದು ಚಿಂತಕರ ಹಾಗೂ ಬುದ್ಧಿವಂತರ ಛಾವಡಿ. ಅಲ್ಲಿ ಇಂತಹ ಪದ ಬಳಕೆ ಬರಬಾರದು. ಇಂತಹ ಪದ ಬಳಕೆ ಮಾಡಿದರೂ ಅಲ್ಲಿದ್ದವರು ಧೃತರಾಷ್ಟ್ರನಂತೆ ವರ್ತಿಸಿದರು. ಅವರು ಯಾವ ಪುರುಷಾರ್ಥಕ್ಕೆ ಸುಮ್ಮನಿದ್ದರು ಎಂದು ಭಾವುಕರಾಗಿದ್ದಾರೆ.
ನನಗೆ ಕುಟುಂಬ, ಮತದಾರರು ಹಾಗೂ ಕಾಂಗ್ರೆಸ್ ಬೆನ್ನಿಗಿದೆ. ಸಿ.ಟಿ. ರವಿ ತೇಜೋವಧೆ ಮಾಡಲು ಯತ್ನಿಸಿದರು. ಆದರೆ, ನಾನು ಇದಕ್ಕೆ ಹೆದರುವುದಿಲ್ಲ. ನನ್ನನ್ನು ನೋಡಿ ಹಲವರು ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.