ವಿಆರ್ ಎಲ್ ಬಸ್ ನಲ್ಲಿ ದಾಖಲೆ ಇಲ್ಲದ ಚಿನ್ನ-ಬೆಳ್ಳಿ ಸಾಗಾಟ ಪತ್ತೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಚಿನ್ನ-ಬೆಳ್ಳಿ ಪತ್ತೆ ಹಚ್ಚಿದ್ದಾರೆ. ಮುಂಬಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಆರ್ ಎಲ್ ಬಸ್ ನಲ್ಲಿ ಭವರಸಿಂಗ್ ಎಂಬ ವ್ಯಕ್ತಿ ಚಿನ್ನ ಹಾಗೂ ಬೆಳ್ಳಿ ಸಾಗಿಸುತ್ತಿದ್ದ ಎನ್ನಲಾಗಿದೆ.
ಧಾರವಾಡ ಹೊರವಲಯದ ನರೇಂದ್ರ ಬೈಪಾಸ್ ಬಳಿ ಬಸ್ ತಡೆದು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಭವರ್ ಸಿಂಗ್ ಮುಂಬಯಿನಿಂದ ಬಸ್ ನಲ್ಲಿ ಬಂದಿದ್ದ. ಎರಡು ಬ್ಯಾಗ್ ನಲ್ಲಿ ಚಿನ್ನಾಭರಣ ಸಾಗಾಟ ಮಾಡಲು ಯತ್ನಿಸಿದ್ದಾನೆ. ಸುಮಾರು 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಇರುವ ಶಂಕೆ ವ್ಯಕ್ತವಾಗಿದ್ದು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.