ಶಿವಮೊಗ್ಗ: ರೌಡಿಶೀಟರ್ ಒಬ್ಬಾತ ಪೊಲೀಸರ (Police) ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವ ಘಟನೆ ನಡೆದಿದೆ.
ಹೀಗಾಗಿ ರೌಡಿಶೀಟರ್ ಗೆ ಪೊಲೀಸರು ಬೆಳ್ಳಂಬೆಳಿಗ್ಗೆ ಗುಂಡೇಟಿನ ರುಚಿ ನೀಡಿದ್ದಾರೆ. ಮಂಜುನಾಥ ಅಲಿಯಾಸ್ ಓಲಂಗ ಎಂಬ ರೌಡಿಶೀಟರ್ ಈ ರೀತಿ ಗುಂಡು ತಿಂದವ. ಮಹಜರು ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ವ್ಯಕ್ತಿಯೊಬ್ಬರಿಗೆ ಇರಿದಿದ್ದ ಕತ್ತಿಯನ್ನೇ ಬಳಸಿ ಪೊಲೀಸರ ಮೇಲೆಯೂ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಕೂಡಲೇ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಸಿಬ್ಬಂದಿ ರವಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಸಿದ್ದೇಗೌಡ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಓಲಂಗ ಮೂರು ದಿನಗಳ ಹಿಂದೆ ಫ್ರೀಡಂ ಪಾರ್ಕ್ ಹತ್ತಿರ ಶಶಿ ಎಂಬುವವರಿಗೆ ಚಾಕು ಇರಿದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಹೀಗಾಗಿ ಮಹಜರು ನಡೆಸಲು ಕರೆದೊಯ್ದಿದ್ದಾಗ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.