ಗಾಂಧಿನಗರ : ಅಶ್ಲೀಲ ವೀಡಿಯೋದಲ್ಲಿರುವುದು ತನ್ನ ಪತ್ನಿ ಎಂದು ಶಂಕಿಸಿ ವ್ಯಕ್ತಿಯೊಬ್ಬ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ (Rajkot) ನಡೆದಿದೆ.
ಹರೇಶ್ ಭೂಪ್ಕರ್ (51) ಎಂಬಾತನೇ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿ. ಗೀತಾ ಭೂಪ್ಕರ್ (45) ಹಲ್ಲೆಗೊಳಗಾದ ಮಹಿಳೆ. ಈ ಸಂದರ್ಭದಲ್ಲಿ ದಂಪತಿಯ ಪುತ್ರಿ ತಾಯಿಯ ರಕ್ಷಣೆಗೆ ಬಂದಿದ್ದು, ಅವರ ಮೇಲೆಯೂ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಕೆಟಿಂಗ್ ಉದ್ಯೋಗ ಮಾಡುತ್ತಿದ್ದ ಆರೋಪಿ, ಹೊಸ ಮೊಬೈಲ್ ಖರೀದಿಸಿದ್ದ. ಮೊಬೈಲ್ ಖರೀದಿಸಿದ ನಂತರ ಅಶ್ಲೀಲ ವೀಡಿಯೋ ವ್ಯಸನಕ್ಕೆ ಅಂಟಿಕೊಂಡಿದ್ದ. ಈ ಹಿಂದೆಯೂ ಗೀತಾ ಅವರ ಮೇಲೆ ತಮ್ಮ ಗೆಳೆಯನೊಂದಿಗೆ ಪೋರ್ನ್ ವೀಡಿಯೊಗಳಲ್ಲಿ ನಟಿಸುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಮಹಿಳೆ ದೂರು ಕೂಡ ನೀಡಿದ್ದರು.
ಹಲ್ಲೆಯ ನಂತರ ಗೀತಾ ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾನಿಲಯ ಠಾಣೆ ಪೊಲೀಸರು (Police) ಐಪಿಸಿ ಸೆಕ್ಷನ್ 324ರ (ಹಲ್ಲೆ) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಗಂಭೀರವಾಗಿರುವ ಗೀತಾ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.