ಜಾರಿ ನಿರ್ದೇಶನಾಲಯ (ED) ವಿರುದ್ಧ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡುತ್ತಾ, ಇಡಿ ತನಿಖೆ ನಡೆಸುತ್ತಿದೆ ಎಂದು ಅವರು ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ತಮ್ಮ ವಿರುದ್ಧ ತನಿಖೆ ಉದ್ದೇಶಪೂರ್ವಕವಾಗಿದ್ದು, ರಾಜಕೀಯ ಪ್ರೇರಿತ ದಾಳಿಯ ಭಾಗವಾಗಿದೆ. ಅಕ್ರಮ ಹಣ ವರ್ಗಾವಣೆಯ ಆರೋಪಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ. ಇದು ನನ್ನ ರಾಜಕೀಯ ಶಕ್ತಿಯನ್ನು ಕಡಿಮೆ ಮಾಡಲು ನಡೆಸಲಾಗುತ್ತಿರುವ ಕೃತ್ಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಡಿಯಿಂದ ರಿಲೀಸ್ ಮಾಡಲಾದ ವರದಿ ಪೂರಕ ಮಾಹಿತಿ ಅಥವಾ ಸಾಕ್ಷ್ಯಾಧಾರಗಳಿಲ್ಲದ ಸೀಜ್ ರಿಪೋರ್ಟ್ ಅಷ್ಟೇ ಎಂದು ಅವರು ಹೇಳಿದರು. ಇದು ನನ್ನ ಇಮೇಜ್ನ್ನು ಡ್ಯಾಮೇಜ್ ಮಾಡಲು ನಡೆಯುತ್ತಿರುವ ಯತ್ನವಾಗಿದೆ, ಎಂದು ಸಿದ್ದರಾಮಯ್ಯನವರು ಆರೋಪಿಸಿದರು.
EDಯ ತನಿಖಾ ಪ್ರಕ್ರಿಯೆಯ ಕುರಿತು ಮುಕ್ತವಾಗಿ ಮಾತನಾಡಿದ ಅವರು, ED ತಮ್ಮ ವಿರುದ್ಧ ರಾಜಕೀಯ ದೌರ್ಜನ್ಯಕ್ಕೆ ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.