ಆಡಿಯಿಂದ ಹೊಸ ಮೂರು ಎಲೆಕ್ಟ್ರಿಕ್ ಎಸ್ ಯುವಿಗಳ ಬಿಡುಗಡೆ – ವಿಶೇಷತೆಗಳೇನು..?
ಬೆಂಗಳೂರು : ಜರ್ಮನಿಯ ಮೂಲದ ದುಬಾರಿ ಕಾರುಗಳಲ್ಲಿ ಒಂದೆನಿಸಿಕೊಂಡಿರುವ ಆಡಿ #Audi ಇಂದು 3 ಎಲೆಕ್ಟ್ರಿಕ್ ಎಸ್ಯುವಿಗಳನ್ನ ಬಿಡುಗಡೆ ಮಾಡಿದೆ. ಆಡಿ ಇ-ಟ್ರೊನ್ 50, ಆಡಿ ಇ-ಟ್ರೊನ್, ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ 55 ಮಾಡೆಲ್ ಗಳನ್ನ ಬಿಡುಗಡೆ ಮಾಡಿದೆ.
ಈ ಐಷಾರಾಮಿ ಕಾರುಗಳು ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು , ಆಕರ್ಷಕವಾಗಿಯೂ ಇದ್ದು, ಗಮನ ಸೆಳೆಯುತ್ತಿದೆ.. ಆಡಿ ಇ-ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ ಮುಂಬದಿ ಹಾಗೂ ಹಿಂಬದಿಯಲ್ಲಿ ಎರಡು ಅಸಾಧಾರಣ ಡೈನಾಮಿಕ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ.
ಈ ಬಗ್ಗೆ ಮಾತನಾಡಿ ಮಾಹಿತಿ ಹಂಚಿಕೊಂಡಿರುವ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬಿರ್ ಸಿಂಗ್ ಧಿಲ್ಲೋನ್, ಭಾರತದಲ್ಲಿ ನಾವು ಇ-ಟ್ರೊನ್ ಬ್ರಾಂಡ್ ಬಿಡುಗಡೆ ಮಾಡುತ್ತಿರುವುದರಿಂದ ಇಂದು ನಮಗೆ ಅತ್ಯಂತ ದೊಡ್ಡ ದಿನವಾಗಿದೆ. ಇ-ಟ್ರೊನ್ ಬ್ರಾಂಡ್ ಅಡಿಯಲ್ಲಿ ನಾವು ಒಂದಲ್ಲ ಮೂರು ಎಸ್ಯುವಿಗಳನ್ನು ನಮ್ಮ ವಿದ್ಯುದೀಕರಣ ಪ್ರಯಾಣದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ಆಡಿ ಇ-ಟ್ರೊನ್ 50, ಆಡಿ ಇ-ಟ್ರೊನ್ 55 ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ 55 ಐಷಾರಾಮ, ಶೂನ್ಯ ಹೊರಸೂಸುವಿಕೆ, ಕಾರ್ಯಕ್ಷಮತೆ ಮತ್ತು ಪ್ರತಿನಿತ್ಯದ ಬಳಕೆಯ ಪರಿಪೂರ್ಣ ಸಂಯೋಜನೆಯಾಗಿವೆ. ಮೂರು ಕೊಡುಗೆಗಳೊಂದಿಗೆ ನಾವು ಪ್ರತಿ ಬಗೆಯ ಇವಿ ಗ್ರಾಹಕರಿಗೆ ಸಣ್ಣ ಆದರೆ ಬೆಳೆಯುತ್ತಿರುವ ಐಷಾರಾಮಿ ಎಸ್ಯುವಿ ಕ್ಷೇತ್ರಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಮೊಬಿಲಿಟಿಗೆ ಸುಲಭ ಪರಿವರ್ತನೆಯನ್ನು ಸರಳಗೊಳಿಸಲು ನಾವು ಆಫ್ಟರ್-ಸೇಲ್ಸ್, ಚಾರ್ಜಿಂಗ್ ಮತ್ತು ಮಾಲೀಕತ್ವದ ಹಲವಾರು ಅನುಕೂಲಗಳು ಮತ್ತು ಪ್ಯಾಕೇಜ್ಗಳನ್ನು ನೀಡುತ್ತಿದ್ದೇವೆ. ಇದನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಈ ವರ್ಗದ ಅತ್ಯುತ್ತಮ 3 ವರ್ಷ ಬೈಬ್ಯಾಕ್ ಕೂಡಾ ನೀಡುತ್ತಿದ್ದೇವೆ. ಇದು ಆಡಿ ಇಂಡಿಯಾದ ಎಲೆಕ್ಟ್ರಿಕ್ ಪ್ರಯಾಣದ ಪ್ರಾರಂಭವಷ್ಟೇ ಮತ್ತು ನೀವು ಮುಂದಿನ ಇವಿ ಕೊಡುಗೆಯನ್ನು ಬಹಳ ಬೇಗನೆ ಆಲಿಸುತ್ತೀರಿ ಎಂದು ಹೇಳಿದ್ದಾರೆ.