Aus Open : ಹಾಲಿ ಚಾಂಪಿಯನ್ ನಡಾಲ್ಗೆ ಪ್ರಯಾಸದ ಗೆಲುವು…
ಹಾಲಿ ಚಾಂಪಿಯನ್ ರಾಫಾಲ್ ನಡಾಲ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಕಠಿಣ ಸವಾಲು ಎದುರಿಸಿ ಶುಭಾರಂಭ ಮಾಡಿದ್ದಾರೆ. ಎರಡನೆ ಸುತ್ತು ತಲುಪಿದ್ದಾರೆ. ಇಲ್ಲಿನ ರೊಡ್ ಲಾವೆರ್ ಅರೆನಾ ಅಂಗಳದಲ್ಲಿ ಗ್ರೇಟ್ ಬ್ರಿಟನ್ನ ಜಾಕ್ ಡ್ರಾಪೆರ್ ವಿರುದ್ಧ ಮೂರು ವರೆಗಂಟೆಗಳ ಕಾಲ ಹೋರಾಡಿ 7-5,2-6, 6-4,6-1 ಅಂಕಗಳಿಂದ ಗೆದ್ದುಕೊಂಡರು.
ನಡಾಲ್ ಒಳ್ಳೆಯ ಲಯದಲ್ಲಿಲ್ಲ ಆದರೂ ಡ್ರಾಪೆರ್ ವಿರುದ್ಧ ಗೆಲುವು ಸಾಸಿದರು. ನಡಾಲ್ಗೆ ಇದು ವರ್ಷದ ಮೊದಲ ಗೆಲುವಾಗಿದೆ. ಕಳೆದ ಆವೃತ್ತಿಯಲ್ಲಿ ಜಾಕ್ ಡ್ರಾಪೆರ್ 7 ಟೂರ್ನಿಯಲ್ಲಿ 6 ಟೂರ್ನಿಗಳನ್ನು ಸೋತಿದ್ದರು. ಕಳೆದ ಬಾರಿಯ ರನ್ನರ್ಅಪ್ ಡೇನಿಯಲ್ ಮೆಡ್ಡೆವ್ ಯುಎಸ್ನ ಮಾರ್ಕಸ್ ಗಿರೊನ್ ವಿರುದ್ಧ 6-0, 6-1, 6-2 ಅಂಕಗಳಿಂದ ಗೆದ್ದರು.
ಇನ್ನು ಮಹಿಲಾ ಸಿಂಗಲ್ಸ್ ವಿಭಾಗದಲ್ಲಿ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಜರ್ಮನಿಯ ಜುಲೆ ನೀಮೀಯರ್ ವಿರುದ್ಧ 6-4, 7-5 ಅಂಕಗಳಿಂದ ಗೆದ್ದು ಶುಭಾರಂಭ ಮಾಡಿದರು. ಮಾಜಿ ಚಾಂಪಿಯನ್ಗಳಾದ ಯುಎಸ್ನ ಸೋಫಿಯಾ ಕೆನಿನ್ ಎದುರಾಳಿ ವಿಕ್ಟೋರಿಯಾ ಅಜಾರೆಂಕಾ ವಿರುದ್ಧ 6-4, 7-6(3) ಅಂಕಗಳಿಂದ ಮಣಿಸಿದರು.
ಪುರುಷರ ವಿಭಾಗದಲ್ಲಿ ಪೋಲೆಂಡ್ನ ಹುಬರ್ಟ್ ಹುರ್ಕಾಜ್ ಪೆಡ್ರೊ ಮಾರ್ಟಿನೆಜ್ ವಿರುದ್ಧ 7-6(1), 6-2, 6-2 ಅಂಕಗಳಿಂದ ಗೆದ್ದರು. ಆಸ್ಟ್ರೇಲಿಯಾದ ಸೆಬಾಸ್ಟಿನ್ ಬೆಜ್ ಆಸ್ಟ್ರೇಲಿಯಾದ ಜಾಸನ್ ಕಬ್ಲರ್ ವಿರುದ್ಧ 6-4, 6-4, 6-4 ಅಂಕಗಳಿಂದ ಗೆದ್ದುಕೊಂಡರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜೆಕ್ನ ಪೆಟ್ರಾ ಕ್ವಿಟೊವಾ ಬೆಲ್ಜಿಯಂನ ಅಲಿಸನ್ ವಾನ್ ಯುಟ್ವಾಂಕ್ ವಿರುದ್ಧ 7-6(3), 6-2 ಅಂಕಗಳಿಂದ ಗೆದ್ದರು.
Aus Open: Tough win for defending champion Nadal…








