ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

AUS v AFG: ಆಸೀಸ್‌ ವಿರುದ್ಧ ಭರ್ಜರಿ ಶತಕ: ಇತಿಹಾಸ ಬರೆದ ಇಬ್ರಾಹಿಂ ಝದ್ರಾನ್‌ ‌

C Dinesh by C Dinesh
November 7, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Ibrahim Zadran

Ibrahim Zadran

Share on FacebookShare on TwitterShare on WhatsappShare on Telegram

ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ ಗಮನ ಸೆಳೆದಿರುವ ಅಫ್ಘಾನಿಸ್ತಾನ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಇಬ್ರಾಹಿಂ ಝದ್ರಾನ್‌(129*) ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಕ್ಯಾಪ್ಟನ್‌ ಆಯ್ಕೆಗೆ ತಕ್ಕಂತೆ ಬ್ಯಾಟಿಂಗ್‌ ಪ್ರದರ್ಶಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಇಬ್ರಾಹಿಂ ಝದ್ರಾನ್‌(129* ರನ್‌, 143 ಬಾಲ್‌, 8 ಬೌಂಡರಿ, 3 ಸಿಕ್ಸ್‌) ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಆಸ್ಟ್ರೇಲಿಯದ ಕಠಿಣ ಬೌಲಿಂಗ್‌ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಝದ್ರಾನ್‌, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕ ಬಾರಿಸಿ ಮಿಂಚಿದರು.

Related posts

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

February 3, 2026
ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

February 3, 2026

Ibrahim Zadran

ಅಲ್ಲದೇ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ ಇಬ್ರಾಹಿಂ ಝದ್ರಾನ್‌, ಆ ಮೂಲಕ ಅಫ್ಘಾನಿಸ್ತಾನದ ಪರವಾಗಿ ಏಕದಿನ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಅಫ್ಘಾನ್‌ ಬ್ಯಾಟರ್‌ ಎಂಬ ಹೆಗ್ಗಳಿಕೆ ಪಡೆದರಲ್ಲದೆ, ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದರು. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪರವಾಗಿ ಶಮೀವುಲ್ಲ ಶಿನ್ವಾರಿ ಅವರ 2015ರ ವಿಶ್ವಕಪ್‌ನಲ್ಲಿ 96 ರನ್‌ಗಳಿಸಿದ್ದು ಅಫ್ಘಾನಿಸ್ತಾನ ತಂಡದ ಪರವಾಗಿ ಈವರೆಗಿನ ಗರಿಷ್ಠ ಸ್ಕೋರ್‌ ಆಗಿತ್ತು. ಅಲ್ಲದೇ ಪ್ರಸಕ್ತ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪರವಾಗಿ ಇಬ್ರಾಹಿಂ ಝದ್ರಾನ್‌(87) ಪಾಕಿಸ್ತಾನದ ವಿರುದ್ಧ ಗರಿಷ್ಠ ಸ್ಕೋರ್‌ಗಳಿಸಿದ್ದರೆ. ಹಶ್ಮತುಲ್ಲಾ ಶಹೀದಿ(80) ಭಾರತದ ವಿರುದ್ಧ ಹಾಗೂ ರಹಮನುಲ್ಲಾ ಗುರ್ಬಾಜ಼್(80) ಇಂಗ್ಲೆಂಡ್‌ ವಿರುದ್ಧ ಭರ್ಜರಿ ಬ್ಯಾಟಿಂಗ್‌ನ ಮೂಲಕ ಅಫ್ಘಾನಿಸ್ತಾನದ ಪರವಾಗಿ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ಬಾರಿಸಿದ್ದರು.

Ibrahim Zadran

ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ 4ನೇ ಕಿರಿಯ ಬ್ಯಾಟರ್‌:
ವಿಶ್ವಕಪ್‌ನಲ್ಲಿ ಮೊದಲ ಶತಕ ಸಿಡಿಸಿ ದಾಖಲೆ ಬರೆದ ಇಬ್ರಾಹಿಂ ಝದ್ರಾನ್‌, ಇದರ ಜೊತೆಗೆ ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ 4ನೇ ಕಿರಿಯ ಆಟಗಾರ ಎನಿಸಿದರು. ಈ ಹಿಂದೆ ಐರ್ಲೆಂಡ್‌ನ ಪೌಲ್‌ ಸ್ಟಿರ್ಲಿಂಗ್‌(20 ವರ್ಷ, 196ದಿನ) 2011ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್‌ ವಿರುದ್ಧ ಸೆಂಚುರಿ ಬಾರಿಸಿ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರು. ನಂತರದಲ್ಲಿ 1996ರಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌(21 ವರ್ಷ, 76 ದಿನ), 2019ರಲ್ಲಿ ಶ್ರೀಲಂಕಾದ ಅವಿಷ್ಕಾ ಫರ್ನಾಂಡೋ(21 ವರ್ಷ, 87 ದಿನ) ಮೊದಲ ಮೂರು ಸ್ಥಾನದಲ್ಲಿದ್ದರು.

ಅಫ್ಘಾನ್‌ ಭರ್ಜರಿ ಮೊತ್ತ:
ಆರಂಭಿಕ ಬ್ಯಾಟರ್‌ ಇಬ್ರಾಹಿಂ ಝದ್ರಾನ್‌(129*) ಅವರ ಜವಾಬ್ದಾರಿಯ ಬ್ಯಾಟಿಂಗ್‌ ನೆರವಿನಿಂದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 291/5 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಇವರಿಗೆ ಉತ್ತಮ ಸಾಥ್‌ ನೀಡಿದ ರಶೀದ್‌ ಖಾನ್‌(35*), ರಹಮತ್‌ ಶಾ(30) ಅವರು ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಪರ ಹೇಜಲ್ವುಡ್‌ 2, ಸ್ಟಾರ್ಕ್‌, ಜ್ಹಂಪ ಹಾಗೂ ಮ್ಯಾಕ್ಸ್‌ವೆಲ್‌ ತಲಾ 1 ವಿಕೆಟ್‌ ಪಡೆದರು.

AUS v AFG, Afghanistan, Ibrahim Zadran, World Cup, ODI Cricket

Tags: AfghanistanAUS v AFGIbrahim ZadranODI cricketWorld Cup
ShareTweetSendShare
Join us on:

Related Posts

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

by admin
February 3, 2026
0

ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

by Shwetha
February 3, 2026
0

ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿರುವ ಈ ಮೆಗಾ ಟೂರ್ನಿಯು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7...

Inderjit Singh Bindra: The bold administrator who changed the face of Indian cricket..!

ಇಂದರ್‌ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್‌ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!

by admin
January 29, 2026
0

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್‍ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...

CM Cup 2026 Jersey Unveiled - Uniquely Concepted Shuttle Badminton Tournament to be Held on Feb. 21-22

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ – ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ

by admin
January 27, 2026
0

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ * ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ * * ಸಚಿವರು, ಶಾಸಕರು, ಐಎಎಸ್‌, ಐಪಿಎಸ್‌,...

ವಿಶ್ವಕಪ್ ನಿಂದ ಹಿಂದೆ ಸರಿದರೆ ಪಾಕಿಸ್ತಾನಕ್ಕೆ ಶಾಶ್ವತ ಗೇಟ್ ಪಾಸ್: ಐಸಿಸಿ ಖಡಕ್ ನಿರ್ಧಾರದಿಂದ ಪಿಸಿಬಿ ಕಂಗಾಲು

ವಿಶ್ವಕಪ್ ನಿಂದ ಹಿಂದೆ ಸರಿದರೆ ಪಾಕಿಸ್ತಾನಕ್ಕೆ ಶಾಶ್ವತ ಗೇಟ್ ಪಾಸ್: ಐಸಿಸಿ ಖಡಕ್ ನಿರ್ಧಾರದಿಂದ ಪಿಸಿಬಿ ಕಂಗಾಲು

by Shwetha
January 26, 2026
0

ಟಿ-20 ವಿಶ್ವಕಪ್ ಪಂದ್ಯಾವಳಿ ಸಮೀಪಿಸುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram