ವಿಶ್ವದ ನಂ 1 ಆಟಗಾರನಿಗೆ ವೀಸಾ ನಿರಾಕರಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ವಲಸೆ ಸಚಿವ ಅಲೆಕ್ಸ್ ಹಾಕ್ ಅವರು ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಿದ್ದಾರೆ. ಜನರ ಒಳಿತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲೆಕ್ಸ್ ಹಾಕ್ ಹೇಳಿದ್ದಾರೆ.
ಗೃಹ ಸಚಿವಾಲಯ, ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ಮತ್ತು ಜೊಕೊವಿಕ್ ನೀಡಿದ ಮಾಹಿತಿಯನ್ನು ಪರಿಗಣಿಸಿದ ನಂತರ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಜೊಕೊವಿಕ್ ಸೋಂಕಿಗೆ ಒಳಗಾಗಿದ್ದರೂ ಪತ್ರಕರ್ತರನ್ನು ಭೇಟಿಮಾಡಿದ್ದಾರೆ ಇದಲ್ಲದೆ, ಅವರು ತಮ್ಮ ಪ್ರಯಾಣದ ಇತಿಹಾಸವನ್ನು ಸಹ ಮರೆಮಾಚಿದ್ದಾರೆ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.
ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ಅವರ ವೀಸಾವನ್ನು ಎರಡನೇ ಬಾರಿಗೆ ರದ್ದುಗೊಳಿಸಿದೆ. ನೊವಾಕ್ ಜೊಕೊವಿಕ್ ಅವರು ಕರೋನಾ ಲಸಿಕೆ ತೆಗೆದುಕೊಳ್ಳದೆಯೇ ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಆಡಲು ಹೋಗಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವಾಲಯದ ಪ್ರಕಾರ, ವಲಸೆ ಕಾಯಿದೆಯ ಸೆಕ್ಷನ್ 133C (3) ಅಡಿಯಲ್ಲಿ ಆಸ್ಟ್ರೇಲಿಯಾಕ್ಕೆ ಬಾರದಂತೆ ವೀಸಾವನ್ನು ಮೂರು ವರ್ಷಗಳವರೆಗೆ ನಿಷೇಧಿಸಬಹುದು.
ಆದರೂ ಸಹ ಜೊಕೋವಿಕ್ ಗೆ ಇನ್ನೊಂದು ಅವಕಾಶವಿದೆ. ಅದು ನ್ಯಾಯಾಲಯದ ಮೊರೆ ಹೋಗಬಹುದು. ಜೊಕೊವಿಕ್ ಅವರ ವೀಸಾವನ್ನು ಮೊದಲ ಬಾರಿಗೆ ರದ್ದುಗೊಳಿಸಿದಾಗ, ಅವರು ನ್ಯಾಯಾಲಯದ ಮೊರೆ ಹೋಗಿದ್ದರು, ಅಲ್ಲಿ ಅವರು ನಿರಾಳರಾದರು ಮತ್ತು ವೀಸಾವನ್ನು ಮರು ಪಡೆದುಕೊಂಡಿದ್ದರು.