ಚಂದ್ರನ ಮೇಲೆ ನೀರು ಪತ್ತೆ ಹಚ್ಚಲು ರೋವನ್ ರವಾನೆಯ ಯೋಜನೆ – ಆಸ್ಟ್ರೇಲಿಯಾ
ಆಸ್ಟ್ರೇಲಿಯಾ : ಚಂದ್ರನ ಮೇಲೆ ನೀರಿದ್ಯಾ, ಅನ್ಯ ಗ್ರಹದಲ್ಲಿ ಮನುಷ್ಯರಿದ್ದಾರಾ… ಅಲ್ಲಿಯೂ ಜೀವಿಗಳಿವೆಯಾ, ಏಲಿಯನ್ಸ್ ಇವೆಯಾ… ಈ ರೀತಿ ಚಂದ್ರ ಇರಬಹುದು ಅನ್ಯ ಗ್ರಹಗಳೇ ಇರಬಹುದು.. ಅಲ್ಲಿ ಏನೆಲ್ಲಾ ಇರಬಹುದು ಎಂಬುದನ್ನ ತಿಳಿಯುವ ಪ್ರಯತ್ನಗಳನ್ನ ವಿಶ್ವದ ಅನೇಕ ದೇಶಗಳು ಮಾಡುತ್ತಲೇ ಇವೆ.. ಒದೀಗ ಚಂದ್ರನ ಮೇಲೆ ನೀರಿನ ಅಂಶ ಇದೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಸಿಡ್ನಿಯ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾ ಮೂಲದ ಖಾಸಗಿ ಕಂಪನಿಗಳು 2024ರ ಮಧ್ಯಭಾಗದಲ್ಲಿ ರೋವರ್ವೊಂದನ್ನು ಕಳುಹಿಸುವ ಬಾಹ್ಯಾಕಾಶ ಯೋಜನೆಯನ್ನು ರೂಪಿಸಿವೆ.
ಕಳೆದ ತಿಂಗಳು ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ಸಹಭಾಗಿತ್ವದಲ್ಲಿ ಆಸ್ಟ್ರೇಲಿಯಾ ನಿರ್ಮಿತ ರೋವರ್ವೊಂದನ್ನು ಕಳುಹಿಸುವುದಾಗಿ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿತ್ತು. ರೋವರ್ ಚಂದ್ರನ ಮೇಲ್ಮೈನಲ್ಲಿನ ಆಮ್ಲಜನಕ ಅಂಶವಿರುವ ಮಣ್ಣನ್ನು ಸಂಗ್ರಹಿಸಲಿದೆ. ಜೀವಿಗಳಿಗೆ ಪೂರಕವಾದ ಅಂಶಗಳ ಇರುವಿಕೆ ಪತ್ತೆಯು ಇದರ ಗುರಿಯಾಗಿದೆ. ಇದು ಯಶಸ್ವೊಯಾದಲ್ಲಿ ಚಂದ್ರನ ಮೇಲೆ ಇಳಿದ ಆಸ್ಟ್ರೇಲಿಯಾ ನಿರ್ಮಿತ ಮೊದಲ ರೋವರ್ ಎನಿಸಿಕೊಳ್ಳಲಿದೆ.








