ಚೀನಾದಿಂದ 3 ಸೂಕ್ಷ್ಮ ಸಂವೇದಿ ಉಪಗ್ರಹಗಳ ಉಡಾವಣೆ…!   

1 min read

ಚೀನಾದಿಂದ 3 ಸೂಕ್ಷ್ಮ ಸಂವೇದಿ ಉಪಗ್ರಹಗಳ ಉಡಾವಣೆ…!

ಚೀನಾ : ಕೋವಿಡ್ ತಾಯ್ನಾಡು , ಪಾಕಿಸ್ತಾನದ ಡ್ಯಾಡಿ ಚೀನಾ ಇತ್ತೀಚೆಗೆ ಅತ್ಯಾಧುನಿಕ ಮಿಸಾಯಿಲ್ ಪರೀಕ್ಷೆಯನ್ನ ಯಶಸ್ವಿಯಾಗಿ ಮಾಡಿತ್ತು. ಇದೀಗ ಚೀನಾದ  ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಮೂರು ಸೂಕ್ಷ್ಮಸಂವೇದಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು  ಅಂತರಾಷ್ಟ್ರೀಯ , ಚೀನಾ ಸ್ಥಳೀಯ , ರಾಷ್ಟ್ರಿಯ ಮಾಧ್ಯಮಗಳು ವರದಿ ಮಾಡಿವೆ. ಯಾವೋಗನ್ -35 ಸರಣಿಗೆ ಸೇರಿದ ಈ ಉಪಗ್ರಹಗಳನ್ನು ಲಾಂಗ್ ಮಾರ್ಚ್ -2 ಡಿ ಕ್ಯಾರಿಯರ್ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿದೆ.

ರಷ್ಯಾದಲ್ಲಿ ಕೋವಿಡ್ ಅಬ್ಬರ – ಸರ್ವಕಾಲೀನ ರೆಕಾರ್ಡ್ ಬ್ರೇಕ್

ಈ ಉಪಗ್ರಹಗಳು ಯೋಜಿತ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿವೆ  ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಲಾಂಗ್ ಮಾರ್ಚ್ ಸರಣಿಯ ಕ್ಯಾರಿಯರ್‌ ರಾಕೆಟ್‌ಗಳ ಮೂಲಕ ನೆರವೇರಿಸಿದ 396ನೇ ಉಡಾವಣೆ ಇದಾಗಿದೆ. 2019ರ ಮಾರ್ಚ್‌ನಲ್ಲಿ ಈ ಸರಣಿಯ ಲಾಂಗ್ ಮಾರ್ಚ್ 3 ಬಿ ರಾಕೆಟ್ ಹೊಸ ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ 300ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ಅಫ್ಘಾನ್ ಆಟದತ್ತ ಭಾರತೀಯರ ಕಣ್ಣು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd