ರಷ್ಯಾದಲ್ಲಿ ಕೋವಿಡ್ ಅಬ್ಬರ – ಸರ್ವಕಾಲೀನ ರೆಕಾರ್ಡ್ ಬ್ರೇಕ್

1 min read
Covid 22 more dangerous than the delta variant of Corona

ರಷ್ಯಾದಲ್ಲಿ ಕೋವಿಡ್ ಅಬ್ಬರ – ಸರ್ವಕಾಲೀನ ರೆಕಾರ್ಡ್ ಬ್ರೇಕ್

ರಷ್ಯಾ :  ವಿಶ್ವಾದ್ಯಂತ ಚೀನಾದಿಂದ ಬಂದಿರುವ ಕೊರೊನಾ ಮಾಹಾಮಾರಿ  ಕೋಟ್ಯಾಂತರ ಜನರ ಜೀವ ತೆಗೆದುಕೊಂಡಿದೆ. ಕೋಟಿ ಕೋಟಿ ಜನರು ಸೋಂಕಿಗೆ ಒಳಗಾಗಿದ್ದಾರೆ.  ಇನ್ನೂ ಈ ನಡುವೆ  ಅನೇಕ ದೇಶಗಳಲ್ಲಿ ಕೋವಿಡ್ ಸಂಖ್ಯೆ ಮತ್ತೆ ಏರಿಕೆಯಾಗ್ತಾಯಿದೆ. ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 41,335 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇದು ದಿನವೊಂದರಲ್ಲಿ ವರದಿಯಾದ ಅತ್ಯಧಿಕ ಪ್ರಮಾಣದ ಪ್ರಕರಣಗಳಾಗಿವೆ.ಇದು ಆತಂಕಕ್ಕೆ ಕಾರಣವಾಗಿದೆ.

ಸರ್ಕಾರದ ಕೊರೊನಾ ವೈರಸ್ ಕಾರ್ಯಪಡೆಯು ಕೋವಿಡ್‌ ಗೆ ಸಂಬಂಧಿಸಿದ 1,188 ಸಾವುಗಳನ್ನು ಖಚಿತಪಡಿಸಿದೆ. ವೈರಸ್ ಹರಡುವುದನ್ನು ತಡೆಯಲು ರಷ್ಯಾದಲ್ಲಿ ಕಚೇರಿ–ಕಾರ್ಖಾನೆಗಳನ್ನು ಒಂದು ವಾರಗಳ ವರೆಗೆ ಮುಚ್ಚಲಾಗಿದೆ. ಕೆಲವು ಪ್ರದೇಶಗಳಲ್ಲಿ ಮುಂದಿನ ವಾರವೂ ನಿರ್ಬಂಧ ವಿಸ್ತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆಸ್ಪತ್ರೆಯಲ್ಲಿ ಅಗ್ನಿ ಅವಘಡ 10 ರೋಗಿಗಳು ಸಜೀವ ದಹನ 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd