ಏನ್ರೋ ಇದೆಲ್ಲಾ..? ಶೂನಲ್ಲಿ ಡ್ರಿಂಕ್ಸ್ ಕುಡಿದು ಸಂಭ್ರಮ..!

1 min read
Australia saaksha tv

ಏನ್ರೋ ಇದೆಲ್ಲಾ..? ಶೂನಲ್ಲಿ ಡ್ರಿಂಕ್ಸ್ ಕುಡಿದು ಸಂಭ್ರಮ..!

ಆಸ್ಟ್ರೇಲಿಯಾಗೆ ಮೊಟ್ಟಮೊದಲ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಆರೋನ್ ಪಿಂಚ್ ಹುಡುಗರ ಸಂಭ್ರಮ ಮುಗಿಲು ಮುಟ್ಟಿದೆ.

ನವೆಂಬರ್ 14 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸೀಸ್ ಗೆದ್ದು ಹಾಲಿ ಚಾಂಪಿಯನ್ ಆಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಾಂಗರೂಗಳು ಕಿವೀಸ್ ನೀಡಿದ್ದ 173 ರನ್ ಗಳ ಗುರಿಯನ್ನು ಕೇವಲ ಎರಡು ವಿಕೆಟ್ ಕಳೆದುಕೊಂಡು ತಲುಪಿತು.

ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅದ್ಭುತ ಇನ್ನಿಂಗ್ಸ್‍ನೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಐತಿಹಾಸಿಕ ಮತ್ತು ಸ್ಮರಣೀಯ ಗೆಲುವಿನ ಹಿನ್ನೆಲೆಯಲ್ಲಿ ಫಿಂಚ್ ಬಾಯ್ಸ್ ಡ್ರೆಸ್ಸಿಂಗ್ ರೂಂನಲ್ಲಿ ವೆರೈಟಿಯಾಗಿ ಸಂಭ್ರಮಿಸಿದೆ.

Australia saaksha tv

ಆಟಗಾರರು ತಮ್ಮ ಶೂಗಳಲ್ಲಿ ಪಾನೀಯಗಳನ್ನು ತುಂಬಿಕೊಂಡು ಕುಡಿದು ಆನಂದಿಸಿದ್ದಾರೆ.

ಸೆಮಿಸ್ ಹೀರೋಗಳಾದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಮ್ಮ ಬೂಟುಗಳನ್ನು ಬಿಚ್ಚಿ, ಪಾನೀಯಗಳನ್ನು ತುಂಬಿಸಿ ಸಂತೋಷದಿಂದ ಕುಡಿದು ಕುಪ್ಪಳಿಸಿದ್ದಾರೆ.

ಈ ವಿಡಿಯೋವನ್ನು ಐಸಿಸಿ ಶೇರ್ ಮಾಡಿದ್ದು, ವೈರಲ್ ಆಗಿದೆ.

ಇದನ್ನು ನೋಡಿದ ನೆಟ್ಟಿಗರು.. “ಏನ್ರೋ ಇದೆಲ್ಲಾ.. ಶೂನಲ್ಲಿ ಡ್ರಿಂಕ್ಸ್ ಕುಡೀತೀರಾ… ವಿಶ್ವಕಪ್ ಗೆದ್ದಿದ್ದೀರಾ ಅಲ್ವಾ ನಿಮ್ಮಿಷ್ಟದಂತೆ ಮಾಡಿ.. ಎಂದು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd