ಬ್ರಿಸ್ಬೇನ್ ಟೆಸ್ಟ್ – ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಬೃಹತ್ ಮೊತ್ತ…!
ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದ ಗೌರವವನ್ನು ಆಸ್ಟ್ರೇಲಿಯಾ ಪಡೆದುಕೊಂಡಿದೆ.
ಬ್ರಿಸ್ಬೇನ್ ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತ್ತು. ಆದ್ರೆ ಆಸೀಸ್ ನ ಲೆಕ್ಕಚಾರಗಳನ್ನು ಟೀಮ್ ಇಂಡಿಯಾ ಬೌಲರ್ ಗಳು ಬುಡಮೇಲು ಮಾಡಿದ್ರು.
ಆರಂಭಿಕ ಡೇವಿಡ್ ವಾರ್ನರ್ ಅವರನ್ನು 1 ರನ್ ಗಳಿಸುವಷ್ಟರಲ್ಲೇ ಮೊಹಮ್ಮದ್ ಸಿರಾಜ್ ಬಲಿ ಪಡೆದುಕೊಂಡ್ರು. ಹಾಗೇ ಇನ್ನೊಬ್ಬ ಆರಂಭಿಕ ಮಾರ್ಕಸ್ ಹ್ಯಾರಿಸ್ 5 ರನ್ ಗಳಿಸಿ ಶಾರ್ದೂಲ್ ಥಾಕೂರ್ ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಮಾರ್ನಸ್ ಲಾಬುಸ್ಚೆಗ್ನೆ ಮತ್ತು ಸ್ಟೀವನ್ ಸ್ಮಿತ್ ಆಸೀಸ್ ತಂಡಕ್ಕೆ ಆಧಾರವಾಗಿ ನಿಂತ್ರು. ಅಲ್ಲದೆ ಮೂರನೇ ವಿಕೆಟ್ ಗೆ 71 ರನ್ ಕಲೆ ಹಾಕಿದ್ರು. ಈ ಹಂತದಲ್ಲಿ 36 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದ್ರು.
ಇನ್ನೊಂದೆಡೆ ಕ್ರೀಸ್ ಗೆ ಅಂಟಿಕೊಂಡು ಆಟವಾಡುತ್ತಿದ್ದ ಮಾರ್ನಸ್ ಅವರು ನಾಲ್ಕನೇ ವಿಕೆಟ್‍ಗೆ ಮ್ಯಾಥ್ಯೂ ವಾಡೆ ಜೊತೆ 113 ರನ್ ಗಳ ಜೊತೆಯಾಟವನ್ನು ಆಡಿದ್ರು. ಅಲ್ಲದೆ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ರು.
ಆದ್ರೆ ಮ್ಯಾಥ್ಯೂ ವಾಡೆ ಅವರ ಹೋರಾಟ 45ರನ್ ಗೆ ಕೊನೆಗೊಳ್ಳುವಂತೆ ನಟರಾಜನ್ ಮಾಡಿದ್ರು.
ಈ ನಡುವೆ ಮಾರ್ನಸ್ ಅವರು ಶತಕದ ಸಂಭ್ರಮದಲ್ಲೂ ತೇಲಾಡಿದ್ರು. ಆಕರ್ಷಕ 108 ರನ್ ಗಳಿಸಿದ್ದ ಮಾರ್ನಸ್ ಅವರು ನಟರಾಜನ್‍ಗೆ ವಿಕೆಟ್ ಒಪ್ಪಿಸಿದರು.
ಮೊದಲ ದಿನದ ಅಂತ್ಯದ ವೇಳೆ ಆಸ್ಟ್ರೇಲಿಯಾ ಐದು ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತ್ತು. ಕ್ಯಾಮರೂನ್ ಗ್ರೀನ್ ಅಜೇಯ 28 ರನ್ ಮತ್ತು ನಾಯಕ ಟೀಮ್ ಪೈನ್ ಅಜೇಯ 38 ರನ್ ದಾಖಲಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ನಟರಾಜನ್ ಎರಡು ವಿಕೆಟ್ ಪಡೆದ್ರೆ, ಮಹಮ್ಮದ್ ಸಿರಾಜ್, ಶಾರ್ದೂಲ್ ಥಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಉರುಳಿಸಿದ್ರು.








