ಬಾಕ್ಸಿಂಗ್ ಡೇ ಟೆಸ್ಟ್.. ಟೀಂ ಇಂಡಿಯಾಗೆ ಶಾಕ್.. ಸಂಕಷ್ಟದ ಮಧ್ಯೆ ರಹಾನೆ ಶೈನ್..
ಮೆಲ್ಬೋರ್ನ್ : ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಆಸೀಸ್ ಬೌಲರ್ ಗಳು ಆರ್ಭಟಿಸುತ್ತಿದ್ದಾರೆ.
ಎರಡನೇ ದಿನದ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ಅನುಭವಿಸಿತು. ಕುಸಿದ ಭಾರತಕ್ಕೆ ನಾಯಕ ಅಜಿಂಕ್ಯಾ ರಹಾನೆ ಆಸರೆಯಾಗಿದ್ದಾರೆ.
ಮೊದಲ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತ್ತು.
ಎರಡನೇ ದಿನ ಆಸೀಸ್ ಬೌಲರ್ ಗಳು ಆಕ್ರಮಣಕಾರಿ ಬೌಲಿಂಗ್ ಮಾಡಿದ್ರು. ಪರಿಣಾಮ ಚೊಚ್ಚಲ ಪಂದ್ಯವಾಡುತ್ತಿರುವ ಗಿಲ್ 65 ಎಸೆತಗಳಲ್ಲಿ 45 ರನ್ ಗಳಿಸಿ ಕಮ್ಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ಅಬ್ಬು… ಕನಸು ನನಸಾಯ್ತು.. ಎರಡೂ ವಿಕೆಟ್ ಪಡೆದೆ… ಆದ್ರೆ ನೋಡೋಕೆ ನೀನೇ ಇಲ್ವಲ್ಲಾ..
ಬಳಿಕ ಟೆಸ್ಟ್ ಸ್ಪೇಷಲಿಸ್ ಚೇತೇಶ್ವರ ಪೂಜಾರ (17) ಕೂಡ ಕಮ್ಮಿನ್ಸ್ ಮುಂದೆ ಕಮ್ಮಕ್ ಕಿಮ್ಮಕ್ ಎನ್ನದೇ ಪೆವಿಲಿಯನ್ ಹಾದಿ ತುಳಿದರು.
ಈ ಸಂಕಷ್ಟದ ಸ್ಥಿತಿಯಲ್ಲಿ ರಹಾನೆ ಜೊತೆ ಸೇರಿದ ಹನುಮ ವಿಹಾರಿ ಎಚ್ಚರಿಕೆಯ ಆಟಕ್ಕೆ ಮುಂದಾದ್ರೂ ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಲಿಯಾನ್ ಬೌಲಿಂಗ್ 21 ರನ್ ಗಳಿಸಿದ್ದ ವಿಹಾರಿ ಔಟ್ ಆದ್ರು. ಇನ್ನು ವೃದ್ಧಿಮಾನ್ ಸಹಾ ಅವರನ್ನ ರೀಪ್ಲೇಸ್ ಮಾಡಿದ್ದ ರಿಶಬ್ ಪಂತ್ ರಹಾನೆಗೆ ಒಳ್ಳೆ ಸಾಥ್ ನೀಡಿದ್ರೂ 29 ಗಳಿಸಿದ್ದ ವೇಳೆ ಸ್ಟಾರ್ಕ್ ವೇಗಕ್ಕೆ ಕಂಗಾಲಾಗಿ ವಿಕೆಟ್ ಒಪ್ಪಿಸಿದ್ರು.
ಮಳೆ ಹಿನ್ನೆಲೆ ಪಂದ್ಯವನ್ನ ಸ್ಥಗಿತಗೊಳಿಸಲಾಗಿದ್ದು, ಸದ್ಯ ಟೀ ಇಂಡಿಯಾ 189 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.
ಇತ್ತ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ನಾಯಕನ ಆಟವಾಡುತ್ತಿರುವ ರಹಾನೆ 121 ಎಸೆತಗಳಲ್ಲಿ 53 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇನ್ನ ರವೀಂದ್ರ ಜಡೇಜಾ 4 ರನ್ ಗಳಿಸಿದ್ದಾರೆ.
ಆಸೀಸ್ ಪರ ಮಿಜೆಲ್ ಸ್ಟಾರ್ಕ್, ಪಾತ್ ಕಮ್ಮಿನ್ಸ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರೇ ನಾಥನ್ ಲಿಯಾನ್ ಒಂದು ವಿಕೆಟ್ ಕಿತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel