ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಬ್ಬು… ಕನಸು ನನಸಾಯ್ತು.. ಎರಡೂ ವಿಕೆಟ್ ಪಡೆದೆ… ಆದ್ರೆ ನೋಡೋಕೆ ನೀನೇ ಇಲ್ವಲ್ಲಾ..

admin by admin
December 26, 2020
in Newsbeat, Sports, ಕ್ರೀಡೆ
mohammad siraj team india saakshatv
Share on FacebookShare on TwitterShare on WhatsappShare on Telegram

ಅಬ್ಬು… ಕನಸು ನನಸಾಯ್ತು.. ಎರಡೂ ವಿಕೆಟ್ ಪಡೆದೆ…ಆದ್ರೆ  ನೋಡೋಕೆ ನೀನೇ ಇಲ್ವಲ್ಲಾ..!

mohammad siraj team india saakshatvಅಂದು..
ಅಬ್ಬೂ…ನಾನು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದೇನೆ. ಟೆಸ್ಟ್ ಸರಣಿಯಲ್ಲಿ ಆಡಲು ನಾನು ಆಸ್ಟ್ರೇಲಿಯಾಗೆ ಹೋಗುತ್ತಿದ್ದೇನೆ.
ಇದು ಮಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದಾಗ ತನ್ನ ತಂದೆಯ ಜೊತೆ ಖುಷಿಯನ್ನು ಹಂಚಿಕೊಂಡ ಕ್ಷಣದ ಮಾತುಗಳು…

Related posts

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

July 22, 2026
ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

July 22, 2026

ಇಂದು
ಅಬ್ಬೂ ನಾನು ಚೊಚ್ಚಲ ಪಂದ್ಯವನ್ನಾಡಿದ್ದೇನೆ. ಎರಡು ವಿಕೆಟ್ ಕೂಡ ಪಡೆದುಕೊಂಡಿದ್ದೇನೆ. ನೀವು ಅಂದುಕೊಂಡ ಕನಸು ಇಂದು ನನಸಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಹಾಗಂತ ಮಹಮ್ಮದ್ ಸೀರಾಜ್ ತನ್ನ ತಂದೆಯ ಜೊತೆ ಸಂತಸವನ್ನು ಹಂಚಿಕೊಳ್ಳೋಣ ಅಂದ್ರೆ ಅದನ್ನು ಕೇಳಿಸಿಕೊಳ್ಳಲು ಈಗ ತಂದೆ ಇಲ್ಲ. ಆದ್ರೂ ಎಲ್ಲೋ ಒಂದು ಕಡೆ ಮಗನ ಸಾಧನೆ, ಸಂತಸದ ಮಾತುಗಳನ್ನು ಸಿರಾಜ್ ಅವರ ತಂದೆಯ ಆತ್ಮ ಕೇಳಿಸಿಕೊಳ್ಳಬಹುದೇನೋ..

mohammad siraj team india saakshatvವಿಧಿಯಾಟವನ್ನು ಬಲ್ಲವರು ಯಾರು ಇಲ್ಲ. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಆಡಬೇಕು ಅನ್ನೋ ಕನಸು ನನಾಸಾಗುವ ಸಮಯದಲ್ಲಿ, ಅದಕ್ಕಾಗಿ ರಾತ್ರಿ ಹಗಲು ಶ್ರಮಪಟ್ಟವರೇ ಈಗ ಇಲ್ಲ. ಮಗನ ಸಾಧನೆ, ಯಶಸ್ಸು, ಸಂಭ್ರಮವನ್ನು ಕಣ್ಣಾರೆ ನೋಡುವ ಅದೃಷ್ಟ ಸಿರಾಜ್ ಅವರ ತಂದೆಗೆ ಇರಲಿಲ್ಲ.
ಹೌದು, ಮಹಮ್ಮದ್ ಸಿರಾಜ್ ಇವತ್ತು ಟೀಮ್ ಇಂಡಿಯಾ ಆಟಗಾರನಾಗಿರಬಹುದು. ಆದ್ರೆ ಇದಕ್ಕಾಗಿ ಸಿರಾಜ್ ಅವರ ತಂದೆ ಮಹಮ್ಮದ್ ಘೌಸ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗನ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿದ್ದ ಘೌಸ್ ಅವರು ಹಗಲು ರಾತ್ರಿ ತನ್ನ ಆಟೋ ರಿಕ್ಷಾದಲ್ಲಿ ದುಡಿದಿದ್ದರು. ಪರಿಣಾಮ ಮಗ ಮಹಮ್ಮದ್ ಸಿರಾಜ್ ಹೈದ್ರಬಾದ್ ರಣಜಿ ತಂಡಕ್ಕೆ ಎಂಟ್ರಿಯಾದ್ರು. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಸೇರಿಕೊಂಡ್ರು. ನಂತರ ಆರ್ ಸಿಬಿ ತಂಡವನ್ನು ಸೇರ್ಪಡೆಗೊಂಡ್ರು.
ಐಪಿಎಲ್ ನಲ್ಲಿ ಬಂದ ಹಣದಲ್ಲಿ ಹೊಸ ಮನೆ ಕಟ್ಟಿಸಿದ್ರು. ತನ್ನ ತಂದೆ ಆಟೋ ರಿಕ್ಷಾ ಓಡಿಸುವುದನ್ನು ನಿಲ್ಲಿಸುವಂತೆ ಮಾಡಿದ್ದರು. ತನಗಾಗಿ ಕಷ್ಟಪಟ್ಟ ಅಪ್ಪ ಅಮ್ಮನನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು.
mohammad siraj family saakshatvಈ ನಡುವೆ ಟೀಮ್ ಇಂಡಿಯಾ ಪರ ಒಂದು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದರು. ಆದ್ರೆ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು.
ಮೊದಲ ಟೆಸ್ಟ್ ನಲ್ಲಿ ಮಹಮ್ಮದ್ ಶಮಿ ಅವರು ಗಾಯಗೊಂಡ ಕಾರಣ ಮಹಮ್ಮದ್ ಸಿರಾಜ್ ಅವರಿಗೆ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಸಿರಾಜ್ ಅದ್ಭುತವಾಗಿಯೇ ಬೌಲಿಂಗ್ ಮಾಡಿದ್ದರು.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಾಬುಸ್ಚೆಂಜ್ ಅವರ ವಿಕೆಟ್ ಅನ್ನು ಕಬಳಿಸಿದ್ರು. ಚೊಚ್ಚಲ ಟೆಸ್ಟ್ ಪಂದ್ಯದ ಚೊಚ್ಚಲ ವಿಕೆಟ್ ಪಡೆದ ಸಿರಾಜ್ ಆಗಸದತ್ತ ಕೈತೋರಿಸಿಕೊಂಡು ಸಂಭ್ರಮವನ್ನು ಆಚರಿಸಿಕೊಂಡ್ರು. ಆ ನಂತರ ಕ್ಯಾಮರೂನ್ ಗ್ರೀನ್ ಅವರನ್ನು ಎಲ್ ಬಿ ಬಲೆಗೆ ಬೀಳಿಸಿದ್ರು.
ಹೀಗೆ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ಪಡೆದ ಸಿರಾಜ್ ತನ್ನ ಪ್ರೇರಕ ಶಕ್ತಿಯಾಗಿದ್ದ ತಂದೆಯವರನ್ನು ಸ್ಮರಿಸಿಕೊಂಡ್ರು.
mohammad gouse mohammad siraj team india saakshatvಇನ್ನು ಮಹಮ್ಮದ್ ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡಾಗ ಆಸ್ಟ್ರೇಲಿಯಾದಲ್ಲಿದ್ದರು. ಬಿಸಿಸಿಐ ಭಾರತಕ್ಕೆ ಬರಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ರೂ ಸಿರಾಜ್ ಮನಸ್ಸು ಒಪ್ಪಲಿಲ್ಲ. ದೇಶ ಮೊದಲು ಎಂಬ ಸಿದ್ದಾಂತಕ್ಕೆ ಬದ್ದರಾಗಿದ್ದ ಸಿರಾಜ್ ವಿಡಿಯೋ ಮೂಲಕವೇ ತನ್ನ ತಂದೆಗೆ ಅಂತಿಮ ನಮನವನ್ನು ಸಲ್ಲಿಸಿದ್ರು.
ಈ ಹಂತದಲ್ಲಿ ಸಿರಾಜ್ ಸಾಕಷ್ಟು ಘಾಸಿಗೊಂಡಿದ್ದರು. ತಂದೆಯನ್ನು ಕಳೆದುಕೊಂಡ ದುಃಖವನ್ನು ಅರಿತುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಧೈರ್ಯ ತುಂಬಿದ್ದರು.
ಒಟ್ಟಿನಲ್ಲಿ ಮಹಮ್ಮದ್ ಸಿರಾಜ್ ಕಲ್ಲು ಮುಳ್ಳಿನ ಹಾದಿಯಲ್ಲಿ ಬಂದು ಇಂದು ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ತಂದೆಯ ಆಗಲಿಕೆಯ ನೋವಿನಲ್ಲೂ ಸಿರಾಜ್ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ.

Tags: #saakshatvaustreliabcciindiaIPLIPL 2020Mohammed SirajrahaneRCBteam indiavirat kohli
ShareTweetSendShare
Join us on:

Related Posts

shukravara-lakshmi-anugraha-dhana-sampattu-poodja-vidhi-tips

Astro- ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…

by admin
July 22, 2026
0

ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ...?ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ... ಸನಾತನ ಹಿಂದೂ ಧರ್ಮದ ಸಂಪ್ರಾದಾಯದಲ್ಲಿ ಮಹಾಲಕ್ಷ್ಮಿ ದೇವಿಯನ್ನು ಧನ ಸಂಪತ್ತಿನ...

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

ಪ್ರಧಾನಿ ಮೋದಿ ನಿವಾಸದ ಎದುರು ರಸ್ತೆ ಮೇಲೆಯೇ ಕುಳಿತ ರಾಹುಲ್ ಗಾಂಧಿ: ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು

by Shwetha
July 22, 2026
0

ನವದೆಹಲಿ: ದೇಶದ ರಾಜಧಾನಿಯಲ್ಲಿ ನಿನ್ನೆ ರಾಜಕೀಯ ಹಂಗಾಮ ಉತ್ತುಂಗಕ್ಕೇರಿತ್ತು. ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ, ಲೋಕಸಭೆಯ...

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

ರಾಜ್ಯದಲ್ಲಿ ಕೋವಿಡ್ ಅಪಾಯ ಇಲ್ಲ; ಎಚ್ಚರಿಕೆ ಮಾತ್ರ ಅಗತ್ಯ: ಸಚಿವ ಯು.ಟಿ. ಖಾದರ್

by Shwetha
July 22, 2026
0

ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸೋಂಕಿನಿಂದ ನಾಲ್ವರು ಮೃತಪಟ್ಟಿರುವ ವರದಿಗಳ ಬೆನ್ನಲ್ಲೇ, ಕರ್ನಾಟಕದ ಜನರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಕೋವಿಡ್...

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

ಫುಟ್ ಪಾತ್ ಕದನ:ಶಿವಾಜಿನಗರದಲ್ಲಿ ಪುಂಡಾಟ ನಡೆಸಿದವರನ್ನು ಸುಮ್ಮನೆ ಬಿಡಲ್ಲ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಬಡವರಲ್ಲ ಸಮಾಜಘಾತುಕರು ಶಿವಾಜಿನಗರ ಪುಂಡರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಕೆಂಡ

by Shwetha
July 22, 2026
0

ಬೆಂಗಳೂರು: ರಾಜಧಾನಿಯ ಶಿವಾಜಿನಗರದಲ್ಲಿ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಕಿಚ್ಚು...

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

ಪ್ರೇಮ್ ಆರಂಭಿಸಿದ್ದ ಪ್ರಶಸ್ತಿ ಅಭಿಯಾನಕ್ಕೆ ನಾದಬ್ರಹ್ಮ ಬ್ರೇಕ್: ಇದು ಮ್ಯಾಚ್ ಆಗದ ಫ್ಲಾಪ್ ಸಾಂಗ್ ಎಂದ ಹಂಸಲೇಖ

by Shwetha
July 22, 2026
0

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ನಟ ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram