ಆಸ್ಡ್ರೇಲಿಯಾ ಮಹಿಳಾ ತಂಡವೇ 2020ಯ ಟ್ವೆಂಟಿ ಟ್ವೆಂಟಿ ಚಾಂಪಿಯನ್ನರು. ಫೈನಲ್ ನಲ್ಲಿ 85 ರನ್‍ಗಳಿಂದ ಸೋಲು ಅನುಭವಿಸಿದ ಭಾರತ ಮಹಿಳಾ ತಂಡ ಗೆಲ್ಲಲೇಬೇಕು ಅಂತ ಅಂದುಕೊಂಡಿದ್ದರು… ಆದ್ರೆ ಸೋತು ಹೋದ್ರು. ಟೀಮ್ ಇಂಡಿಯಾ ಮಹಿಳಾ ತಂಡದವರು ಪ್ರಶಸ್ತಿ ತಮ್ಮದಾಗಿಸಿಕೊಳ್ಳಬೇಕು ಅನ್ನೋ ಕನಸು ಕಂಡಿದ್ದರು. ಆದ್ರೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮಹಿಳಾ ತಂಡದವರು ಅದ್ಭುತವಾದ ಪ್ರದರ್ಶನ ನೀಡಿ ಭಾರತೀಯ ವನಿತೆಯರ ಕನಸನ್ನು ಭಗ್ನಗೊಳಿಸಿದ್ರು.

ಈ ಮೂಲಕ 2020ಯ ಐಸಿಸಿ ಟಿ-ಟ್ವೆಂಟಿ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನಲ್ಲೇ ಉಳಿಸಿಕೊಂಡಿತ್ತು. ಐದನೇ ಬಾರಿ ಆಸ್ಟ್ರೇಲಿಯಾ ಮಹಿಳಾ ತಂಡ ಪ್ರಶಸ್ತಿ ಗೆದ್ದು ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿತ್ತು. ಆದ್ರೆ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ತಮ್ಮ ನಾಯಕಿ ಹರ್ಮನ್ ಪ್ರೀತ್ ಕೌರ್ ಹುಟ್ಟುಹಬ್ಬಕ್ಕೆ ಗೆಲುವಿನ ಗಿಫ್ಟ್ ಅನ್ನು ನೀಡಲು ಸಾಧ್ಯವಾಗಲಿಲ್ಲ.

ಹೌದು, ಆಸ್ಟ್ರೇಲಿಯಾದ ಮೆಲ್ಬರ್ನ್ ಅಂಗಣ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಮಹಿಳಾ ದಿನಾಚರಣೆಯಂದೇ ಐಸಿಸಿ ಟಿ-20 ಮಹಿಳಾ ವಿಶ್ವಕಪ್ ನ ಫೈನಲ್ ಪಂದ್ಯಕ್ಕೂ ಮುಹೂರ್ತ ಫಿಕ್ಸ್ ಮಾಡಿತ್ತು. ಲೀಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ಮಹಿಳಾ ತಂಡ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳ ನಡುವಿನ ಹೋರಾಟವನ್ನು ನೋಡಲು ಎಂಸಿಜಿ ಅಂಗಣ ಫುಲ್ ಪ್ಯಾಕ್ ಆಗಿತ್ತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಟೀಮ್ ಇಂಡಿಯಾ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರು ಶತಕದ ಜೊತೆಯಾಟವನ್ನು ಆಡಿದ್ದರು. ಆಲಿಸ್ಸಾ ಹೀಲಿ ಮತ್ತು ಮೂನಿ ಮೊದಲ ವಿಕೆಟ್‍ಗೆ ಕೇವಲ 11.4 ಓವರ್‍ಗಳಲ್ಲಿ 115 ರನ್ ಕಲೆ ಹಾಕಿ ಟೀಮ್ ಇಂಡಿಯಾದ ಮೇಲೆ ಒತ್ತಡವನ್ನು ಹೇರಿದ್ರು. ಈ ಹಂತದಲ್ಲಿ 75 ರನ್ ಗಳಿಸಿದ್ದ ಹೀಲಿ ಅವರು ಪೂನಂ ಯಾದವ್‍ಗೆ ವಿಕೆಟ್ ಒಪ್ಪಿಸಿದ್ರು. ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಹೀಲಿ 39 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‍ಗಳನ್ನು ದಾಖಲಿಸಿದ್ದರು.
ನಂತರ ನಾಯಕಿ ಮೆಗ್ ಲಾನಿಂಗ್ ಅವರು 16 ರನ್ ಹಾಗೂ ಗಾರ್ಡನರ್ (2)ಮತ್ತು ಹ್ಯಾನ್ಸಿ (4) ಅವರು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ರು. ಮತ್ತೊಂದೆಡೆ ಬೆತ್ ಮೂನಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ರು. 54 ಎಸೆತಗಳಲ್ಲಿ ಹತ್ತು ಬೌಂಡರಿಗಳ ಸಹಾಯದಿಂದ ಅಜೇಯ 78 ರನ್ ಸಿಡಿಸಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ ಮಹಿಳಾ ತಂಡ ನಿಗದಿತ 20 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು.

ಬೃಹತ್ ಸವಾಲನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಮಹಿಳಾ ತಂಡ ಆರಂಭದಲ್ಲೇ ಆಘಾತದ ಮೇಲೆ ಅಘಾತ ಅನುಭವಿಸಿತ್ತು. ಶಫಾಲಿ ವರ್ಮಾ 2 ರನ್‍ಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದ್ರೆ, ತಾನಿಯಾ ಭಾಟಿಯಾ 2 ರನ್ ಗಳಿಸುಷ್ಟರಲ್ಲಿ ರಿರ್ಟರ್ಡ್ ಹರ್ಟ್ ಅದ್ರು. ಜೆಮಿನಾ ರೋಡ್ರಿಗಸ್ ಶೂನ್ಯ ಸುತ್ರಿದ್ರೆ, ಸ್ಮøತಿ ಮಂದಾನ 11 ರನ್‍ಗೆ ಸೀಮಿತವಾದ್ರು. ನಾಯಕಿ ಹರ್ಮನ್ ಪ್ರೀತ್ ಕೌರ್ 4 ರನ್ ಗಳಿಸಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದ್ರು.
ಹಾಗೇ ವೇದಾ ಕೃಷ್ಣಮೂರ್ತಿ (19 ರನ್ ) ಕೂಡ ಹೆಚ್ಚು ಸಮಯ ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಈ ನಡುವೆ ತಾಳ್ಮೆಯ ಆಟವಾಡಿದ ದೀಪ್ತಿ ಶರ್ಮಾ ಆಕರ್ಷಕ 33 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಇನ್ನುಳಿದಂತೆ ರೀಚಾ ಘೋಷ್ (18ರನ್ ), ಶಿಖಾ ಪಾಂಡೆ (2 ರನ್) ರಾಧಾ ಯಾದವ್ (1 ರನ್), ಪೂನಂ ಯಾದವ್ (1 ರನ್) ಹಾಗೂ ರಾಜೇಶ್ವರಿ ಗಾಯಕ್‍ವಾಡ್ (ಅಜೇಯ 1ರನ್) ಗಳಿಸಿದ್ರು. ಅಂತಿಮವಾಗಿ ಭಾರತ ಮಹಿಳಾ ತಂಡ 19,1 ಓವರ್‍ಗಳಲ್ಲಿ 99 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. 85 ರನ್‍ಗಳಿಂದ ಆಸ್ಟ್ರೇಲಿಯಾ ಸತತ ಎರಡನೇ ಬಾರಿ ಹಾಗೂ ಒಟ್ಟು ಐದು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಫೈನಲ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಆಲಿಸ್ಸಾ ಹೀಲಿಗೆ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಬೆತ್ ಮೂನಿ ಅವರಿಗೆ ಪ್ಲೇಯರ್ ಆಫ್ ದಿ ಸೀರಿಸ್ ಪ್ರಶಸ್ತಿಗೆ ಅರ್ಹವಾಗಿಯೇ ಭಾಜನರಾದ್ರು.








