ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಹಾಗೂ ಸಹ ಆಟಗಾರ ಮ್ಯಾಥ್ಯೂ ಎಬ್ಡೆನ್ ( Rohan Bopanna-Matthew Ebden) ಆಸ್ಟ್ರೇಲಿಯನ್ ಓಪನ್ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ (Australian Open Men’s Doubles Final) ಗೆದ್ದು ಇತಿಹಾಸ ಬರೆದಿದ್ದಾರೆ.
ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ, ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರೆ ವವಾಸ್ಸೋರಿ ಜೋಡಿಯನ್ನು 7-5, 7-5 ಸೆಟ್ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಬೋಪಣ್ಣ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದಾರೆ. ಅಲ್ಲದೆ 43ನೇ ವಯಸ್ಸಿನಲ್ಲಿ ಈ ಪ್ರಶಸ್ತಿ ಗೆದ್ದು, ಗ್ರ್ಯಾಂಡ್ ಸ್ಲಾಮ್ನಲ್ಲಿ ಯಾವುದೇ ಪುರುಷರ ಈವೆಂಟ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಇತಿಹಾಸಕ್ಕೆ ಬರೆದಿದ್ದಾರೆ.
ಯುಎಸ್ ಓಪನ್ ನ ಫೈನಲ್ ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಸೋಲು ಅನುಭವಿಸಿತ್ತು. 2003ರಲ್ಲಿ ವೃತ್ತಿ ಜೀವನ ಆರಂಭಿಸಿರುವ ಬೋಪಣ್ಣ, ಪುರುಷರ ಡಬಲ್ಸ್ ನಲ್ಲಿ ಇದುವರೆಗೂ ಒಂದೇ ಒಂದು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರಲಿಲ್ಲ. ಈಗ ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.
2017 ರಲ್ಲಿ ನಡೆದ ಫ್ರೆಂಚ್ ಓಪನ್ ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಬೋಪಣ್ಣ ಗೆದ್ದಿದ್ದರು. ಈಗ ಡಬಲ್ಸ್ ನಲ್ಲಿ ಗೆದ್ದು ಇತಿಹಾಸ ಬರೆದಿದ್ದಾರೆ. ಎರಡನೇ ಶ್ರೇಯಾಂಕದ ಈ ಜೋಡಿಯು ಮೊದಲ ಸೆಟ್ನಲ್ಲಿ ಸ್ವಲ್ಪ ಪೈಪೋಟಿ ಎದುರಿಸಿತು. ಹೀಗಾಗಿ ಮೊದಲ ಸೆಟ್ ಟೈ ಬ್ರೇಕರ್ನಲ್ಲಿ ಕೊನೆಗೊಂಡಿತು. ಎರಡನೇ ಸೆಟ್ ಕೂಡ ಟೈ-ಬ್ರೇಕರ್ನತ್ತ ಸಾಗುತ್ತಿರುವಂತೆ ಕಾಣಿಸಿತು. 5-5 ರಲ್ಲಿ ಟೈ ಆದ ನಂತರ ಬೋಲೈ-ವಾವಸೋರಿ ಅವರ ಸರ್ವನ್ನು ಮುರಿದ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ತಮ್ಮ ಸರ್ವ್ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶ ಕಂಡರು.
ಬೋಪಣ್ಣ ಫೈನಲ್ ಪಂದ್ಯಕ್ಕೂ ಮುನ್ನ ಬೋಪಣ್ಣ ಎಟಿಪಿ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಕಂಡಿದ್ದರು. ಇದಾದ ನಂತರ ಪದ್ಮಶ್ರೀ ಪ್ರಶಸ್ತಿ ಪಡೆದರು. ಈಗ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದು ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.