Author Special : ಸುಲಭವಲ್ಲ ನೆನಪುಗಳ ಜೋಡಿಸುವುದು..!!
ಅಕ್ಷರಗಳ ಜೋಡಿಸುವುದಷ್ಟು ಕಷ್ಟವಲ್ಲ , ನೆನಪುಗಳ ಜೋಡಿಸುವುದು ಸುಲಭವಲ್ಲ…
ಅಕ್ಷರಗಳ ಜೊತೆಗೂ ಭಾವನೆ ಬೆರೆಯುವುದು, ನೆನಪುಗಳ ಜೊತೆಗೂ ಭಾವನೆ ಬೆರೆಯುವುದು…
ಅಕ್ಷರಗಳ ಇಳಿಸುವಾಗ ಮನಸ್ಸು ಹಗುರಾಗುವುದು, ನೆನಪುಗಳ ಪೋಣಿಸುವಾಗ ಹೃದಯ ನೋಯುವುದು…
ಅಕ್ಷರಗಳ ಇಳಿಸುವಾಗಿರುವ ಮುಗುಳುನಗೆ ನೆನಪುಗಳ ಜೋಡಿಸುವಾಗಲೂ ಇರುವುದು ಮರುಕ್ಷಣವೇ ಮನಸ್ಸು ಮರುಗುವುದು , ಕಂಬನಿಯು ಜಾರುವುದು..
ಅಕ್ಷರಕ್ಕೆ ನೆನಪುಗಳು ಸೀಮಿತವಾಗುವ ಹಾಗಿದ್ರೆ ದಿನಕ್ಕೆ ನೂರು ಪುಟ ಬರೆದರೂ ಸಾಲದು , ಅಷ್ಟಿದೆ ಬರೆಯುವುದು..
ಆದರೆ ಹೃದಯದ ನೋವು ಸಹಿಸಲಾರದ್ದು , ನೆನಪುಗಳ ನೆನೆದಷ್ಟು ನೋವು ಜೋರಾಗುವುದು…ನೆನಪುಗಳ ಜೋಡಿಸುವುದು ಅಕ್ಷರಗಳ ಇಳಿಸಿದಷ್ಟು ಸುಲಭವಲ್ಲ..
– ನಿಹಾರಿಕಾ ರಾವ್
Author Special : Assembling memories is not easy..!!